ಆಪರೇಷನ್ ನಡೆಸುವ ಕೊಠಡಿಗೆ ಥಿಯೇಟರ್ ಎಂದು ಕರೆಯುತ್ತಾರೆ? ಥಿಯೇಟರ್ ಎಂದು ಕರೆಯಲು ಕಾರಣ ಏನು?

ಥಿಯೇಟರ್ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ಸಿನೆಮಾ ಥಿಯೇಟರ್. ಎಲ್ಲರಿಗೂ ಗೊತ್ತಿರುವ ಎಲ್ಲರೂ ಹೋಗಿರುವ ಜಾಗ ಇದು. ಥಿಯೇಟರ್ ಎಂಬ ಪದದ ಅರ್ಥವೇ ಅದೇ ನೋಡಿ ಎಲ್ಲರೂ ಬಂದು ಸೇರಿ ಕೂತು ನೋಡುವ ಜಾಗಕ್ಕೆ ಥಿಯೇಟರ್ ಎಂದು ಕರೆಯುತ್ತಾರೆ. ಆ ಜಾಗದಲ್ಲಿ ಸಿನೆಮಾ ತೋರಿಸಿದರೆ ಅದು ಸಿನೆಮಾ ಥಿಯೇಟರ್ ಆಗುತ್ತದೆ. ಹಾಗೆಯೇ ಈ ಒಂದು ಆಪರೇಷನ್ ಥಿಯೇಟರ್ ಎನ್ನುವ ಪದ ಎಲ್ಲರ ಗಮನ ಸೆಳೆಯುತ್ತದೆ.

ಆಸ್ಪತ್ರೆ ಒಂದರಲ್ಲಿ ಬರಿ ಡಾಕ್ಟರ್ ಮತ್ತು ನರ್ಸ್ ಗಳು ಸೇರಿ ಮಾಡುವ ಆಪರೇಷನ್ ರೂಂ ಗೆ ಆಪರೇಷನ್ ಥಿಯೇಟರ್ ಎಂದು ಕರೆಯಲು ಕಾರಣ ಏನು? ಅದನ್ನು ಆಪರೇಷನ್ ರೂಂ ಎನ್ನಬಹುದು ಅಲ್ಲವೇ? ಈ ಒಂದು ಯೋಚನೆ ನಿಮಗೆ ಬಂದಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಹಿಂದಿನ ಕಾಲದಲ್ಲಿ ಬ್ರಿಟಿಷರು ಆಪರೇಷನ್ ನಡೆಯುವ ಕೊನೆಯಲ್ಲಿ ಎಲ್ಲಾ ನರ್ಸಿಂಗ್ ಸ್ಟಾಫ್ ಗಳು ಮತ್ತು ಡಾಕ್ಟರ್ ಕಲಿಯುವ ವಿಧ್ಯಾರ್ಥಿಗಳು ಆಪರೇಷನ್ ಮಾಡುವುದನ್ನು ಕೂತು ನೋಡಲು ವ್ಯವಸ್ಥೆ ಇತ್ತು. ಹೌದು ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ.

ಆಪರೇಷನ್ ಕೋಣೆಯೊಳಗೆ ಮೇಲ್ಚಾವಣಿ ಮಾದರಿಯ ವ್ಯವಸ್ಥೆ ಇದ್ದು ಅಲ್ಲಿ ಕೂತು ಎಲ್ಲರೂ ನೋಡುವ ಅವಕಾಶ ಇತ್ತು. ಇಲ್ಲಿ ಬರಿ ವಿಧ್ಯಾರ್ಥಿಗಳು ಮತ್ತು ಡಾಕ್ಟರ್ ಗಳಿಗೆ ಮಾತ್ರ ಈ ಒಂದು ಅವಕಾಶ ನೀಡಲಾಗಿತ್ತು. ಆ ಒಂದು ಕಾರಣಕ್ಕೆ ಹುಟ್ಟಿಕೊಂಡ ಪದವೇ ಈ ” ಥಿಯೇಟರ್” ಎಂಬುವುದು. ಎಲ್ಲಾ ಜನರು ಕೂತು ಆಪರೇಷನ್ ನೋಡಲು ಅವಕಾಶ ಇದ್ದ ಕಾರಣ ಇದನ್ನು ಆಪರೇಷನ್ ಥೇಟರ್ ಎಂದು ಕರೆಯಲಾಗುತ್ತಿತ್ತು. ಬದಲಾಗುತ್ತಿರುವ ಈ ಸಮಯದಲ್ಲಿ ಹಿಂದೆ ಬಳಸುತ್ತಿದ್ದ ಪದಗಳು ಯಾತಕ್ಕಾಗಿ ಬಳಸುತ್ತಿದ್ದರು ಎಂಬ ಮಾಹಿತಿ ಇರಲಿ ಎಂಬ ಉದ್ದೇಶದಿಂದ ಇದನ್ನು ಹಂಚಲಾಗಿದೆ.

Comments (0)
Add Comment