ಇಂದು ಆಚರಿಸುವ ಶುಕ್ಲ ಏಕಾದಶಿಯನ್ನು ಮೋಕ್ಷದ ಏಕಾದಶಿ ಎಂದು ಕರೆಯುತ್ತಾರೆ ಯಾಕೆ?

ಧರ್ಮ ಮತ್ತು ಆಚರಣೆಗಳು ಎಂಬುದು ನಮ್ಮ ಹಿಂದೂ ಸಂಸ್ಕೃತಿಯ ಒಂದು ಭಾಗ. ಧರ್ಮ ಒಂದು ಇಲ್ಲದೆ ಹೋಗಿದ್ದರೆ ಹಿಂದೂ ಧರ್ಮ ಯಾವಾಗಲೋ ಛಿ-ದ್ರ ಛಿ-ದ್ರವಾಗಿ ಹೋಗುತ್ತಿತ್ತು. ಹಿಂದೂ ಎಂಬ ಒಂದು ಪದವೇ ಇಂದು ಕೂಡ ಒಂದು ಒಗ್ಗಟ್ಟನ್ನು ತೋರುತ್ತದೆ. ಅಂತಹ ಆಚರಣೆಗಳಲ್ಲಿ ಒಂದು ಏಕಾದಶಿ ಹೌದು. ಇದು ಕೃಷ್ಣ ಮತ್ತು ಶುಕ್ಲ ಪಕ್ಷ ಮಾಸದ ಎರಡು ಚಂದ್ರ ಚಕ್ರಗಳ ಹನ್ನೊಂದನೇ ದಿನದಂದು ನಡೆಯುತ್ತದೆ. ಆಧ್ಯಾತ್ಮಿಕವಾಗಿ, ಏಕಾದಶಿ ಐದು ಇಂದ್ರಿಯಗಳು, ಐದು ಕ್ರಿಯಾ ಅಂಗಗಳು ಮತ್ತು ಒಂದು ಮನಸ್ಸನ್ನು ಒಳಗೊಂಡಿರುವ ಹನ್ನೊಂದು ಇಂದ್ರಿಯಗಳನ್ನು ಸಂಕೇತಿಸುತ್ತದೆ.

ಆದರೆ ಇಂದಿನ ಏಕಾದಶಿ ಬಹಳ ಪೂಜನೀಯ. ಯಾಕೆಂದರೆ ಇಂದು ನಡೆಯುವುದು ಮೋಕ್ಷದ ಏಕಾದಶಿ. ನಿಮಗೂ ಕುತೂಹಲ ಮೂಡಬಹುದು , ಏನಿದು ಮೋಕ್ಷದ ಏಕಾದಶಿ ಎಂದು. ಅದಕ್ಕೆಲ್ಲ ಉತ್ತರ ಮುಂದಕ್ಕೆ ಇದೆ ಓದಿರಿ.ಧರ್ಮಗಳ ಎಲ್ಲೆಗಳ ಮೀರಿ ಜೀವನದ ದಾರಿಯನ್ನು ತೋರಿಸಿಕೊಡುವ ಗ್ರಂಥ ಒಂದು ಇದೆ , ಹೌದು ಅದೇ ಭಗವದ್ಗೀತೆ. ಅದೆಷ್ಟೋ ದಾರಿ ತಪ್ಪಿದ ಜನರನ್ನು ಸರಿ ದಾರಿಯಲ್ಲಿ ಹೋಗುವಂತೆ ಮಾಡಿದ ಗ್ರಂಥ ಇದು. ಧರ್ಮ ಜಾತಿ ಎಂಬ ಎಲ್ಲೆಗಳನ್ನು ಮೀರಿ ನಿಂತಿರುವ ಗ್ರಂಥ ಇದು. ಕೇವಲ ಭಾರತ ಅಲ್ಲದೇ ಇಡೀ ವಿಶ್ವದಲ್ಲೇ ಇದನ್ನು ಪೂಜನೀಯ ಎಂದು ಪರಿಗಣಿಸಲಾಗುತ್ತದೆ.

ಹಾಗಾದರೆ ಈ ಭಗವದ್ಗೀತೆ ಮತ್ತು ಇಂದಿನ ಏಕಾದಶಿಗೆ ಏನು ಸಂಬಂಧ ಇದೆ ಎಂದು ನೀವು ಯೋಚಿಸಬಹುದು. ಖಂಡಿತಾ ಇದೆ , ಈ ದಿನದಂದೆ ಭಗವಾನ್ ಶ್ರೀ ಕೃಷ್ಣ ಪಾಂಡು ಪುತ್ರ ಅರ್ಜುನನಿಗೆ ಭಗವದ್ಗೀತೆ ಬೋಧಿಸಿದ ದಿನ. ಹೌದು ಸಂಸಾರ ಎಂಬ ಜಂಜಾಟದಲ್ಲಿ ಸಿಲುಕಿ ಮನಸಿನ ತೊಳಲಾಟದಿಂದ ನರ-ಳಾಡುತ್ತಿದ್ದ ಅರ್ಜುನನಿಗೆ ಧರ್ಮದ ಪಾಠವನ್ನು ಬೋಧಿಸಿದ ದಿನ ಇಂದು. ಅದಕ್ಕಾಗಿಯೇ ಈ ದಿನವನ್ನು ಮೋಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ.

Comments (0)
Add Comment