ಈ ವ್ಯಕ್ತಿಗೆ ಜನರು ದೇವರ ಸ್ಥಾನ ಕೊಟ್ಟಿದ್ದಾರೆ. ಏಕೆ ಇವರು ಅತರಹದ ಕೆಲಸವೇನು ಮಾಡಿದ್ದಾರೆ?

ಜೀವನದಲ್ಲಿ ಮನುಷ್ಯನಾಗಿ ಹುಟ್ಟಿದ ಮೇಲೆ ಆ ಜೀವನ ಸಾರ್ಥಕತೆ ಕಾಣಬೇಕು. ಇಲ್ಲವಾದರೆ ಮನುಷ್ಯನಾಗಿ ಹುತ್ತಿರುವುದು ವ್ಯರ್ಥ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಆದಷ್ಟು ಮತ್ತೊಬ್ಬರ ಒಳಿತಿಗಾಗಿ ದುಡಿಯಬೇಕು. ಆಸ್ತಿ ಹಣ ಬೇಕು ಆದರೆ ಲೆಕ್ಕಕ್ಕಿಂತ ಹೆಚ್ಚಾಗಿ ಮತ್ತೊಬ್ಬರ ಹೊಟ್ಟೆ ಹೊಡೆದು ಸಂಪಾದಿಸುವ ಹಣ ಆಸ್ತಿ ನಮ್ಮ ಕಷ್ಟ ಕಾಲಕ್ಕೆ ಕೈಗೆ ಸಿಗುವುದಿಲ್ಲ. ಅದೆಷ್ಟೋ ಮಹಾನ್ ವ್ಯಕ್ತಿಗಳು ನಮ್ಮ ನಿಮ್ಮೆಲ್ಲರ ನಡುವೆ ಈಗಲೂ ಇದ್ದಾರೆ, ಹಣದ ಆಸೆಗೆ ಹೋಗದೆ ಜನ ಸೇವೆಯೊಂದು ಮುಖ್ಯ ಎಂದು ಕೆಲಸ ಮಾಡುವವರು. ಅಂತಹುದೇ ಒಬ್ಬರು ವ್ಯಕ್ತಿ ಯ ಬಗ್ಗೆ ನಾವಿಂದು ತಿಳಿಯೋಣ.

ಇವರ ಹೆಸರು ರಾಮಾನಂದ ಸಿಂಹ, ಇವರು ಪಾಟ್ನಾ ದಿಂಡ 100ಕಿಮೀ ದೂರ ಇರುವ ಶೇಕ್ ಪುರ ಜಿಲ್ಲೆಯವರು. ವೃತ್ತಿಯಲ್ಲಿ ಡಾಕ್ಟರ್ ಕೆಲಸ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆ ಎಂಬುವುದು ವ್ಯಾಪಾರ ಆಗಿ ಹೋಗಿದೆ. ಹಣ ಇದ್ದವರೆಲ್ಲ ಆಸ್ಪತ್ರೆ ಶಾಲೆ ಕಾಲೇಜು ಕಟ್ಟಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಜನರ ಜೀವಕ್ಕೆ ಬೆಲೆ ಇಲ್ಲ ಎಂಬ ರೀತಿಯ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಹಣದ ಹೊಳೆ ಹರಿಸಿದರು ಜೀವಕ್ಕೆ ಬೆಲೆ ಇಲ್ಲಬ ಮಟ್ಟಕ್ಕೆ ತಲುಪಿದೆ. ಅಂತಹವರ ಮದ್ಯೆ ವೈದ್ಯೋ ನಾರಾಯಣೋ ಹರಿಃ ಎಂಬ ವೇದ ವಾಕ್ಯ ಪಾಲಿಸುವ ಕೆಲವು ವೈದ್ಯರು ಇಂದಿಗೂ ಇರುವುದು ನಮ್ಮ ಪುಣ್ಯ.

ಡಾಕ್ಟರ್ ರಾಮಾನಂದ ಸಿಂಹ ಇಂತಹ ಡಾಕ್ಟರ್ ಗಳಲ್ಲಿ ಒಬ್ಬರು. ಸದಾ ತಮ್ಮ ಜೀವನವನ್ನು ಜನರ ಸೇವೆಗೆ ಮುದಿಪಾಗಿ ಇಟ್ಟವರು. ದಿನದ 18 ಘಂಟೆಗಳ ಕಾಲ ತಮ್ಮ ರೋಗಿಗಳ ಜೊತೆಗೆ ಕಾಲ ಕಳೆಯುತ್ತಾರೆ. ಬೇಕಾದಲ್ಲಿ 24 ಘಂಟೆಗಳ ಕಾಲವು ಇವರು ತಮ್ಮ ರೋಗಿಗಳಿಗೆ ಲಭ್ಯ ಇರುತ್ತಾರೆ. ಏನೇ ಸಂಸ್ಥೆ ಎಂದರೂ ಅದು ಸಮಯ ನೋಡದೆ ಎದ್ದು ಬರುತ್ತಾರೆ. 68 ವರ್ಷದ ಇವರು ತರುಣ ಹುಡುಗನಂತೆ ಕೆಲಸ ಮಾಡುತ್ತಾರೆ. ಅವರಿಗೆ ಅದರಲ್ಲೇ ಏನೋ ಖುಷಿ ಎಂದು ಅವರು ಹೇಳುತ್ತಾರೆ.

ಅವರು ಹೇಳುವ ಹಾಗೆ ಎಲ್ಲರೂ ಡಾಕ್ಟರ್ ಕಲಿತು ದೊಡ್ಡ ದೊಡ್ಡ ಪೇಟೆಗೆ ಹೋದರು ನಾನೊಬ್ಬ ಜನರ ಸೇವೆ ಮಾಡಬೇಕು ಎಂದು ಇಲ್ಲೇ ಕುಳಿತೆ. ಆರಂಭದಲ್ಲಿ ನನ್ನ ದರ 5 ರೂಪಾಯಿ ಇತ್ತು, ಕಾಲ ಕ್ರಮೇಣವಾಗಿ 15,20,30 ಈಗ 50 ರೂಪಾಯಿಯಲ್ಲಿ ಚಿಕಿತ್ಸೆ ಕೊಡುತ್ತೇನೆ. ದಿನಕ್ಕೆ 150 ರಿಂದ 200 ರೋಗಿಗಳು ಬರುತ್ತಾರೆ. ಎಲ್ಲರಿಗೂ ವೈದ್ಯೆ ನೋಡಿಯೇ ಮನೆಗೆ ಹೋಗುವುದು ಎನ್ನುತ್ತಾರೆ. ಇದೆ ಕಾರಣಕ್ಕೆ ಅವರ ಬಳಿ ಬರುವ ರೋಗಿಗಳು ಇವರು ದೇವರ ಸಮಾನ ನಮಗೆ .ಈ ಕಾಲದಲ್ಲಿ 50 ರೂಪಾಯಿಗೆ ಏನು ಬರುವುದಿಲ್ಲ ಆದರೂ ಮಾನವೀಯ ದೃಷ್ಟಿಯಿಂದ ಈ ಕೆಲಸ ಮಾಡುತ್ತಿರುವ ನಿಮಗೆ ಒಳಿತಾಗಲಿ ಇನ್ನಷ್ಟು ಜನ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದು ಹಾರೈಸುತ್ತೇವೆ.

Comments (0)
Add Comment