ಏಟಿಎಂ ನಿಂದ ಕಾರ್ಡ್ ಇಲ್ಲದೆಯೂ ಹಣ ತೆಗೆಯುವ ಸೌಲಭ್ಯ ತರಲಿದೆ ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ. ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತ?

ಡಿಜಿಟಲ್ ಇಂಡಿಯಾ ದಲ್ಲಿ ಭಾರತ ತನ್ನ ದಾಪುಗಾಲು ಹಾಕುತ್ತಿದೆ. ಭಾರತದ ತನ್ನ ಸ್ವಂತ ರುಪಯ್ ಕಾರ್ಡ್ ಮೂಲಕ ವಿದೇಶಿ ಮಾಸ್ಟರ್ ಕಾರ್ಡ್ ಹಾಗು ವೀಸಾ ಕಾರ್ಡ್ ಗಳಿಗೆ ಠಕ್ಕರ್ ನೀಡಿದೆ. ರುಪಯ್ಇಂ ಕಾರ್ಡ್ ಇಂದು ಅತಿ ಕಡಿಮೆ ಕಮಿಷನ್ ಪಡೆಯುವ ಮೂಲಕ ವಿದೇಶಿ ಕಾರ್ಡ್ ಕಂಪನಿಗಳ ತಾಳಕ್ಕೆ ಭಾರತೀಯ ಬ್ಯಾಂಕ್ ಗಳು ಕುಣಿಯುವುದನ್ನು ನಿಲ್ಲಿಸಿದೆ. ಅದೇ ರೀತಿ ಭಾರತದ UPI ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದೆ. ಇದೀಗ ನೇಪಾಳದಲ್ಲೂ UPI ಕೆಲಸ ಮಾಡಲಿದೆ.

ಇದೆಲ್ಲ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಮೆಟ್ಟಿಲುಗಳಾಗಿವೆ. ಇದೀಗ ರೆಸೆರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಡಿಜಿಟಲ್ ಐಡಿಯಾ ದೊಂದಿಗೆ ಬಂದಿದೆ ಅದೇ ಏಟಿಎಂ ಕಾರ್ಡ್ ಇಲ್ಲದೆ ಏಟಿಎಂ ಮಷೀನ್ ಇಂದ ಹಣ ತೆಗೆಯಬಹುದಾಗಿದೆ. ಇದನ್ನು ಈಗಾಗಲೇ ಪ್ರಸ್ತಾಪನೆ ಮಾಡಲಾಗಿದೆ. ಈಗಾಗಲೇ ಕೇವಲ ಕೆಲವು ಬ್ಯಾಂಕ್ ಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ. ಈ ಸೌಲಭ್ಯ ಎಲ್ಲರಿಗು ಎಲ್ಲ ಬ್ಯಾಂಕ್ ಗಳಿಗೂ ವಿಸ್ತರಿಸಲು RBI ಚಿಂತನೆ ನಡೆಸಿದೆ.

ವಹಿವಾಟುಗಳ ಸುಲಭತೆ ಹೆಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಇದರಿಂದ ಕಾರ್ಡ್ ಕ್ಲೋನಿಂಗ್ ಕಾರ್ಡ್ ಸ್ಕೀಮಿಂಗ್ ನಂತಹ ಮೋಸ ಮಾಡುವವರಿಂದ ಜನರಿಗೆ ತುಸು ಸಹಾಯವಾಗಲಿದೆ. ಇದು ಈಗಾಗಲೇ ನಾವು ಮೊಬೈಲ್ ಮೂಲಕ ಹಣ ಇನ್ನೊಬ್ಬರಿಗೆ ಕಳಿಸುವ ಮಾಧ್ಯಮವಾದ UPI ಮೂಲಕ ಕೆಲಸ ಮಾಡುತ್ತದೆ. ಅದೇ ರೀತಿ ಇದಕ್ಕೆ ನಿಮ್ಮ ಅಧಿಕೃತ ಮೊಬೈಲ್ ನಂಬರ್ ಕೂಡ ಬೇಕಾಗುತ್ತದೆ. ಇದಕ್ಕೆ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯತೆ ಇರುವುದಿಲ್ಲ. ಇದು ಕೂಡ ದೈನಂದಿನ ೧೦೦೦೦-೨೫೦೦೦ ರದ ಮಿತಿಯಲ್ಲಿ ಹಣ ವಿಥ್ಡ್ರಾವಲ್ ಮಾಡಬಹುದಾಗಿದೆ.

Comments (0)
Add Comment