ಚಲಿಸುತ್ತಿರುವ ರೈಲಿನಿಂದ ನಿಮ್ಮ ಮೊಬೈಲ್ ಬಿದ್ದಾಗ ಏನು ಮಾಡಬೇಕು ಗೊತ್ತೇ? ಹೀಗೆ ಮಾಡಿದರೆ ನಿಮ್ಮ ಮೊಬೈಲ್ ನಿಮಗೆ ಸಿಗುತ್ತದೆ?

ಮೊಬೈಲ್ ಎಂದರೆ ಯಾರಿಗೆ ತಾನೆ ಬೇಡ ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ಮೊಬೈಲ್ ಬಳಕೆ ಮಾಡುತ್ತೇವೆ. ಅದೊಂಥರಾ ಗೀಳು ಹಿಡಿದ ಹಾಗೆ ಆಗಿ ಹೋಗಿದೆ. ಮೊಬೈಲ್ ಕಳೆದು ಹೋದರಂತೂ ಹೇಳುವುದೇ ಬೇಡ ಅದರಷ್ಟು ತಲೆಬಿಸಿ ಮತ್ಯಾವುದೋ ಇಲ್ಲ. ಹಾಗಾದರೆ ನೀವು ರೈಲಿನಲ್ಲಿ ಸಂಚರಿಸುವಾಗ ಅಚಾನಕ್ ಆಗಿ ನಿಮ್ಮ ಕೈಯಿಂದ ಮೊಬೈಲ್ ಬಿದ್ದರೆ ಏನು ಮಾಡಬೇಕು ? ರೈಲ್ವೆ ಚೈನ್ ಎಳೆಯಬಾರದು ಹಾಗಾದರೆ ಮತ್ತೇನು ಮಾಡಬೇಕು ಬನ್ನಿ ತಿಳಿಯೋಣ.

ಅದೆಷ್ಟೋ ಜನರು ತಮ್ಮ ಖುಷಿ ಬಂದ ಹಾಗೆ ರೈಲ್ವೆ ಚೈನ್ ಎಳೆದ ಹಲವಾರು ಘಟನೆ ಇದೆ. ಇದರಿಂದಾಗಿ ರೈಲ್ವೆ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತದೆ. ಇದನ್ನು ತಪ್ಪಿಸಲು ಈಗ ಹಾಗೇನಾದರೂ ರೈಲ್ವೆ ಚೈನ್ ಎಳೆದರೆ ದಂಡ ಕಟ್ಟಿಟ್ಟ ಬುತ್ತಿ ಹಾಗೆ 1 ವರ್ಷದ ವರೆಗೆ ಜೈಲು ಕೂಡ ಆಗಬಹುದು. ಹಾಗಾದರೆ ಸಂಚರಿಸುವಾಗ ನಿಮ್ಮ ಮೊಬೈಲ್ ಏನಾದರೂ ರೈಲಿನಿಂದ ಕೆಳಗೆ ಬಿದ್ದರೆ ಹೀಗೆ ಮಾಡಿ.

ಯಾವ ರೈಲ್ವೆ ಸ್ಟೇಷನ್ ವ್ಯಾಪ್ತಿ ಎಂದು ನೆನಪಿಟ್ಟು ಕೊಳ್ಳಿ. ಹಾಗೆ ರೈಲ್ವೆ ಪಟ್ಟೆಯ ಪಕ್ಕದಲ್ಲಿ ಎಲೆಕ್ಟ್ರಿಕ್ ಕಂಬಗಳು ಇರುತ್ತವೆ. ಇದರಲ್ಲಿ ಒಂದೊಂದು ನಂಬರ್ ಅನ್ನು ನಮೂದಿಸಿ ಇರುತ್ತಾರೆ. ಮುಂದೆಂದಾದರೂ ಇಂತಹ ಸನ್ನಿವೇಶ ಎದುರಾದರೆ ನೀವು ಮೊದಲು ಆ ನಂಬರ್ ನೆನಪಿಟ್ಟುಕೊಂಡೂ ರೈಲ್ವೆ ಹೆಲ್ಪ್ ಲೈನ್ ಗೆ ಕಾಲ್ ಮಾಡಿದರೆ ನಿಮ್ಮ ಮೊಬೈಲ್ ಬಿದ್ದ ಜಾಗದಿಂದ ವಶಕ್ಕೆ ಪಡೆಯುತ್ತಾರೆ. ನೀವು ಮುಂದಕ್ಕೆ ಗುರುತು ಹೇಳಿ ಅದನ್ನು ಪಡೆದು ಕೊಳ್ಳಬಹುದು. ಆದರೆ ಯಾರಾದ್ರೂ ಅಷ್ಟರ ಒಳಗೆ ಅದನ್ನು ಎಗರಿಸಿದರೆ ಅದಕ್ಕೆ ಯಾರು ಹೊಣೆ ಆಗುವುದಿಲ್ಲ . ಬದಲಾಗಿ ಇಲಾಖೆ ತನ್ನ ಕೈಲಾದ ಎಲ್ಲಾ ಕೆಲಸ ಮಾಡುತ್ತದೆ.

Comments (0)
Add Comment