ಜಿಯೋ ಬಳಕೆದಾರರು ಇನ್ನು ಮುಂದೆ ವಾಟ್ಸಾಪ್ ನಲ್ಲೂ ರಿಚಾರ್ಜ್ ಮಾಡಬಹುದು. ಇಲ್ಲಿದೆ ಜಿಯೋ ಗ್ರಾಹಕರಿಗೆ ಸಿಗುವ EXCLUSIVE ಆಫರ್?

ರಿಲೈಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಲಿದೆ. ವಾಟ್ಸಾಪ್ ಜೊತೆ ಸಹಯೋಗದೊಂದಿಗೆ ಉತ್ತಮ ಸೇವೆ ನೀಡಲು ತಯಾರಾಗಿದೆ ಜಿಯೋ. ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ಹಾಗು ವಿಶ್ವದ ಅತಿ ದೊಡ್ಡ ಮೆಸ್ಸೆಂಜರ್ ವಾಟ್ಸಾಪ್ ಅಲ್ಲಿ ಜಿಯೋ ಸಿಮ್ ನ ರಿಚಾರ್ಜ್ ಸೌಲಬ್ಯ ದೊರಕಿಸಿ ಕೊಡಲಿದೆ. ಇದು ಮಾತ್ರ ಅಲ್ಲದೆ ಜಿಯೋ ಗ್ರಾಹಕರು ಇನ್ನು ಮುಂದೆ ವಾಟ್ಸಾಪ್ ಅಲ್ಲಿಯೇ ತರಕಾರಿ ಹಾಗು ದಿನಸಿಗಳನ್ನು ಖರೀದಿ ಮಾಡುವ ಸೌಲಭ್ಯ ಕೂಡ ಒದಗಿಸಲಿದೆ ರಿಲಯನ್ಸ್ ಜಿಯೋ ಹಾಗು ವಾಟ್ಸಾಪ್.

ಮೆಟಾ ಅಂದರೆ ಹಿಂದಿನ ಫೇಸ್ಬುಕ್ ಸಂಸ್ಥೆ ಫ್ಯುಯೆಲ್ ಫಾರ್ ಇಂಡಿಯಾ ೨೦೨೧ ಎನ್ನುವ ಇವೆಂಟ್ ಒಂದನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ರಿಲಯನ್ಸ್ ನ ಆಕಾಶ್ ಅಂಬಾನಿ ಜಿಯೋ ಮಾರ್ಟ್ ಹಾಗು ವಾಟ್ಸಾಪ್ ನ ಪಾಲುದಾರಿಕೆ ಕುರಿತಾಗಿ ಹೇಳಿದ್ದಾರೆ. ಇನ್ನು ಮುಂದೆ ವಾಟ್ಸಪ್ಪ್ ಅಲ್ಲಿ ಸಂದೇಶ ಕಲಿಸುವ ರೀತಿಯಲ್ಲೇ ಜಿಯೋ ಮಾರ್ಟ್ ಇಂದ ವಸ್ತುಗಳನ್ನು ಖರೀದಿಸುವ ಹೊಸ ಸೌಲಭ್ಯ ದ ಕುರಿತು ಹೇಳಿದ್ದಾರೆ. ಇದೊಂದು ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಎಂದು ಕೂಡ ತಿಳಿಸಿದ್ದಾರೆ.

ಇದೆ ಸಂದರ್ಭದಲ್ಲಿ ವಾಟ್ಸಾಪ್ ನಲ್ಲಿ ಜಿಯೋ ರಿಚಾರ್ಜ್ ಒಂದು ವಿಧಾನವಾಗಿದೆ. ಇದರಿಂದ ಪ್ರಿಪೇಯ್ಡ್ ರಿಚಾರ್ಜ್ ಸೇವೆಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಇದು ಗ್ರಾಹಕರಿಗೆ ಹಿಂದೆಂದೂ ಕೇಳದ ಅವಕಾಶಗಳನ್ನು ತರಲಿದೆ. ಈ ಸೇವೆ ೨೦೨೨ ರಲ್ಲಿ ಪ್ರಾರಂಭಿಸಲಾಗುತ್ತದೆ ಇದು ಹಿರಿಯವಯಸ್ಸಿನವರಿಗೆ ಅತ್ಯಂತ ಹೆಚ್ಚು ಅನುಕೂಲವಾಗಲಿದೆ. ಅಲ್ಲದೆ ಇದನ್ನು ಅತ್ಯಂತ ಸರಳ ರೀತಿಯಲ್ಲಿ ಕಾರ್ಯ ನಿರ್ವಹಿಸುವತ್ತ ಎರಡು ಕಂಪನಿಗಳು ಕೆಲಸ ಮಾಡುತ್ತಿದೆ ಎಂದು ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಹೇಳಿದ್ದಾರೆ. ಇಂದು ಅತಿ ಹೆಚ್ಚು ಬಳಸುವ ವಾಟ್ಸಾಪ್ ಎನ್ನುವ ಸಾಮಾಜಿಕ ಜಾಲತಾಣ ಹಾಗು ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಒಟ್ಟು ಸೇರಿ ಇನೊಂದು ಹೊಸ ಕ್ರಾಂತಿ ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

facebookJIOMETA
Comments (0)
Add Comment