ಟ್ವಿಟ್ಟರ್ ಖರೀದಿ ಮಾಡಿದ ಎಲಾನ್ ಮುಸ್ಕ್. ಭಾರತ ಮೂಲದ ಟ್ವಿಟ್ಟರ್ CEO ಪರಾಗ್ ಅಗರ್ವಾಲ್ ಗೆ ಎಷ್ಟು ಹಣ ಸಿಗಲಿದೆ ಗೊತ್ತೇ. ಇವರದ್ದು ಅದೃಷ್ಟ.

ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಒಂದು. ಅನೇಕರು ವಿಶ್ವದಾದ್ಯಂತ ಬಳಸುತ್ತಿರುವ ಒಂದು ಸಂವಹನ ಮಾಧ್ಯಮ. ಈ ಟ್ವಿಟ್ಟರ್ ಅನ್ನು ಎಡಪಂತೀಯ ಎಂದು ಇಲ್ಲಿಯವರೆಗೆ ಕರೆಯಲಾಗುತಿತ್ತು. ಅದಕ್ಕೆ ತಕ್ಕ ರೀತಿ ಕೂಡ ಇದು ನಡೆದುಕೊಂಡಿತ್ತು. ಭಾರತ ಸರಕಾರದ ಮಂತ್ರಿ ಯಾ ಖಾತೆಯನ್ನೇ ಸಸ್ಪೆಂಡ್ ಮಾಡಿದ್ದ ಸಂಸ್ಥೆ. ಅದೆಲ್ಲ ಏನು ಇಲ್ಲ, ಅಮೇರಿಕಾದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಮುಚ್ಚಿದ್ದ ಸಂಸ್ಥೆ ಅಂದರೆ ಅದು ಟ್ವಿಟ್ಟರ್. ಇದೀಗ ವಿಶ್ವದ ನಂಬರ್ ೧ ಶ್ರೀಮಂತ, ಬಿಸಿನೆಸ್ ಮ್ಯಾನ್ ಖರೀದಿ ಮಾಡಿದ್ದಾರೆ.

ಇತ್ತೀಚಿಗೆ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ ಟ್ವಿಟ್ಟರ್ ನ ಮಾಜಿ ಸಹ ಸಂಸ್ಥಾಪಕ ಜಾಕ್ ಡೊರ್ಸೆಯ್ ನಂತರ ಭಾರತ ಮೂಲದ ಪರಾಗ್ ಅಗರ್ವಾಲ್ ಟ್ವಿಟ್ಟರ್ CEO ಆಗಿ ನೇಮಕ ಗೊಂಡರು. ಇವರ ನೇಮಕ ಆಗಿ ೧ ವರ್ಷ ಕೂಡ ಆಗಿಲ್ಲ. ಅದಕ್ಕಿಂತ ಮೊದಲೇ ಎಲಾನ್ ಮುಸ್ಕ್ ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ತಗೊಂಡಿದ್ದಾರೆ. ಒಂದು ವೇಳೆ ಮುಸ್ಕ್ ಅಗರ್ವಾಲ್ ಅವರನ್ನು ತೆಗೆದು ಹಾಕಿದರೆ ಟ್ವಿಟ್ಟರ್ ಪರಾಗ್ ಅವರಿಗೆ ಸುಮಾರು ೪೨ ಮಿಲಿಯನ್ ಡಾಲರ್ ಅಂದರೆ ೩.೨ ಶತಕೋಟಿ ರೂಪಾಯಿ ಕೊಡಬೇಕಾಗುತ್ತದೆ.

ಎಲಾನ್ ಮುಸ್ಕ್ ಹಾಗು ಟ್ವಿಟ್ಟರ್ ಸಂಸ್ಥೆ ಒಪ್ಪಂದದ ಬಳಿಕ ಪರಾಗ್ ಅಗರ್ವಾಲ್ ಟ್ವಿಟ್ಟರ್ ನ ಭವಿಷ್ಯ ಅನಿಶ್ಚಿತವಾಗಿದೆ. ಮುಂದೆ ಟ್ವಿಟ್ಟರ್ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಟ್ವಿಟ್ಟರ್ ಒಂದು ಉದ್ದೇಶ ಹೊಂದಿದೆ ಹಾಗೇನೇ ಉಪಯುಕ್ತ ಸಾಧನವಾಗಿದೆ. ಅದೇ ಕಾರಣಕ್ಕಾಗಿ ಇದು ಇಂದು ವಿಶ್ವದಲ್ಲಿಯೇ ಆವರಿಸಿಕೊಂಡಿದೆ. ನನ್ನ ತಂಡದ ಬಗ್ಗೆ ಹೆಮ್ಮೆ ಪಡುತ್ತೇನೆ ಹಾಗೇನೇ ಅವರ ಕೆಲಸದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಸಾರ್ವಜನಿಕ ಕಂಪನಿ ಆಗಿದ್ದ ಟ್ವಿಟ್ಟರ್ ಅಂದರೆ ಜನರ ಬಳಿ ಈ ಕಂಪನಿ ಶೇರ್ ಖರೀದಿ ಮಾಡುವ ಹಾಕಿತ್ತು, ಇದೀಗ ಎಲಾನ್ ಮುಸ್ಕ್ ಕಂಪನಿ ಪಡೆದುಕೊಂಡ ಬಳಿಕ ಇದೊಂದು ಪ್ರೈವೇಟ್ ಸೊತ್ತು ಆಗಿರುತ್ತದೆ. ಕೇವಲ ಎಲಾನ್ ಮುಸ್ಕ್ ಮಾತ್ರ ಇದರ ಓನರ್ ಆಗಿರುತ್ತಾರೆ. ಯಾರೆಲ್ಲ ಬಳಿ ಶೇರ್ ಇದೆಯೋ ಅವರಿಗೆಲ್ಲ ಇಂದಿನ ಮಾರ್ಕೆಟ್ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಅವರಿಂದ ಶೇರ್ ಎಲಾನ್ ಮುಸ್ಕ್ ಖರೀದಿ ಮಾಡುತ್ತಿದ್ದಾರೆ.

ಮುಸ್ಕ್ ಟ್ವಿಟ್ಟರ್ ನ ಕೆಲಸಗಾರರಿಗೆ ಸಂಬಳ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ತರ ಮಾಡಿದರೆ ಕಂಪನಿ ಗೆ ಪ್ರತಿ ವರ್ಷ ೩ ಮಿಲಿಯನ್ ಡಾಲರ್ ಉಲಿತತಯವಾಗುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಟ್ವಿಟ್ಟರ್ ಮಂಡಳಿಗೆ ಮೇಲೆ ಮುಸ್ಕ್ ಗೆ ನಂಬಿಕೆ ಇಲ್ಲ ಎಂದು ಕೂಡ ಹೇಳಿದ್ದಾರೆ. ಮುಸ್ಕ್ ವಾಕ್ ಸ್ವಾತಂತ್ರ್ಯ ದ ಬಗ್ಗೆ ಮಾತನಾಡುತ್ತ, ಫ್ರೀ ಸ್ಪೀಚ್ ಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಹೇಳಿದ್ದಾರೆ. ಇದೆ ಕಾರಣಕ್ಕೆ ಟ್ವಿಟ್ಟರ್ ಕೂಡ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಇಂದ ಡೊನಾಲ್ಡ್ ಟ್ರಂಪ್ ಕೂಡ ಟ್ವಿಟ್ಟರ್ ಗೆ ವಾಪಸಾಗುವುದು ಖಚಿತ ಎಂದರು ತಪ್ಪಾಗಲಾರದು.

Comments (0)
Add Comment