ದೈನಂದಿನ ಜೀವನದಲ್ಲಿ ಬಹಳ ಮುಖ್ಯವಾಗಿ ಗೊತ್ತಿರಬೇಕು ಈ ಕಾನೂನುಗಳು. ಇದರ ಬಗ್ಗೆ ನಿಮಗೆ ಗೊತ್ತಿದೆಯಾ? ಇಲ್ಲವಾದಲ್ಲಿ ತಿಳಿದುಕೊಳ್ಳಿ.

ನ್ಯಾಯ ಎಂಬುವುದು ಎಲ್ಲರಿಗೂ ಒಂದೇ, ಅದರಲ್ಲಿ ಯಾವುದೇ ರೀತಿಯ ಬೇಧ ಭಾವ ಇರುವುದಿಲ್ಲ. ನ್ಯಾಯಾಂಗ ವ್ಯವಸ್ಥೆ ಎಂಬುವುದು ಇದೆ, ಇದರ ಮೂಲಕ ನಾವು ನ್ಯಾಯ ಪಡೆದುಕೊಳ್ಳಬಹುದು. ಇಲ್ಲಿ ಯಾವುದೇ ರೀತಿಯ ಹಣ ಆಮಿಷ ಇರುವುದಿಲ್ಲ. ಆದರೆ ಬೆಳೆಯುತ್ತಿರುವ ಕೆಲ ಯುವ ಜನರು ಕಾನೂನಿನ ಅರಿವಿನ ಕೊರತೆ ಇದ್ದು ಕೆಲವೊಂದು ತಪ್ಪನ್ನು ಮಾಡುತ್ತಾರೆ. ಹಾಗಾದರೆ ಬೆಳೆಯುತ್ತಿರುವ ಯುವ ಜನತೆಗೆ ಈ ಕೆಲವೊಂದು ಕಾನೂನಿನ ಬಗ್ಗೆ ತಿಳಿದಿರಲೇ ಬೇಕು. ಹೌದು ಯಾವುದು ಇವು ಬನ್ನಿ ತಿಳಿಯೋಣ.

1. ಪೊಲೀಸರು ನಿಮ್ಮನ್ನು ರಸ್ತೆಯಲ್ಲಿ ಹಿಡಿದು ನಿಲ್ಲಿಸಿದಾಗ, ನಿಮ್ಮ ತಪ್ಪು ಇದೆ ಎಂದು ನಿಮಗೆ ಅರಿವಾದರೆ ಯಾವತ್ತೂ ಕೂಡ ಅವರ ಬಳಿ ಜಗಳ ಆಡಬೇಡಿ ಯಾಕಂದರೆ ಸ್ಥಳದಲ್ಲಿ ನಿಮ್ಮನ್ನು ಅರೆಸ್ಟ್ ಮಾಡುವ ಅಧಿಕಾರ ಪೊಲೀಸರಿಗೆ ಇದೆ.ಐಪಿಸಿ ಸೆಕ್ಷನ್ 353 ರ ಪ್ರಕಾರ ಕರ್ತವ್ಯಕ್ಕೆ ಅಡ್ಡಿ ಎಂಬ ಕೇಸ್ ಹಾಕಿ ಬಂಧಿಸುತ್ತಾರೆ. 2.ನೀವು ಮತ್ತು ನಿಮ್ಮ ಸ್ನೇಹಿತೆ ಖಾಸಗಿ ಆಗಿ ಹೋಗುವಾಗ ಯಾವುದೇ ಪೊಲೀಸರು ತಡೆದು ನಿಮ್ಮ ಮನೆಯವರ ನಂಬರ್ ಕೇಳಿದರೆ ಕೊಡಬೇಕು ಅಂತ ಇಲ್ಲ. 18ವರ್ಷ ದಾಟಿದ್ದರೆ ನಿಮ್ಮ ಖಾಸಗಿ ಸಮಯ ಕಳೆಯುವ ಹಕ್ಕು ನಿಮಗಿದೆ.

3.ಫೋಟೋ ಶೇರಿಂಗ್ ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ಸೋಶಿಯಲ್ ಮೀಡಿಯಾ ದಿಂದಾಗಿ ಇದು ಹೆಚ್ಚಾಗುತ್ತಿದೆ. ಹಿಗೆನಾದರು ನೀವು ಮಾಡಿ ಫೋಟೋ ವೈರಲ್ ಮಾಡಿದರೆ It ಆಕ್ಟ್ 67 ಮತ್ತು 67A ಅಡಿಯಲ್ಲಿ 3 ವರ್ಷಗಳ ವರೆಗೆ ಜೈಲು ಶಿಕ್ಷೆ ಅನುಭಿಸಬೇಕಾಗುತ್ತದೆ. ಇಂತಹ ತಪ್ಪು ಎಂದಿಗೂ ಮಾಡಬೇಡಿ. 4.ನಿಮ್ಮ ಆಫಿಸ್ ನಲ್ಲಿ ನಿಮಗೆ ರಜೆ ಕೊಡುತ್ತಿಲ್ಲ ಎಂದಾದರೆ ನೀವು ಕೋರ್ಟ್ ಮೆಟ್ಟಿಲು ಏರಬಹುದು. ವರ್ಷಕ್ಕೆ 12 ಕ್ಯಾಶುಯಲ್ ರಜೆ, 15ಮೆಡಿಕಲ್ ರಜೆ,10ಇತರ ರಜೆ ಇದೆ. ಇದನ್ನು ಕೊಡದೆ ಇದ್ದಲ್ಲಿ ನೀವು ಕೋರ್ಟ್ ಮೆಟ್ಟಿಲು ಹತ್ತಬಹುದು.

5.ಲಿವ್ ಇನ್ ರಿಲೇಶನ್ ನಲ್ಲಿ ಇರುವ ಜೋಡಿಗಳು ಕಾನೂನು ಪ್ರಕಾರ ಮಾನ್ಯ ಆಗಿರುತ್ತದೆ. ಇವರ ವಿರುದ್ದ ಯಾರೇ ಏನೇ ಅಂದರೂ ಅವರ ವಿರುದ್ಧ ಕೇಸ್ ಹಾಕುವ ಹಕ್ಕು ಲಿವ್ ಇನ್ ರಿಲೇಶನ್ ಜೋಡಿಗೆ ಇದೆ. ಲಿವ್ ಇನ್ ರಿಲೇಶನ್ ಸಂದರ್ಭದಲ್ಲಿ ಹುಟ್ಟುವ ಮಕ್ಕಳು ಕೂಡ ಕಾನೂನಿನ ಪ್ರಕಾರ ಮಾನ್ಯ ಇರುತ್ತದೆ. 6.ನಿಮ್ಮ ಮನೆಯಲ್ಲಿ ಸಿಲಿಂಡರ್ ಖರೀದಿ ಮಾಡುವಾಗ ಅದರ ಜೊತೆ ಇನ್ಸೂರೆನ್ಸ್ ಪಡೆದುಕೊಳ್ಳಿ. ಹೆಚ್ಚಿನ ಸಿಲಿಂಡರ್ ವಿತರಕರು ಇದರ ಬಗ್ಗೆ ಹೇಳುವುದಿಲ್ಲ. ಸಿಲಿಂಡರ್ ಸ್ಫೋಟದಿಂದ ಏನಾದರೂ ಆದರೆ 40ಲಕ್ಷದ ವರೆಗೆ ಪರಿಹಾರ ಸಿಗುತ್ತದೆ. ಈ ಎಲ್ಲಾ ಕಾನೂನುಗಳ ಬಗ್ಗೆ ಯುವ ಜನತೆ ತಿಳಿದಿರಬೇಕು. ಇತರರಿಗೂ ಇದರ ಅರಿವು ಮೂಡಿಸೋಣ . ಆದಷ್ಟು ಶೇರ್ ಮಾಡಿರಿ.

Comments (0)
Add Comment