ನಿಮ್ಮ ಹೆಸರಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಸಿಂ ಕಾರ್ಡ್ ಇದೆಯೇ ಹಾಗಾದರೆ ನೀವು ಅದನ್ನು ಕಳೆದು ಕೊಳ್ಳುವುದು ಖಚಿತ ಏನಿದು ವಿಷಯ? ಇಲ್ಲಿ ಓದಿರಿ.

ಮೊಬೈಲ್ ಎನ್ನುವುದು ಈಗ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಇಲ್ಲದೇ ಊಟವೂ ಇಲ್ಲ ನಿದ್ದೆಯೂ ಇಲ್ಲ. ಆಳುವ ಮಕ್ಕಳಿಗೂ ಬೇಕು ನಗುವ ಹಿರಿಯರಿಗೂ ಬೇಕು ಒಟ್ಟಾರೆ ಎಲ್ಲವೂ ಮೊಬೈಲ್ ಮಯ ಎಂದರೂ ತಪ್ಪಾಗಲಿಕ್ಕಿಲ್ಲ. ಹಾಗಾದ್ರೆ ಈ ಮೊಬೈಲ್ ಗೆ ಬಳಸಲು ಸಿಮ್ ಕಾರ್ಡ್ ಅಂತೂ ಬೇಕೆ ಬೇಕು ಮತ್ತು ಅದು ಅತ್ಯಗತ್ಯ. ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಮಕ್ಕಳ ಆಟಿಕೆಯ ಸಮ ಹಾಗಾದ್ರೆ ಇದೀಗ ಸಿಮ್ ಕಾರ್ಡ್ ಬಳಕೆಯ ಬಗೆಗೆ ಟೆಲಿ ಕಮ್ಯುನಿಕೇಶನ್ ಡಿಪಾರ್ಟ್ಮೆಂಟ್ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಹೌದು ಇದೀಗ ನೀವು ಲೆಕ್ಕಕ್ಕಿಂತ ಹೆಚ್ಚು ಸಿಮ್ ಹೊಂದಿದ್ದರೆ ಅದನ್ನು ಕಳಕೊಳ್ಳುವುದು ಖಂಡಿತ. ಹಾಗಾದರೆ ಏನಿದು ಹೊಸ ನಿರ್ಧಾರ ಎನಿದಿ ಈ ನಿರ್ಧಾರದಲ್ಲಿ.

ಒಬ್ಬರು ಒಂದೇ ಸಿಮ್ ಕಾರ್ಡ್ ಬಳಸುವುದು ಬಾರಿ ವಿರಳ ಈಗ. ಪ್ರತಿಯೊಬ್ಬರಲ್ಲೂ ಎರಡು ಮೂರು ಸಿಮ್ ಕಾರ್ಡ್ ಇದ್ದೆ ಇರುತ್ತದೆ. ಪರ್ಸನಲ್ ಸಿಮ್ ಒಂದು ವ್ಯವಹಾರಕ್ಕೆ ಸಿಮ್ ಒಂದು ಹೀಗೆ ಒಬ್ಬರಲ್ಲಿ ಹಲವಾರು ಸಿಮ್ ಕಾರ್ಡ್ ಗಳಿರುತ್ತದೆ. ಆದರೆ ಇದೀಗ ನಿಮ್ಮ ಹೆಸರಿನಲ್ಲಿ 9 ಕನೆಕ್ಷನ್ ಗಿಂತ ಹೆಚ್ಚಿಗೆ ಇದ್ದರೆ ಅಂತಹ ನೆಟ್ವರ್ಕ್ ಇನ್ನು ಬ್ಯಾನ್ ಆಗಲಿದೆ. ಅದು ನಿಮ್ಮ ಸ್ವಂತ ಬಳಕೆಗೆ ಇರಬಹುದು ಅಥವಾ ನೀವು ನಿಮ್ಮ ಸ್ನೇಹಿತರು ಮನೆಯವರಿಗೆ ತೆಗೆದು ಕೊಟ್ಟಿರಬಹುದು. ಒಟ್ಟಾರೆಯಾಗಿ ಇನ್ನು ಮುಂದೆ ಒಬ್ಬರ ಹೆಸರಲ್ಲಿ ಒಟ್ಟು 9 ಸಿಮ್ ಕಾರ್ಡ್ ಖರೀದಿಸಬಹುದು ಎಂದು ಸುತ್ತೋಲೆ ಹೊರಡಿಸಿದೆ.

ನಿಮ್ಮ ಹೆಸರಿನಲ್ಲಿ ಇದಕ್ಕಿಂತ ಹೆಚ್ಚಿನ ಮೊಬೈಲ್ ಸಂಖ್ಯೆ ಇದ್ದರೆ ಇಂದಿಗೆ ನೀವು ಬದಲಾಯಿಸಿಕೊಳ್ಳಿ ಹಾಗಾದರೆ ಮಾತ್ರ ನಂಬರ್ ಉಳಿಸಿಕೊಳ್ಳಬಹುದು. ಇಲ್ಲವಾದರೆ ನಿಮ್ಮ ನಂಬರ್ ನೀವು ಕಳೆದು ಕೊಳ್ಳುವುದು ಗ್ಯಾರಂಟಿ. ಅದಲ್ಲದೆ ಬೇರೆ ಬೇರೆ ಸಿಮ್ ಕಂಪನಿ ಬೆಳೆಗಳು ಹೆಚ್ಚಾಗಿರುವುದರಿಂದ ರಿಚಾರ್ಜ್ ಮಾಡದೇ ಹೋದರೆ ನಿಮ್ಮ ನಂಬರ್ ಗೆ ಹೊರ ಹೋಗುವ ಹಾಗು ಒಳ ಬರುವ ಕರೆಗಳು ಕೂಡ ನಿಲ್ಲುತ್ತವೆ. ಇದಕ್ಕೆ ಎಷ್ಟು ಬೇಕೋ ಅಷ್ಟೇ ಸಿಮ್ ಬಳಸಿ ಉಳಿದ ಸಿಮ್ ಗಳನ್ನೂ DEACTIVATE ಮಾಡಿಸಿ.

Comments (0)
Add Comment