ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಉಳಿತಾಯ ಸೇಫ್ ಹಾಗು ಉತ್ತಮ ಬಡ್ಡಿ ಕೂಡ ನೀಡುತ್ತಿದೆ. ತಪ್ಪದೆ ಈ ಉಳಿತಾಯ ಯೋಜನೆ ಮಿಸ್ ಮಾಡಿಕೊಳ್ಳಬೇಡಿ.

ಇತ್ತೀಚಿಗೆ ಬಂದ ಸಾಂಕ್ರಾಮಿಕ ಇಂದ ಅನೇಕರು ಬಡವರು ಕೆಲಸ ಕಳೆದುಕೊಂಡಿದ್ದಾರೆ. ಅದೇ ರೀತಿ ಅನೇಕರು ಇದೀಗ ಕೆಲಸಕ್ಕೆ ಸೇರಿ ಅಲ್ಪ ಸ್ವಲ್ಪ ದುಡಿಯುತ್ತಿದ್ದಾರೆ. ಇವರು ಇಂದಿನ ಹಣದುಬ್ಬರ ಇಂದ ಬದುಕಲು ಕೂಡ ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಬ್ಯಾಂಕ್ ಅಲ್ಲೂ ಕೂಡ ಸೇವಿಂಗ್ ಮಾಡಿದ ಹಣಕ್ಕೆ ಉತ್ತಮ ಬಡ್ಡಿ ಸಿಗುತ್ತಿಲ್ಲ. ಅನೇಕರು ಒಂದೊಂದು ಸ್ಕೀಮ್ ಹೇಳುತ್ತಿದ್ದಾರೆ. ಹೂಡಿಕೆ ಮಾಡಿ ಅನ್ನುತ್ತಿದ್ದಾರೆ. ಆದರೆ ಯಾವುದು ಉತ್ತಮ ನಮ್ಮ ನಿಮ್ಮಂತಹ ಮಾಧ್ಯಮ ಹಾಗು ಬಡ ವರ್ಗದ ಜನರಿಗೆ ಎನ್ನುವುದು ಯಾರು ಕೂಡ ಹೇಳುತ್ತಿಲ್ಲ.

ಇಂದು ನಿಮಗೆ ಆ ಮಾಹಿತಿ ನೀಡಲಿದ್ದೇವೆ. ಬ್ಯಾಂಕ್ ಹಾಗು ಪೋಸ್ಟ್ ಆಫೀಸ್ ಎರಡು ಕೂಡ ಉಳಿತಾಯಕ್ಕೆ ಯೋಗ್ಯವಾದ ಸರಕಾರಿ ಸಂಸ್ಥೆಗಳೇ. ಎಲ್ಲ ಕಡೆ ಸಮನಾದ ಬಡ್ಡಿ ದರ ಇರುತ್ತವೆ. ಕೇವಲ ಪಾಯಿಂಟ್ ಲೆಕ್ಕದಲ್ಲಿ ಹೆಚ್ಚು ಕಡಿಮೆ ಇರುತ್ತವೆ. ಇತೀಚೆಗೆ ಸರಕಾರ epf ಮೇಲೆ ಬಡ್ಡಿ ದರ ೮.೫% ನಿಂದ ೮.೧% ತಂದು ನಿಲ್ಲಿಸಿದೆ. ಎಲ್ಲ ಸರಕಾರಿ ಠೇವಣಿಗಳ ಮೇಲಿನ ಬಡ್ಡಿ ದರ ಕೂಡ ಕಡಿಮೆ ಆಗುತ್ತಾ ಇದೆ. ಇಂತದರಲ್ಲಿ ಬ್ಯಾಂಕ್ ಅಲ್ಲಿ ಅಥವಾ ಪೋಸ್ಟ್ ಆಫೀಸ್ ಯಾವುದರಲ್ಲಿ ಉತ್ತಮ ಬಡ್ಡಿ ದರ ಇದೆ.

ಯಾವುದು ಒಳ್ಳೆ ಆಯ್ಕೆ ಎನ್ನುವುದು ನಿಮ್ಮ ಗೊಂದಲವಾಗಿದ್ದರೆ ಇಲ್ಲಿದೆ ಅದರ ಉತ್ತರ. ಬ್ಯಾಂಕ್ ಹಾಗು ಪೋಸ್ಟ್ ಆಫೀಸ್ ಎರಡು ಕೂಡ ಹಣ ಸಂರಕ್ಷಿಸುವ ಏಕೈಕ ಸಂಸ್ಥೆಗಳಾಗಿವೆ. ಫಿಕ್ಸೆಡ್ ಡೆಪಾಸಿಟ್ ಟರ್ಮ್ ಡೆಪಾಸಿಟ್ ರೆಕರಿಂಗ್ ಡೆಪಾಸಿಟ್ ಈ ತರಹದ ಅನೇಕ ಉಳಿತಾಯ ಯೋಜನೆಗಳಿವೆ. ನನ್ನ ಪ್ರಕಾರ ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆ ಉತ್ತಮ. ಪೋಸ್ಟ್ ಆಫೀಸ್ ನ ಟೈಮ್ ಡೆಪಾಸಿಟ್ ಅಥವಾ ಟರ್ಮ್ ಡೆಪಾಸಿಟ್ ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್ ಗೆ ಹೋಲುತ್ತದೆ.

ಪೋಸ್ಟ್ ಆಫೀಸ್ ಅವಧಿಯ ಠೇವಣಿಗಳು ೧,೨,೩ ಮತ್ತು ೫ ವರ್ಷಗಳಿಗೆ ಇರುತ್ತದೆ. ಈ ಯೋಜನೆಗಳ ಬಡ್ಡಿದರವು ಕಾಲ ಕಾಲಕ್ಕೆ ಬದಲಾಗುತ್ತವೆ. ಪ್ರಸ್ತುತ ಪೋಸ್ಟ್ ಆಫೀಸ್ ಬಡ್ಡಿ ದರಗಳು ಈ ರೀತಿ ಇದೆ. ೧ ವರ್ಷದ ಠೇವಣಿಗೆ ೫.೫% ಬಡ್ಡಿ, ೨ ವರ್ಷದ ಠೇವಣಿಗೆ ೫.೫%, ಮೂರೂ ವರ್ಷದ ಠೇವಣಿಗೆ ೫.೫% ಬಡ್ಡಿ ಹಾಗು ೫ ವರ್ಷದ ಉಳಿತಾಯ ಠೇವಣಿಗೆ ೬.೭% ಬಡ್ಡಿ ದೊರಕುತ್ತವೆ. ೫ ಲಕ್ಷ ೧೦ ವರ್ಷದ ಅವಧಿಗೆ ಇಟ್ಟರೆ ೬.೭ % ಬಡ್ಡಿ ಜೊತೆಗೆ ೬,೯೧,೫೦೦ ರೂಪಾಯಿ ನಿಮಗೆ ಹಿಂದೆ ಸಿಗುತ್ತದೆ.

Comments (0)
Add Comment