ಯುಪಿಐ ಜಗತ್ತಿಗೆ ಎಂಟ್ರಿ ಕೊಟ್ಟ ರತನ್ ಟಾಟಾ ನೇತೃತ್ವದ ಟಾಟಾ ಗ್ರೂಪ್? ಗೂಗಲ್ ಪೇ ಫೋನ್ ಪೇ ಗೆ ಶುರುವಾಯಿತು ನಡುಕ ? ಯಾವುದು ಈ ಆ್ಯಪ್?

ರತನ್ ಟಾಟಾ ಎಂದರೆ ಮೊದಲಿಗೆ ನೆನಪಾಗುವುದು ದೇಶದ ಆಪಧ್ಬಾಂದವ ಎಂದು. ಹೌದು ಅದೆಷ್ಟು ಕಷ್ಟದ ಸಮಯಗಳಲ್ಲಿ ದೇಶವನ್ನು ಮುನ್ನಡೆಸುವ ಕರ್ತವ್ಯ ಹೊಂದಿರುವ ಬೃಹತ್ ಉದ್ಯಮಿಗಳಲ್ಲಿ ಮೊದಲಿಗರು ಇವರು. ತನ್ನ ಸಂಪತ್ತಿನ ಮುಕ್ಕಾಲು ಭಾಗದಷ್ಟು ಹಣವನ್ನು ಅವರು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ದೇಶ ವಿದೇಶದಲ್ಲಿ ಹಲವಾರು ಉದ್ಯಮ ಹೊಂದಿರುವ ಇವರು ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ಹೌದು ಇದರಿಂದಾಗಿ ಗೂಗಲ್ ಪೇ ಮತ್ತು ಫೋನ್ ಪೇ ನಂತಹ ಸಂಸ್ಥೆಗಳ ನಿದ್ದೆ ಕೆಟ್ಟಿದೆ.

ಹೌದು ಟಾಟಾ ಗ್ರೂಪ್ ಈಗಾಗಲೇ upi ಕ್ಷೇತ್ರ ಪ್ರವೇಶಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡೇ ಹಾಗೆ ಕಾಣುತ್ತದೆ. ಈಗಾಗಲೇ ನೇಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ದಿಂದ ಇವರು ಒಪ್ಪಿಗೆ ಪಡೆಯಲು ಎಲ್ಲಾ ಕಾರ್ಯ ಮಾಡಿದ್ದಾರೆ. ತನ್ನದೇ ಆದ ಡಿಜಿಟಲ್ ವಾಣಿಜ್ಯ ಘಟಕ ವಾದ ಟಾಟಾ ಡಿಜಿಟಲ್ ಮೂಲಕ ಇದು ಈ ಕಾರ್ಯ ನಡೆಸಲು ಮುಂದಾಗಿದೆ. ಇದಕ್ಕೆ ಶಕ್ತಿ ತುಂಬಲು ಖಾಸಗಿ ಬ್ಯಾಂಕ್ icici ಜೊತೆ ಚರ್ಚೆ ನಡೆಯುತ್ತಾ ಇದೆ.

ಹೀಗೆ ಎಲ್ಲವೂ ಎನಿಸಿಕೊಂಡ ಹಾಗೆ ನಡೆದರೆ ಮುಂದಿನ ತಿಂಗಳು ಇದು ಚಲಾವಣೆಗೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ ಮುಂಬರುವ ತಿಂಗಳಲ್ಲಿ ಡಿಜಿಟಲ್ ಆ್ಯಪ್ ಟಾಟಾ ನ್ಯೂ ಅನ್ನು ಭಾರತದಲ್ಲಿ ಐಪಿಎಲ್ ಸಂದರ್ಭದಲ್ಲಿ ಲಾಂಚ್ ಮಾಡಲು ದಿನ ನಿಗದಿ ಆಗಿದ್ದು ಅದೇ ಸಮಯಕ್ಕೆ ಇದು ಕೂಡ ಬಂದರೆ ಅಚ್ಚರಿ ಪಡಬೇಕಾಗಿ ಇಲ್ಲ ಎನ್ನುತ್ತಾರೆ ಜನರು. ಎಲ್ಲ ಕ್ಷೇತ್ರದಲ್ಲಿ ಟಾಟಾ ಸಂಸ್ಥೆ ಬರುತ್ತಿದ್ದು ಭಾರತದ ಆತ್ಮನಿರ್ಭರ್ ಸಫಲ ಆಗುವುದರಲ್ಲಿ ಅನುಮಾನವಿಲ್ಲ ಎನಿಸುತ್ತಿದೆ.

Comments (0)
Add Comment