ರಾಜ್ಯದ ಮೊದಲ ತೇಲುವ ಸೇತುವೆ ನಿನ್ನೆ ಒಡಿಪು(ಉಡುಪಿ) ಜಿಲ್ಲೆಯ ಮಲ್ಪೆ ಬೀಚ್ ಅಲ್ಲಿ ಶುರುವಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ತೇಲುವ ಸೇತುವೆ ಗಳನ್ನೂ ನಾವು ಮೊಬೈಲ್ ಗಳಲ್ಲಿ ಬೇರೆ ದೇಶದ ಬಗ್ಗೆ ನೋಡಿರುತ್ತೇವೆ. ನಮಗೂ ಹೋಗಲು ಅಸೆ ಆಗಿರುತ್ತೆ ಆದರೆ ನಮ್ಮಲ್ಲಿ ಆ ವ್ಯವಸ್ಥೆ ಲಭ್ಯವಿರರುವುದಿಲ್ಲ. ಇದಕ್ಕೆಲ್ಲ ಪೂರ್ಣ ವಿರಾಮ ಹಾಕಲು ರಾಜ್ಯದಲ್ಲಿ ಮೊದಲ ತೇಲುವ ಸೇತುವೆ ನಮ್ಮ ಒಡಿಪು ಅಂದರೆ ಉಡುಪಿಯ ಮಲ್ಪೆ ಬೀಚ್ ಅಲ್ಲಿ ನಿನ್ನೆ ಅಂದರೆ ೬-೫-೨೦೨೨ ರಂದು ಲೋಕಾರ್ಪಣೆ ಗೊಂಡಿದೆ. ಈ ತೇಲುವ ಸೇತುವೆಯಿಂದ ಅಲೆಗಳ ಮೇಲೆ ನಡೆಯಲು ಸಾಧ್ಯವಾಗುತ್ತದೆ. ಪ್ರತಿ ಪ್ರವಾಸಿಗರು ಈ ಸೇತುವೆಯ ಮೇಲೆ ೧೫ ನಿಮಿಷ ಇರಲು ಅವಕಾಶ ಇದೆ.

ಮಲ್ಪೆ ಬೀಚ್ ಅಲ್ಲಿ ನಿರ್ಮಿಸಲಾಗಿರುವ ಈ ತೇಲುವ ಸೇತುವೆ ಸುಮಾರು ೧೦೦ ಮೀಟರ್ ಉದ್ದವಿದೆ. ಇದರ ಅಗಲ ೩.೫ ಮೀಟರ್ ಇದೆ. ಇದನ್ನು ಪೊಂಟೊನ್ ಬ್ಲಾಕ್ ಗಳಿಂದ ನಿರ್ಮಿಸಲಾಗಿದೆ. ಈ ಸೇತುವೆಯಲ್ಲಿ ಒಂದು ಬಾರಿ ಎಷ್ಟು ಜನರು ಸಾಗಬಹುದು? ಬರೋಬ್ಬರಿ ೧೦೦ ಜನರು ಒಮ್ಮೆಗೆ ಸಾಗಬಹುದಾಗಿದೆ. ಅಲ್ಲದೆ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ ವೇದಿಕೆ ಇದೆ. ಇದು ಸುಮಾರು ೧೨ ಮೀಟರ್ ಉದ್ದ ಹಾಗು ೭.೫ ಮೀಟರ್ ಅಗಲ ಇದೆ. ಇಲ್ಲಿ ಪ್ರತಿ ಪ್ರವಾಸಿಗರಿಗೆ ೧೫ ನಿಮಿಷಗಳ ವರೆಗೆ ಕಾಲ ಕಳೆಯುವ ಅವಕಾಶ ನೀಡಲಾಗಿದೆ.

ಅಲ್ಲದೆ ಈ ಸೇತುವೆ ರಕ್ಷಣೆ ಇಲ್ಲವೇ? ಇಲ್ಲಿ ಜನರಿಗೆ ರಕ್ಷಣೆ ಇಲ್ಲವೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಈ ಸೇತುವೆ ಮೇಲ್ವಿಚಾರಣೆಗೆ ತಂಡವೇ ಇದೆ. ಪ್ರವಾಸಿಗರ ರಕ್ಷಣೆಗೆ ೧೦ ಜೀವ ರಕ್ಷಕರನ್ನು ನಿಯೋಜಿಸಲಾಗಿದೆ. ಅಲ್ಲದೆ ಎರಡು ಲೈಫ್ ಬೋಟ್ ಗಳು ಕೂಡ ಇದೆ. ಇಲ್ಲಿ ಪ್ರವಾಸಿಗರ ರಕ್ಷಣೆಗೆ ಮೊದಲ ಪ್ರಶಸ್ಯತೇ ನೀಡಲಾಗಿದೆ. ಈ ಸೇತುವೆಯ ವಿಶೇಷತೆ ಏನು? ಈ ಸೇತುವೆ ಸಮುದ್ರದ ತೆರೆಯ ಮೇಲೆ ನಿರ್ಮಿಸಲಾಗಿದೆ. ತೆರೆ ಹೇಗೆ ಚಲಿಸುತ್ತದೆಯೋ ಅದೇ ರೀತಿ ಈ ಸೇತುವೆ ಕೂಡ ಚಲಿಸುತ್ತದೆ. ಪದದ ಕೆಳಗೆ ಸಮುದ್ರದ ಚಲನೆಯ ವಿಶಿಷ್ಟ ಅನುಭವ ಸಿಗುತ್ತದೆ ಪ್ರವಾಸಿಗರಿಗೆ.

ಉಡುಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಮೂವರು ಉದ್ಯಮಿಗಳು ಸೇರಿ ಸುಮಾರು ೮೦ ಲಕ್ಷ ರೂಪಾಯಿ ಖರ್ಚಿನಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯಲ್ಲಿ ಹೋಗಲು ಪ್ರತಿ ಪ್ರವಾಸಿಗರು ಕೂಡ ೧೦೦ ರೂಪಾಯಿ ಪಾವತಿಸಬೇಕಾಗುತ್ತದೆ. ಅಲ್ಲದೆ ಲೈಫ್ ಜಾಕೆಟ್ ಧರಿಸಿ ಪ್ರತಿಯೊಬ್ಬರೂ ೧೫ ನಿಮಿಷ ಸಮುದ್ರದ ಕಡೆ ಆಕರ್ಷಿತವಾಗುವವರು ಆನಂದ ಪಡಬಹುದು. ಉಡುಪಿಗೆ ಬರುವ ಪ್ರತಿಯೊಬ್ಬರಿಗೂ ಈ ಸ್ಥಳ ಆಕರ್ಷಣೆ ಆಗುವುದಂತೂ ಖಚಿತ.

Comments (0)
Add Comment