ವಿಭಿನ್ನವಾಗಿ ಆಲೂಗಡ್ಡೆ ಬೆಳೆದ ರೈತ. ಇದರಿಂದ ೧೦ ಪಟ್ಟು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ವಿಧಾನ ಹೇಗೆ?

ಕೃಷಿ ನಮ್ಮ ದೇಶದ ಪ್ರಮುಖ ಆಧಾರ ಸ್ಥಂಭ, ಕೃಷಿಯಿಂದಲೆ ಅತೀ ಹೆಚ್ಚು ಆದಾಯ ನಮ್ಮ ದೇಶಕ್ಕೆ ಬರುತ್ತಿದೆ. ಹಲವಾರು ಬದಲಾವಣೆಗಳು ಕೃಷಿ ಕ್ಷೇತ್ರದಲ್ಲೂ ಕೂಡ ಆಗುತ್ತಿದೆ. ಹಾಗೆಯೇ ಇಂತಹ ಬದಲಾವಣೆಯ ಗಾಳಿ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿದೆ, ಮಾಡುತ್ತಲೂ ಇದೆ. ಇದೀಗ ಅಂತಹುದೇ ಒಂದು ಪ್ರಯೋಗ ಮಾಡಿದ್ದಾರೆ ಇಲ್ಲೊಬ್ಬ ರೈತ. ಇದರಿಂದಾಗಿ ಸಾಮಾನ್ಯ ಲಾಭಕ್ಕಿಂತ 10ಪಟ್ಟು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ಆಲೂಗಡ್ಡೆ ಎಲ್ಲರಿಗೂ ಗೊತ್ತು, ದಿನ ನಿತ್ಯದ ಪದಾರ್ಥಗಳಲ್ಲಿ ಬಳಸುತ್ತೇವೆ. ಆದರೆ ಈ ಆಲೂಗಡ್ಡೆ ಆಗುವುದು ಮಾತ್ರ ಮಣ್ಣಿನ ಅಡಿಯಲ್ಲಿ. ಆದರೆ ಇಂದು ನಾವು ತಿಳಿಯಲು ಹೊರಟ ಈ ವಿಚಾರದಲ್ಲಿ ಈ ರೈತ ಮಾತ್ರ ಆಲೂಗಡ್ಡೆ ಬೆಳೆಯುತ್ತಿರುವುದು ಮಣ್ಣಿನಲ್ಲಿ ಅಲ್ಲ ಬದಲಾಗಿ ಗಾಳಿಯಲ್ಲಿ. ವಿಚಿತ್ರ ಎಂಬ ಅನುಭವ ಆದರೂ ಇದು ಸತ್ಯ. ಗಾಳಿಯಲ್ಲಿ ಆಲೂಗಡ್ಡೆ ಬಳಸಿ 10 ಪಟ್ಟು ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಹಾಗಾದರೆ ಏನಿದು ಹೊಸ ಆವಿಷ್ಕಾರ ಬನ್ನಿ ತಿಳಿಯೋಣ.

ಏರೋಪೋನಿಕ್ ಎಂಬ ಟೆಕ್ನಾಲಜಿ ಬಳಸಿ ಈ ಆಲೂಗಡ್ಡೆ ಬೆಳೆಯನ್ನು ಬೆಳೆಸಲಾಗುತ್ತದೆ. ಇದರಿಂದಾಗಿ ಮಣ್ಣು ಮತ್ತು ಜಾಗದ ಅಭಾವವನ್ನು ನೀಗಿಸಲು ಸಾಧ್ಯವಾಗುತ್ತದೆ. ಇದು ಸಾಧಾರಣ ಬೆಲೆಗಿಂತ ಬೇಗನೆ ಫಸಲು ಬರುತ್ತದೆ. ಮತ್ತು ಇದರಿಂದಾಗಿ ಇದು ಇಷ್ಟೊಂದು ಲಾಭ ತರುತ್ತದೆ ರೈತನಿಗೆ .ವಿಜ್ಞಾನಿಗಳ ಪ್ರಕಾರ ಪಾರಂಪರಿಕ ಬೇಸಾಯ ಪದ್ಧತಿಗಿಂತ ಇದು ಹೆಚ್ಚು ಲಾಭದಾಯಕ ಎಂದು. ಹರ್ಯಾಣದಲ್ಲಿ ಮೊದಲ ಪ್ರಯೋಗ ಆಗಿದ್ದು ಯಶಸ್ವಿ ಆಗಿದೆ. ಇದು ಸಾಧಾರಣ ಬೀಜಕ್ಕೆ ಹೋಲಿಕೆ ಮಾಡಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಇಳುವರಿ ಕೊಡುತ್ತದೆ.

Comments (0)
Add Comment