ವಿಶ್ವದ ಅತಿ ದೊಡ್ಡ ಪಾಕಶಾಲೆ ಇರುವುದು ನಮ್ಮ ಭಾರತದಲ್ಲಿ ಇದರ ಬಗ್ಗೆ ನಿಮಗೆ ಎಷ್ಟು ಮಾಹಿತಿ ಇದೆ? ಬನ್ನಿ ತಿಳಿಯಿರಿ.

ಪಾಕ ಕಲೆಗೆ ನಮ್ಮ ದೇಶ ಎತ್ತಿದ ಕೈ. ಶುಚಿ ರುಚಿಯಾದ ಅಡುಗೆ ತಿಂಡಿ ತಿನಿಸು ತಯಾರಿಯಲ್ಲಿ ಭಾರತ ಸೈ ಎನಿಸಿದ ದೇಶ. ಹಾಗೆಯೇ ಇತರ ಎಲ್ಲಾ ದೇಶದ ಜನರು ಇಷ್ಟ ಪಡುವ ಪಾಕ ಕಲೆ ನಮ್ಮ ದೇಶದಲ್ಲಿದೆ. ಅದಕ್ಕಾಗಿಯೇ ಎಷ್ಟೊಂದು ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಭಾರತ ಅತೀ ದೊಡ್ಡ ಎರಡು ಅಡುಗೆ ಮನೆಯ ಬಗ್ಗೆ ತಿಳಿಯೋಣ. ಇದು ಭಾರತ ಅಷ್ಟೇ ಅಲ್ಲ ವಿಶ್ವದಲ್ಲೇ ಅತೀ ದೊಡ್ಡ ಪಾಕ ಶಾಲೆ ಇದು.

“THE LANGAR” ಇದು ಪಂಜಾಬ್ ನ ಅಮೃತಸರದಲ್ಲಿದ್ದು ಗೋಲ್ಡನ್ ಟೆಂಪಲ್ ನ ಪಾಕಶಾಲೆ ಆಗಿದೆ. ಇಲ್ಲಿ ದಿನಾಲೂ ಸರಿ ಸುಮಾರು 50000 ದಿಂದ 1 ಲಕ್ಷಕ್ಕೂ ಹೆಚ್ಚು ಮಂದಿ ಬಂದು ಪ್ರಸಾದ ಸ್ವೀಕರಿಸುತ್ತಾರೆ. 5000 ಜನರು ಒಮ್ಮೆಲೆ ಕೂತು ಪ್ರಸಾದ ಸ್ವೀಕರಿಸುವ ವ್ಯವಸ್ತೆ ಇದೆ. 300 ಜನ ಕಾಯಂ ಕೆಲಾಗಾರರಿದ್ದು ಮತ್ತೆ ಬಂದ ಭಕ್ತಾದಿಗಳು ಇಲ್ಲಿ ಬಡಿಸುತ್ತಾರೆ.

ಹಾಗೆಯೇ ಇನ್ನೊಂದು ದೊಡ್ಡ ಪಾಕಶಾಲೆ ಪುರಿ ಜಗನ್ನಾಥ ಸನ್ನಿಧಿಯಲ್ಲಿದೆ. “Rosaghar” ಎಂದು ಕರೆಯಲಾಗುತ್ತದೆ ಈ ಪಾಕಶಾಲೆಯನ್ನು. ಇಲ್ಲಿ ಪ್ರತಿನಿತ್ಯ 50000 ದಿಂದ 1 ಲಕ್ಷ ವರೆಗೆ ಭಕ್ತರು ಇಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿ ಅಡುಗೆ ಮಾಡುವವರನ್ನು “supakara” ಎಂದು ಕರೆಯುತ್ತಾರೆ. ಇಲ್ಲಿ ಪ್ರಸಾದ ತಯಾರಿಗೆಂದೆ 700 ಜನರಶ್ಟಿದ್ದು 12ಲಕ್ಷ ರೂಪಾಯಿಯ ಅಷ್ಟು ಆದಾಯ ಬರುತ್ತದೆ.

ಹೀಗೆ ಭಾರತದ ಈ ಎರಡು ದೊಡ್ಡ ಪಾಕಶಾಲೆ ಲಕ್ಷಾಂತರ ಹಸಿದ ಹೊಟ್ಟೆಗೆ ಊಟ ಹಾಕುತ್ತದೆ. ಯಾವುದೇ ಒಂದು ಅಪೇಕ್ಷೆ ಇಲ್ಲದೆ ಅನುದಾನ ಶ್ರೇಷ್ಠ ದಾನ ಎಂದು ನಂಬಿ ಈ ಪುಣ್ಯ ಕಾರ್ಯ ಮಾಡುತ್ತಿದ್ದು. ಯಾವುದೇ ಜಾತಿ ಭೇದ ಇಲ್ಲದೆ ಹೊಟ್ಟೆ ತಣಿಸುತ್ತದೆ.

Comments (0)
Add Comment