ಶಕುನಿಯ ಮಾತನ್ನು ಕೇಳುತ್ತಿದ್ದ ಶಕುನಿಯ ಪಗಡೆ ದಾಳ ಶಕುನಿಗೆ ಹೇಗೆ ಎಲ್ಲಿ ದ ಸಿಕ್ಕಿತ್ತು ಗೊತ್ತೇ? ಇಲ್ಲಿ ಓದಿರಿ.

ಮಹಾಭಾರತ ಎಂದರೆ ಮೊದಲು ನೆನಪಿಗೆ ಬರುವ ವ್ಯಕ್ತಿಯೇ ಶಕುನಿ. ಶಕುನಿಯಿಂದಲೇ ಇಡೀ ಮಹಾಭಾರತ ಕಥೆ ನಡೆಯುತ್ತದೆ. ಶಕುನಿಯ ಕುತಂತ್ರ ದಿಂದಲೇ ಪಾಂಡವರೆಲ್ಲ ಪಗಡೆ ಆತ ಸೋತು ತಮ್ಮ ಸರ್ವಸ್ವ ಕಳೆದುಕೊಂಡು ಇಡೀ ಮಹಾಭಾರತ ಕಥೆಯೇ ನಡೆದು ಹೋಯಿತು. ಹಾಗಾದರೆ ಶಕುನಿಯ ಆ ಪಗಡೆ ದಾಳಗಳು ಶಕುನಿಯ ಮಾತುಗಳನ್ನು ಹೇಗೆ ಕೇಳುತ್ತವೆ. ಹಾಗಾದರೆ ಅದನ್ನು ಎಲ್ಲಿಂದ ಪಡೆದರು ಎಂಬ ವಿಚಾರ ಬರುತ್ತದೆ.

ಗಾಂಧಾರಿ ಮದುವೆಗೂ ಮುಂಚೆ ನಡೆದ ಘಟನೆ ಇದು . ಜಾತಕ ದಲ್ಲಿನ ದೋಷದಿಂದಾಗಿ ತನ್ನ ಮೊದಲ ಗಂಡ ಅಲ್ಪಾಯುಷಿ ಆಗಿ ಸಾಯುತ್ತಾನೆ ಎಂದು ಹೇಳಿದಾಗ ಯಾರಿಗೂ ತಿಳಿಯದಂತೆ ಈ ದೋಷ ನಿವಾರಣೆ ಮಾಡಲೆಂದು ಗಾಂಧಾರಿಗೆ ಆಡಿನ ಜೊತೆ ಮದುವೆ ಮಾಡಿ ಆದನ್ನು ವಧೆ ಮಾಡುತ್ತಾರೆ. ಇದರಿಂದ ತನ್ನ ಜಾತಕ ದೋಷ ಪರಿಹಾರ ಆಯಿತೆಂದು , ಧೃತರಾಷ್ಟ್ರನಿಗೆ ಕೊಟ್ಟು ಮದುವೆ ಮಾಡಲಾಯಿತು. ಆದರೆ ಧೃರಾಷ್ಟ್ರ ಮತ್ತು ಅವನ ಕುಟುಂಬದವರಿಗೆ ಮುಂಚಿನ ಮದುವೆಯ ವಿಚಾರ ತಿಳಿದಿರಲಿಲ್ಲ, ಕೊನೆಗೆ ಈ ವಿಷಯ ತಿಳಿದಾಗ ಎಲ್ಲರನ್ನೂ ಬಂಧಿಸಿ ಕಾರಾಗೃಹದಲ್ಲಿ ಇರಿಸುತ್ತಾನೆ.

ಬಂಧಿಸಿದ ಎಲ್ಲರಿಗೂ ಒಂದೊತ್ತು ಅನ್ನ ಕೊಡಲಾಯಿತು. ಬಳಲಿದ ಜೀವಗಳು ಕೊನೆಯುಸಿರು ಎಳೆಯುವ ಹಂತಕ್ಕೆ ಬಂದಾಗ ಸುಬಲ ತನ್ನ ಮಗ ಶಕುನಿಗೆ ಹೇಳುತ್ತಾನೆ ತಾನು ಸತ್ತ ಮೇಲೆ ತನ್ನ ಸುಟ್ಟು ಉಳಿದ ಎಲುಬುಗಳಿಗೆ ಪಗಡೆ ದಾಳವನ್ನು ಮಾಡು ಅದರಿಂದ ಇಡೀ ಕುರು ವಂಶವನ್ನು ನಿರ್ನಾಮ ಮಾಡಿ ಎಂದು ಮಾತು ತೆಗೆದುಕೊಳ್ಳುತ್ತಾನೆ. ಹೀಗೆ ತನ್ನ ತಂದೆಯ ಅಸ್ತಿಯಲ್ಲಿ ಉಳಿದ ಎಲುಬುಗಳಿಂದ ತಯಾರಿಸಿದ ದಾಳಗಳು, ಅದರಿಂದಾಗಿ ಅದು ಶಕುನಿಯ ಎಲ್ಲಾ ಮಾತುಗಳ ಕೇಳುತ್ತಿತ್ತು.

Comments (0)
Add Comment