ಶಾಲಾ ಮಕ್ಕಳಿಗೆ ವಿಶೇಷ ಕಾನೂನು ತಂದ ಚೀನಾ. ಏನಿದು ಯಾವ ದೇಶದಲ್ಲೂ ಇಲ್ಲದ ಹೊಸ ಕಾನೂನು?

ಚೀನಾ ಒಂದಲ್ಲ ಒಡನು ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ದೇಶ. ತನ್ನ ಸ’ರ್ವಾಧಿ’ಕಾರದಿಂದ ಚೀನಾ ಬಹಳಷ್ಟು ಬೆಳೆದಿದೆ. ಇಂದು ವಿಶ್ವದಲ್ಲಿ ಆರ್ಥಿಕತೆಯಲ್ಲಿ ಅಮೆರಿಕವನ್ನು ಹಿಂದೆ ಹಾಕಿ ಮುನ್ನಡೆಯುವ ಶಕ್ತಿ ಇದ್ದಾರೆ ಅದು ಚೀನಾಗೆ ಮಾತ್ರ. ವ್ಯಾಪಾರ ಗಳಿಂದ ಹಿಡಿದು ಆಟೋಟಗಳ ವರೆಗೆ, ರಾಜಕೀಯದಿಂದ ಹಿಡಿದು ಮಿ’ಲಿಟ’ರಿ ಶಕ್ತಿಯವರೆಗೆ ಚೀನಾ ಗ್ಲೋ’ಬಲ್ ಪವರ್ ಆಗಿ ಹೊರ ಹೊಮ್ಮಿದೆ. ಚೀನಾ ಇತ್ತೀಚಿಗೆ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ ಅಲ್ಲೂ ಉತ್ತಮ ಸಾಧನೆ ಮಾಡುತ್ತಿದೆ. ಅದಕ್ಕೆ ಕಾರಣ ಅಲ್ಲಿನ ಶಾಲಾ ವಿದ್ಯಾಭ್ಯಾಸದ ಗುಣಮಟ್ಟ ಹಾಗು ಆಟೋಟಗಳಲ್ಲಿ ಶಾಲೆಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಫಲ.

ಈಗ ಚೀನಾ ಇನ್ನೊಂದು ಕಾನೂನು ಅಲ್ಲಿನ ವಿದ್ಯಾರ್ಥಿಗಳಿಗೆ ತಂದಿದೆ. ಚೀನಾದಾದ್ಯಂತ ಮಕ್ಕಳಲ್ಲಿ ನಿದ್ರಾಹೀನತೆಯು ಸಾಮಾನ್ಯ ಸಮಸ್ಯೆಯಾಗಿ ಉಳಿದಿದೆ ಏಕೆಂದರೆ ಶೈಕ್ಷಣಿಕ ಒತ್ತಡಗಳು ಮತ್ತು ಇತರ ಚಟುವಟಿಕೆಗಳನ್ನು ಎದುರಿಸುವುದರಿಂದ ಈ ಸಮಸ್ಯೆ ಮಕ್ಕಳಲ್ಲಿ ಕಾಣುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗೆ ಸಾಕಷ್ಟು ನಿದ್ದೆ ಮಾಡುವಂತೆ ನೋಡಿಕೊಳ್ಳಲು ಶಾಲೆಗಳಿಗೆ ನಿದ್ರೆಯನ್ನು ಶಾಲೆಗಳ ಮೌಲ್ಯಮಾಪನದ ಭಾಗವಾಗಿಸುವಂತೆ ಸೂಚಿಸಿದೆ.

ಚೀನಾದ ಹತ್ತು ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ದಿನಕ್ಕೆ ಸರಾಸರಿ 9.5 ಗಂಟೆಗಳ ನಿದ್ರೆ ಮಾಡುತ್ತಾರೆ, ಆದರೆ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು 8.4 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆ, ಇವೆರಡೂ ಶಿಫಾರಸು ಮಾಡಿದ ಮೊತ್ತಕ್ಕಿಂತ ಕಡಿಮೆ ಎಂದು ಸಮೀಕ್ಷೆ ಹೇಳಿದೆ. ಆಫ್‌ಲೈನ್ ತರಗತಿಯ ತರಬೇತಿ ತರಗತಿಗಳು ರಾತ್ರಿ 8: 30 ಕ್ಕಿಂತ ಮುಂಚೆ ಮುಕ್ತಾಯಗೊಳ್ಳಬೇಕು ಮತ್ತು ಆನ್‌ಲೈನ್ ಕೋರ್ಸ್‌ಗಳು ರಾತ್ರಿ 9 ಗಂಟೆಗೆ ಮುಂಚಿತವಾಗಿ ಮುಗಿಯಬೇಕು ಮತ್ತು ವಿದ್ಯಾರ್ಥಿಗಳಿಗೆ ಮನೆಕೆಲಸ ಮಾಡಲು ಅನುಮತಿಸುವುದಿಲ್ಲ ಎಂದು ಅಲ್ಲಿನ ಸರಕಾರ ಆದೇಶಿಸಿದೆ.

Comments (0)
Add Comment