೧ ಮಾರ್ಕ್ ಗಾಗಿ ಕೋರ್ಟ್ ಗೆ ಅಲೆದಾಡಿದ ವಿದ್ಯಾರ್ಥಿ. ೩ ವರ್ಷಗಳು ಕಾದ ನಂತರ ಬಂದ ಪಲಿತಾಂಶವೇನು ಗೊತ್ತೇ?

ವಿಧ್ಯಾರ್ಥಿ ಜೀವನ ಎಂದರೆ ಹಾಗೆ ನೋಡಿ ಒಳ್ಳೆಯ ಅಂಕ ಪಡೆದರೆ ಎಲ್ಲರೂ ಗುರುತಿಸುತ್ತಾರೆ. ಹಾಗೆಯೇ ನೆರೆ ಮನೆಯವರಿಗೆ ಮಾದರಿ ವಿಧ್ಯಾರ್ಥಿ ಕೂಡ ಆಗಿರುತ್ತಾರೆ. ಹೀಗೆ ಫೈನಲ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಒಂದು ಉನ್ನತ ಶಿಕ್ಷಣ ಪಡೆಯಬೇಕು ಎಂಬುವುದು ಎಲ್ಲರ ಆಸೆ. ಅದಕ್ಕಾಗಿ ನಿದ್ದೆ ಬಿಟ್ಟು ಓದುವ ಅದೆಷ್ಟೋ ಮಕ್ಕಳನ್ನು ಈಗಲೂ ಕಾಣಬಹುದು. ನಾವು ಇಂದು ತಿಳಿಯಲು ಹೊರಟ ವಿಧ್ಯಾರ್ಥಿಯ ಕಥೆ ಕೂಡ ಅಂತಹುದೇ . ಪರೀಕ್ಷೆಯ ಫಲಿತಾಂಶದಲ್ಲಿ 1 ಅಂಕ ಹೆಚ್ಚಾಗಬೇಕು ಎಂಬ ಆಸೆಯಿಂದ ಪರೀಕ್ಷಾ ಮಂಡಳಿಯನ್ನು ಕೋರ್ಟ್ ಮೆಟ್ಟಿಲು ಹತ್ತಿದ ಕಥೆ ಇದು ಬನ್ನಿ ತಿಳಿಯೋಣ.

ಇವರ ಹೆಸರು ಶಾಂತನು ಶುಕ್ಲ, ಮದ್ಯ ಪ್ರದೇಶದ ಭೋಪಾಲ್ ನವರು. ಎಲ್ಲರಂತೆ ಪರೀಕ್ಷೆ ಬರೆದು ಫಲಿತಾಂಶ ಕೂಡ ಬಂದಿತ್ತು.2018ರ ಬ್ಯಾಚ್ ವಿಧ್ಯಾರ್ಥಿ ,ಇವರಿಗೆ ಒಟ್ಟು 74.8% ಅಂಕ ಬಂದಿತ್ತು. ಮುಖ್ಯಮಂತ್ರಿ ಮೇಧಾವಿ ಯೋಜನೆ ಅಡಿಯಲ್ಲಿ ಶಿಕ್ಷಣ ಪಡೆಯಲು ಕೇವಲ ಒಂದು ಅಂಕದ ಕೊರತೆ ಆಯಿತು. ಇದಕ್ಕಾಗಿ ಆತ ಮರು ಮೌಲ್ಯಪಾನಕ್ಕೆ ಹಾಕಿದ್ದ. ಅದರ ಫಲಿತಾಂಶದಲ್ಲಿ ಯಾವುದೇ ವ್ಯತ್ಯಯ ಆಗಲಿಲ್ಲ ಅಷ್ಟೇ ಬಂತು ಆಗ ಆತ ಕೋರ್ಟ್ ಮೊರೆ ಹೋಗಿದ್ದ.

ಹೀಗೆ ಹಲವಾರು ಬಾರಿ ನೋಟಿಸ್ ನೀಡಿದ ನಂತರ ಶಿಕ್ಷಣ ಇಲಾಖೆ ಸ್ಪಂದಿಸಿತು ಮತ್ತು ಮರು ಪೌಲ್ಯಮಾಪನಕ್ಕೆ ಒಪ್ಪಿ ಕೊಂಡಿತು. ಆದರೆ ಇದು ತೆಗೆದುಕೊಂಡದ್ದು ಬರೋಬ್ಬರಿ 3 ವರ್ಷಗಳ ಸಮಯ. ಆದರೆ ಆತನಿಗೆ ನಿರಾಶೆ ಆಗಲಿಲ್ಲ, ಮರು ಮೌಲ್ಯ ಮಾಪನದ ನಂತರ 1 ಅಂಕದ ಆಸೆಯಲ್ಲಿದ್ದ ಹುಡುಗನಿಗೆ 28 ಅಂಕ ಹೆಚ್ಚಾಯಿತು. ಇದರಿಂದಾಗಿ ಆತನ ಅಂಕ 80.4% ಕ್ಕ್ ಹೆಚ್ಚಾಯಿತು. ಮೂರು ವರ್ಷಗಳ ಸತತ ಹೋರಾಟದಿಂದ ಈ ಗೆಲುವು ಸಿಕ್ಕಿದೆ ಎನ್ನುತ್ತಾರೆ ಶಾಂತಾನು.

Comments (0)
Add Comment