14 ನೇ ವರ್ಷದಲ್ಲಿ ” ಕೋಟ್ಯಾಧಿಪತಿಯಲ್ಲಿ ” ಯಲ್ಲಿ ಕೋಟಿ ಗೆದ್ದಿದ್ದ ಈ ಹುಡುಗ ಇಂದು IPS ಅಧಿಕಾರಿ. ಕೋಟಿ ಇದ್ದರು ಹಿಗ್ಗದೇ ಕಷ್ಟಪಟ್ಟು ಪರೀಕ್ಷೆಯಲ್ಲಿ ತೇರ್ಗಡೆ.

ಪ್ರತಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಎಂಬುದು ಇದ್ದೆ ಇರುತ್ತದೆ. ಭಗವಂತ ಎಲ್ಲರಿಗೂ ಅದೃಷ್ಟವನ್ನು ಕೊಡುತ್ತಾನೆ ಆದರೆ ಆ ಅದೃಷ್ಟವನ್ನು ಅಥವಾ ಅದೃಷ್ಟದೊಂದಿಗೆ ಕೊನೆವರೆಗೂ ಬದುಕುವುದು ನಾವು ಕಲಿಯಬೇಕು. ಸಿಕ್ಕಿದ ಅದೃಷ್ಟವನ್ನು ಕೈ ಚೆಲ್ಲೆದರೆ ಮನುಷ್ಯ ಯಾವುದಕ್ಕೂ ಬೇಳೆಯಿಲ್ಲದೆ ಕೊನೆಗೆ ಯಾರು ಜೊತೆಗಿಲ್ಲ ಎಂದು ಕೊರಗುವ ಹಂತಕ್ಕೆ ಬರುತ್ತಾನೆ. ಆದರೆ ನಾವು ಇಂದು ನೋಡಲು ಹೊರಟ ಈ ಹುಡುಗ ಮಾತ್ರ ಬಲು ಅದೃಷ್ಟವಂತ ಆದರೆ ಕೇವಲ ಅದೃಷ್ಟ ಮಾತ್ರ ಅಲ್ಲ ಆತನ ದೃಢ ಮನಸ್ಸಿನ ಪ್ರಯತ್ನವೂ ಇದೆ.

ಅವರ ಹೆಸರು ರವಿ ಮೋಹನ್ ಸೈನಿ. 2001 ನೆಯ ಇಸವಿಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಕ್ವಿಜ್ ಗೇಮ್ ನಲ್ಲಿ 1 ಕೋಟಿ ರೂಪಾಯಿ ಗೆದ್ದು ಬಹಳ ಚರ್ಚೆಯಲ್ಲಿ ಇದ್ದರು. ಆದರೆ ಅವರ ಅದೃಷ್ಟದ ಓಟ ಅಲ್ಲಿಗೆ ನಿಲ್ಲಲಿಲ್ಲ ಅದೃಷ್ಟದ ಜೊತೆಗೆ ಅವರ ಪೂರ್ವ ನಿರ್ಧಾರಿತ ಯೋಜನೆಗಳು ಮತ್ತು ಅವರ ದೃಢ ಸಂಕಲ್ಪದ ಫಲವಾಗಿ ಅವರು ದೇಶದ ಉನ್ನತ ಪರೀಕ್ಷೆಗಳಲ್ಲಿ ಒಂದಾದ ಐಪಿಎಸ್ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಇದೀಗ ಐಪಿಎಸ್ ರವಿ ಮೋಹನ್ ಸೈನಿ ಆಗಿದ್ದಾರೆ. ಪ್ರಸ್ತುತ ಅವರು ಗುಜರಾತಿನ ಪೋರ ಬಂದರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2001 ರಲ್ಲಿ ಅವರು ಬರಿ 14 ವರ್ಷದಲ್ಲಿ ಕೌನ್ ಬನೆಗಾ ಕರೋಡ್ ಪತಿ ಗೇಮ್ ನಲ್ಲಿ 15 ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಅವರು ಒಂದು ಕೋಟಿ ರೂಪಾಯಿ ಗೆದ್ದು ತಮ್ಮ ಅದೃಷ್ಟದ ಬಾಗಿಲು ತೆರೆದಿದ್ದರು. ಅದೇ ಅದೃಷ್ಟದ ಜೊತೆಗೆ ಮುಂದುವರಿದು ತಮ್ಮ ಇಂದಿನ ಜೀವನದಲ್ಲಿ ಅವರು ಐಪಿಎಸ್ ಅಧಿಕಾರಿ ಆಗಿದ್ದಾರೆ. ಇವರ ತಂದೆ ಕೂಡ ಭಾರತೀಯ ನೇವಿಯಲ್ಲಿ ಸೇವೆ ಸಲ್ಲಿಸಿದ್ದು ಮಗ ಕೂಡ ದೇಶ ಸೇವೆಗೆ ಮುಂದಾಗಿದ್ದಾರೆ ಇವರ ಮುಂದಿನ ಜೀವನ ಯಶಸ್ಸು ಕಾಣಲಿ ಎಂದು ಹಾರೈಸೋಣ.

Comments (0)
Add Comment