20,000 ಹೂಡಿಕೆ ಮಾಡಿ ಆರಂಭಿಸಿದ ಈ ಕಂಪನಿ 4 ವರ್ಷದಲ್ಲಿ 720ಕೋಟಿ ವ್ಯವಹಾರ ಮಾಡುವ ಕಂಪನಿ. ಯಾರು ಇದರ ಸ್ಥಾಪಕರು? ಯಾವುದು ಆ ಕಂಪನಿ?

ಅದೆಷ್ಟೋ ಯುವ ಪ್ರತಿಭೆಗಳು ನಮ್ಮಲ್ಲಿ ಇವೆ. ತಮ್ಮ ಹಠ ಮತ್ತು ಸಾಧನೆ ಮಾಡಬೇಕು ಎಂಬ ಚಲ ಅವರನ್ನು ಯಾವುದೇ ಭಯಕ್ಕೆ ಬೀಳದಂತೆ ಮಾಡುತ್ತದೆ ಮತ್ತು ಧೈರ್ಯದಿಂದ ಮುನ್ನುಗ್ಗಲು ಅನುವು ಮಾಡಿ ಕೊಡುತ್ತದೆ. ಹೀಗೆ ಒಂದು ಸಫಲತೆಯ ಕಥೆ ಇದು. ಇವರ ಹೆಸರು ಪಂಕುಡಿ ಶ್ರೀವಾತ್ಸವ್ ಮೂಲತಃ ಉತ್ತರ ಪ್ರದೇಶದವರು. ತಮ್ಮ ವಿಧ್ಯಾಭ್ಯಾಸ ಅಲ್ಲೇ ಮುಗಿಸಿ ಹೊಸತಾಗಿ ಏನಾದರೂ ಸಾಧನೆ ಮಾಡಬೇಕು, ತನ್ನದೇ ಆದ ಸಾಮ್ರಾಜ್ಯ ಸ್ಥಾಪಿಸಬೇಕು ಎಂದು ಕನಸು ಕಾಣುತ್ತಿದ್ದ ಹುಡುಗಿ.

ತಮ್ಮ 25ನೆಯ ವಯಸ್ಸಿನಲ್ಲಿ 20,000 ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಕಂಪನಿಯೇ Grabhouse ಆ್ಯಪ್. ಹೌದು ಈ ಅಪ್ಲಿಕೇಶನ್ ರೆಂಟಲ್ ಹೌಸ್ ಅಂದರೆ ಬಾಡಿಗೆ ಮನೆ ಹುಡುಕುವ ಜನರಿಗೆ ಬಹಳ ಅನುಕೂಲ ವಾಗಿತ್ತು. ಇದು ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಮಾಹಿತಿ ಪ್ರಕಾರ 2016ರ ವೇಳೆಗೆ ಇದರ ವಹಿವಾಟು 720ಕೋಟಿ ರೂಪಾಯಿ ದಾಟಿತ್ತು. ನಂತರ 2016ರಲ್ಲ್ Quikr ಕಂಪನಿಯು ಇದನ್ನು ತನ್ನ ತೆಕ್ಕೆಗೆ ಹಾಕಿ ಕೊಂಡಿತ್ತು. ಅಂದರೆ ಪಂಕುದಿ ಅವರು ಇದನ್ನು ಮಾರಾಟ ಮಾಡಿ ಬಿಟ್ಟರು.

ಹಾಗೆ ಅವರು ಸುಮ್ಮನೆ ಕೂರಲಿಲ್ಲ ಮತ್ತೆ 2019ರ ವೇಳೆಗೆ ಮತ್ತೆ ಪಂಕುಡಿ ಎಂಬ ಸೋಶಿಯಲ್ community ಸ್ಥಾಪನೆ ಮಾಡಿದರು. ಇದು ಕೇವಲ ಮಹಿಳೆಯರ ಹಿತಾಸಕ್ತಿಗೆ ಸ್ಥಾಪಿಸಲಾಗಿತ್ತು. ಆದರೆ ದುರ್ದೈವ ಎಂದರೆ 2021ರ ಡಿಸೆಂಬರ್ 24ರಂದು ತಮ್ಮ ಮನೆಯಲ್ಲಿ ಇವರು ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ತೀರಿಕೊಂಡರು. ಕೇವಲ 32 ವರ್ಷದ ಇವರು ಎಲ್ಲರೂ ನೇನೆಸುವಂತಹ ಸಾಧನೆ ಮಾಡಿ ಹೋಗಿದ್ದರು.

Comments (0)
Add Comment