21,000 ಕೋಟಿ ಬೆಲೆಯ ಭಾರತದ ಕಂಪನಿ ಕೇವಲ 3 ವರ್ಷದಲ್ಲಿ 100 ಕೋಟಿಗೆ ಇಳಿದಿದೆ. ನೆಲಕಚ್ಚುವುದು ಅಂದರೆ ಇದೆ ಇರಬೇಕು.

ಮಾರುಕಟ್ಟೆಯಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ತನ್ನ ಪಾರುಪತ್ಯ ಮೆರೆದಿದ್ದ ಈ ಪೆಟಿಎಂ ಕಂಪನಿ ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ಎಲ್ಲರ ಕಣ್ಣು ಕುಕ್ಕುತಿತ್ತು. ಕಾರಣ ಮಾರುಕಟ್ಟೆಯಲ್ಲಿ ಅದಕ್ಕಿದ್ದ ಹಿಡಿತ ಹಾಗೇನೇ ಡಿಜಿಟಲ್ ಭಾರತದಲ್ಲಿ ಅದು ಜನರಿಗೆ ನೀಡುತ್ತಿದ್ದ ಸೇವೆಗಳು. ತನ್ನ ಜನಪ್ರಿಯ ಕ್ಯಾಶ್ ಬ್ಯಾಕ್ ಆಫರ್ ಇಂದ ಮಾರುಕಟ್ಟೆಯಲ್ಲಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿದ ಪೆಟಿಎಂ ಮಾಲ್ ೨೧೦೦೦ ಕೋಟಿ ಬೆಲೆ ಬಾಳುವ ಕಂಪನಿ ಆಗಿ ಹೊರಹೋಮಿತ್ತು. ದೇಶದ ಯೂನಿಕಾರ್ನ್ ಆಗಿ ಹೇಳಿಕೊಂಡಿತ್ತು. ಆದರೆ ಅದರ ಇಂದಿನ ಬೆಲೆ ೧೦೦ ಕೋಟಿ ಆಗಿದೆ.

paytm ಹಣ ವರ್ಗಾವಣೆ ಮಾತ್ರವಲ್ಲದೆ, ಶಾಪಿಂಗ್ ಅಪ್ಲಿಕೇಶನ್ ಹಾಗೇನೇ ಶೇರ್ ಮಾರ್ಕೆಟ್ ವ್ಯವಹಾರ ಮಾಡುವ ಸೇವೆಯನ್ನು ಕೂಡ ಜನರಿಗೆ ನೀಡುತ್ತಿದೆ. ಇದೆಲ್ಲ ಇದೆ ಕಾರಣಕ್ಕೆ ಇದು ಒಂದು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಈ ಪೆಟಿಎಂ ಭಾರತದವರದ್ದು ಆಗಿದ್ದರು ಕೂಡ ಈ ಕಂಪನಿ ಗೆ ಬಂಡವಾಳ ಮುಖ್ಯವಾಗಿ ಬಂದಿದ್ದು ಚೀನಾದಿಂದ. ಚೀನಾದ ಅಲಿಬಾಬಾ ಹಾಗು ಅಂಟ್ ಫೈನಾನ್ಸಿಯಲ್ ಇಂದ. ಈ ಎರಡರ ಬಂಡವಾಳ ಈ ಪೆಟಿಎಂ ಅಲ್ಲಿ ಸುಮಾರು ೪೩% ಹೊಂದಿತ್ತು. ಈ ಬೆಲೆ ಕಡಿಮೆ ಆಗಲು ಕಾರಣ ಪೆಟಿಎಂ ಮಾಲ್ ನಿಂದ.

ಪೆಟಿಎಂ ಮಾಲ್ ಎನ್ನುವ ಈ ಕಾಮರ್ಸ್ ಅಪ್ಲಿಕೇಶನ್, ಇದೊಂದು ಅಮೆಜಾನ್ ಹಾಗು ಫ್ಲಿಪ್ಕಾರ್ಟ್ ನಂತಹದೇ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೂಡ ಎಲ್ಲರ ರೀತಿಯಲ್ಲೇ ಆನ್ಲೈನ್ ಶಾಪಿಂಗ್ ನಡೆಸುವ ಕಂಪನಿ ಆಗಿದೆ. ಉಳಿದ ಕಂಪನಿ ಗಳಿಗೆ ಹೋಲಿಸಿದರೆ ಈ ಪೆಟಿಎಂ ಮಾಲ್ ಅಲ್ಲಿ ಉತ್ತಮ ಕ್ಯಾಶ್ ಬ್ಯಾಕ್ ಸೌಲಭ್ಯಗಳು ಇರುತ್ತಿತ್ತು. ಆದರೆ ಏಕೋ ಏನೋ ಗೊತ್ತಿಲ್ಲ, ಉದ್ಯಮ ಉತ್ತಮವಾಗಿ ಬೆಳೆಯುತ್ತಿಲ್ಲ ೩ ವರ್ಷದ ಹಿಂದೆ ೨೧ ಸಾವಿರ ಕೋಟಿ ಇದ್ದ ಪೆಟಿಎಂ ಮಾಲ್ ನ ಬೆಲೆ ಇಂದು ಕೇವಲ ೧೦೦ ಕೋಟಿಗೆ ತಗ್ಗಿದೆ. ಈ ಚೀನಾದ ಕಂಪನಿ ಅಲಿಬಾಬಾ ಹಾಗು ಅಂಟ್ ಫೈನಾನ್ಸಿಯಲ್ ತಮ್ಮ ಎಲ್ಲ ೪೩% ಶೇರ್ ಗಳನ್ನೂ ೪೫೯ ಪ್ರತಿ ಶೇರ್ ಬೆಲೆ ರೀತಿಯಲ್ಲಿ ಹೊರತೆಗೆದಿದೆ.

ಮಿಲಿಯಾನ್ ಗಟ್ಟಲೆ ಹೂಡಿಕೆ ಮಾಡಿದ್ದ ಅಲಿಬಾಬಾ ಹಾಗು ಅಂಟ್ ಫೈನಾನ್ಸಿಯಲ್ ಇಂದು ತಮ್ಮ ಬಂಡವಾಳ ಹೊರತೆಗೆದಾಗ ಅವರಿಗೆ ಸಿಕ್ಕಿದ್ದು ಕೇವಲ ೭ ಮಿಲಿಯಾನ್ ಅಂದರೆ ೭೦ ಲಕ್ಷ ಡಾಲರ್. ಈ ಕುಸಿತಕ್ಕೆ ಮುಖ್ಯ ಕಾರಣ ಅಮೆಜಾನ್ ಹಾಗು ಫ್ಲಿಪ್ಕಾರ್ಟ್ ನಂತಹ ದೊಡ್ಡ ದೊಡ್ಡ ಕಂಪನಿ ಗಳ ಜೊತೆಗಿನ ಸ್ಪರ್ಧೆ ಅಂದರೆ ತಪ್ಪಾಗಲಾರದು. ಇನ್ನು ಈ ಕಂಪನಿ ಮುಚುತೋ ಇಲ್ಲವೋ ಎಂದು ಕಾದು ನೋಡಬೇಕಿದೆ. ಸಂಸ್ಥೆ ಪ್ರಕಾರ ಭಾರತ ಸರಕಾರ ಇತ್ತೀಚಿಗೆ ತಂಡ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಪ್ಲಾಟ್ಫಾರ್ಮ್ ಎನ್ನುವ ಯೋಜನೆ ಜೊತೆ ಮರಳಿ ಈ ಬಿಸಿನೆಸ್ ಗೆ ಗಟ್ಟಿಯಾಗಿ ಮರಳಲಿದ್ದೇವೆ ಎಂದು ಹೇಳಿದೆ.

Comments (0)
Add Comment