35000 ರೂಪಾಯಿಯಲ್ಲಿ ನಿಮ್ಮ ಬೈಕ್ ಅನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿ. ಸಿಂಗಲ್ ಚಾರ್ಜ್ ನಲ್ಲಿ 150ಕಿಮೀ ಚಲಿಸುತ್ತದೆ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹೆಚ್ಚಾಗುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ, ಹೆಚ್ಚಿನ ಮೈನ್ಟೈನ್ ಖರ್ಚು ಇದೆಲ್ಲದರಿಂದ ದೂರ ಉಳಿಯಲು ಹೆಚ್ಚಿನ ಸಂಖ್ಯೆಯ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದಾರೆ. ಇದರಿಂದ ಪೆಟ್ರೋಲ್ ಡೀಸೆಲ್ ಗೆ ಖರ್ಚು ಮಾಡುವ ಹಣ ಉಳಿಯುತ್ತದೆ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಕೂಡ. ಹಾಗಾದರೆ ಇದೀಗಾಗಲೇ ಪೆಟ್ರೋಲ್ ಡೀಸೆಲ್ ವಾಹನ ಖರೀದಿ ಮಾಡಿರುವವರು ಚಿಂತೆಯಲ್ಲಿ ಇದ್ದಾರೆ ನಿನಗೊಂದು ಒಳ್ಳೆಯ ಸುದ್ದಿ ಇದೆ. ಅದೇನೆಂದರೆ ನಿಮ್ಮ ಪೆಟ್ರೋಲ್ ಮೂಲಕ ಚಲಿಸುವ ಬೈಕ್ ಅನ್ನು ಈಗ ಎಲೆಕ್ಟ್ರಿಕ್ ವಾಹನ ವಾಗಿ ಪರಿವರ್ತಿಸಬಹುದು.

ಹೌದು ಹೀಗೆ ಏನಿದು ಬನ್ನಿ ತಿಳಿಯೋಣ. ಮಹಾರಾಷ್ಟ್ರ ಮೂಲದ ಸ್ಟಾರ್ಟ್ ಅಪ್ ಕಂಪನಿ ಒಂದು ಈ ಹೊಸ ಯೋಜನೆಯೊಂದಿಗೆ ಬಂದಿದೆ. ಈ ಕಂಪನಿಯ ಹೆಸರು ಗೋ ಗೊ A1 ಎಂದು. ಇವರು ಒಂದು ಹೊಸ ಮಾದರಿಯ EV ಕಿಟ್ ತಯಾರಿ ಮಾಡಿದ್ದು. ಇದನ್ನು ನಿಮ್ಮ ಬೈಕ್ ನ ಇಂಜಿನ್ ಗೆ ರಿಪ್ಲೇಸ್ ಮಾಡಬೇಕು. ಇದಕ್ಕೆ 35000ಖರ್ಚು ತಗುಲುತ್ತದೆ. ಇದು ಭಾರತೀಯ ಸರ್ಕಾರದಿಂದ ಮಾನ್ಯತೆ ಪಡೆದಿದೆ. ಮತ್ತು ಇದಕ್ಕೆ RTO ದಿಂದ ಕೂಡ ಗ್ರೀನ್ ಸಿಗ್ನಲ್ ಇದೆ. ಆದ್ದರಿಂದ ಇದರ ಅಡ್ಡ ಪರಿಣಾಮದ ಚಿಂತೆ ಮಾಡುವ ಯಾವುದೇ ಅಗತ್ಯ ಇಲ್ಲ.

ಇದನ್ನು ಒಮ್ಮೆ ಬದಲಿಸಿಕೊಂಡರೆ ಕಂಪನಿ ಇದಕ್ಕೆ ಮೂರು ವರ್ಷ ವಾರಂಟಿ ಕೂಡ ಕೊಡುತ್ತದೆ. ಇದರಿಂದಾಗಿ ಯಾವುದೇ ಭಯ ಪಡುವ ಅವಶ್ಯಕತೆ ಕೂಡ ಇರುವುದಿಲ್ಲ. ಈ ಒಂದು ಹೊಸ ಯೋಜನೆ ಅದೆಷ್ಟೋ ಜನರಿಗೆ ಅನುಕೂಲ ಆಗಿದೆ. ನೀವು ಕೂಡ ಪೆಟ್ರೋಲ್ ಬೆಳೆಯಿಂದ ರೋಸಿ ಹೋಗಿದ್ದರೆ ಈ ಒಂದು ಪ್ರಯತ್ನ ಮಾಡಿ ನೋಡಿ ,ನಿಮಗೂ ಕೂಡ ಲಾಭ ಆಗಬಹುದು. ಹೆಚ್ಚುತ್ತಿರುವ ತೈಲ ಬೆಲೆ ನಡುವೆ ಇಂತಹ ವಿಷಯಗಳು ಜನರಿಗೆ ತುಸು ನೆಮ್ಮದಿ ನೀಡುತ್ತವೆ. ಅದೇ ರೀತಿ ಕಡಿಮೆ ಬೆಲೆಯಲ್ಲಿ ಖರೀದಿ ಕೂಡ ಮಾಡಬಹುದು. ಇದು ಶೇರ್ ಮಾಡಿ ಅಗತ್ಯವಿರುವವರಿಗೆ ಸಹಾಯ ಕೂಡ ಆಗಬಹುದು.

Comments (0)
Add Comment