Interesting

ಇನ್ನು ಮುಂದೆ ನಿಮ್ಮ ವಿಲ್ ಅನ್ನು ನ್ಯಾಯಾಲಕ್ಕೆ ಹೋಗದೆ ಆನ್ಲೈನ್ ಮೂಲಕವೇ ಮಾಡಬಹುದು. ಖರ್ಚು ಕೂಡ ಕಡಿಮೆ.

ಜನರು ಸಾಮಾನ್ಯವಾಗಿ ತಪ್ಪು ಕಲ್ಪನೆ ಹಾಗು ಭಯದಿಂದ ತಮ್ಮ ವಿಲ್ (Will) ಮಾಡುವುದನ್ನು ಸಾದ್ಯವಾದಷ್ಟು ಮುಂದೂಡುತ್ತಾರೆ. ಆದರೆ ಈ ವಿಲ್ ಎನ್ನುವುದು ಕೇವಲ ಕಾನೂನು ದಾಖಲೆಗಳಲ್ಲದೆ (Legal Document) ಆತನ ಮರಣಾನಂತರ ಅವನ ಏನಾದರು ಇಚ್ಛೆ ಇದ್ದರೆ ಅದನ್ನು ಪೂರ್ತಿ ಮಾಡುವ ಸಾಧನ ಹಾಗೇನೇ ಅವನ ಪ್ರೀತಿಪಾತ್ರರಿಗೆ ಬೇಕಾದದ್ದನ್ನು ಮಾಡಲು ಇರುವ ಸಾಧನ. ವಿಲ್ಲನ್ನು ಸಾಂಪ್ರದಾಯಿಕವಾಗಿ ಮಾಡುವುದು ಸಾಕಷ್ಟು ಸಮಯ ಹಾಗು ಹಣ ಬೇಕಾಗುತ್ತದೆ. ಆದರೆ ಇದನ್ನು ನೀವು ಸುಲಭವಾಗಿ ಇದನ್ನು ಆನ್ಲೈನ್ ಅಲ್ಲೇ ಮಾಡಬಹುದು ಅದು ಕೂಡ ಕಡಿಮೆ ವೆಚ್ಚದಲ್ಲಿ ಹಾಗು ಸರಳವಾಗಿ.

ಈ ವಿಲ್ ಅನ್ನು ಆನ್‌ಲೈನ್‌ನಲ್ಲಿ ಮಾಡಬಹುದು ಎಂದು ಹೆಚ್ಚಿನ ಜನರಿಗೆ ಇನ್ನೂ ತಿಳಿದಿಲ್ಲ. ಹೆಚ್ಚು ಸಮಯ ಕಾಯಲು ಸಾಧ್ಯವಾಗದ ಮತ್ತು ದೂರ ದೂರ ಹೋಗಲು ಬಯಸದವರಿಗೆ ಆನ್‌ಲೈನ್ ವಿಲ್ ವಿಶೇಷವಾಗಿದೆ ಹಾಗೇನೇ ವಕೀಲರನ್ನು ಕೂಡ ಸಂಪರ್ಕಿಸುವ ಅಗತ್ಯವಿಲ್ಲ. ಭಾರತದಲ್ಲಿ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ವಿಲ್ ಮಾಡಬಹುದು. ಆದಾಗ್ಯೂ, ಮುಸ್ಲಿಂ ಸಮುದಾಯಕ್ಕೆ ಷರಿಯಾ ಕಾನೂನುಗಳಲ್ಲಿ ಪರಿಣತಿಯ ಅಗತ್ಯತೆ ಇರುವುದರಿಂದಾಗಿ, ಅವರು ವೈಯಕ್ತಿಕ ಸೇವೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮನಿಕಂಟ್ರೋಲ್ (MoneyControl) ಎನ್ನುವ ಒಂದು ಆನ್ಲೈನ್ ನ್ಯೂಸ್ ವೆಬ್ಸೈಟ್ ಪ್ರಕಾರ, ಆನ್‌ಲೈನ್ ವಿಲ್‌ನ ವೆಚ್ಚವು ಸೇವಾ ಪೂರೈಕೆದಾರರು ಮತ್ತು ವಿಲ್‌ನ ಸಂಕೀರ್ಣತೆಯನ್ನು ಅವಲಂಬಿಸಿರುತ್ತದೆ. ಕೆಲವು ಈ ಸೇವೆ ನೀಡುವ ಪ್ಲಾಟ್‌ಫಾರ್ಮ್‌ಗಳು ನಿಗದಿತ ಶುಲ್ಕಕ್ಕಾಗಿ ಸರಳ ವಿಲ್‌ಗಳನ್ನು ನೀಡುತ್ತವೆ, ಆದರೆ ಇತರವುಗಳು ನಿಮ್ಮ ಸ್ವತ್ತುಗಳು ಮತ್ತು ಫಲಾನುಭವಿಗಳ ಸಂಖ್ಯೆಯನ್ನು ಆಧರಿಸಿ ಶುಲ್ಕ ವಿಧಿಸುತ್ತವೆ. ಉದಾಹರಣೆಗೆ, WillJini ಎನ್ನುವ ಸಂಸ್ಥೆ ಶುಲ್ಕ ರೂ 5,500 ರಿಂದ ಪ್ರಾರಂಭವಾಗುತ್ತದೆ ಮತ್ತು Vakilsearch ಎನ್ನುವ ಸಂಸ್ಥೆ ಶುಲ್ಕ ರೂ 4,499 ರಿಂದ ಪ್ರಾರಂಭವಾಗುತ್ತದೆ. ಇದು ಮುದ್ರಾಂಕ ಶುಲ್ಕ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ವಿಲ್ ಯಾವ ಸಂಧರ್ಭದಲ್ಲಿ ಮಾಡಬೇಕಾಗುತ್ತದೆ?

ನಿಮ್ಮ ಮದುವೆ, ಮಕ್ಕಳ ಜನನ, ಆಸ್ತಿ ಸಂಪಾದನೆ ಮತ್ತು ವ್ಯಾಪಾರವನ್ನು (Business) ಪ್ರಾರಂಭಿಸುವಾಗ ಅಥವಾ ಯಾವುದೇ ಇತರ ಪ್ರಮುಖ ಘಟನೆಯ ನಿಮ್ಮ ಜೀವನದಲ್ಲಿ ನಡೆಯುವ ಸಮಯದಲ್ಲಿ ನೀವು ವಿಲ್ ಅನ್ನು ಸಿದ್ಧಪಡಿಸಬೇಕು. ಇದರ ಹೊರತಾಗಿ, ಪ್ರತಿ 3-5 ವರ್ಷಗಳಿಗೊಮ್ಮೆ ನಿಮ್ಮ ವಿಲ್ ಅನ್ನು ನವೀಕರಿಸುವುದು ಸಹ ಮುಖ್ಯವಾಗಿದೆ ಇದರಿಂದ ಸಮಯಕ್ಕೆ ಅನುಗುಣವಾಗಿ ಹಾಗು ಸಂದರ್ಭಗಳಿಗೆ ಅನುಗುಣವಾಗಿ ನಿಮ್ಮ ಇಚ್ಛೆಯನ್ನು ಮುದ್ರಿಸಬಹುದು.

will online

ಆನ್‌ಲೈನ್‌ನಲ್ಲಿ ವಿಲ್ ಸಿದ್ಧಪಡಿಸುವುದು ಅನುಕೂಲಕರವಾಗಿದ್ದರೂ ಸಹ ಅದನ್ನು ಸಂಪೂರ್ಣವಾಗಿ ಇಂಟರ್ನೆಟ್‌ನಲ್ಲಿ ಆನ್ಲೈನ್ ಮುಕಾಂತರ ಮಾಡಲು ಸಾಧ್ಯವಿಲ್ಲ. ಭಾರತೀಯ ಉತ್ತರಾಧಿಕಾರ ಕಾಯಿದೆ, 1925 ರ ಪ್ರಕಾರ, ಕನಿಷ್ಠ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಉಯಿಲಿಗೆ ಸಹಿ ಹಾಕಬೇಕಾಗುತ್ತದೆ.

ಆನ್ಲೈನ್ ನಲ್ಲಿ ಮಾಡುವುದರಿಂದ ಆಗುವ ಸಾಧಕ ಭಾದಕಗಳೇನು?

ಆನ್‌ಲೈನ್ ವಿಲ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ, ಪ್ರಕ್ರಿಯೆಯು ಸಾಕಷ್ಟು ಸರಳವಾಗಿದೆ. ಯಾವುದೇ ಹೆಚ್ಚಿನ ಕಾನೂನು ಜ್ಞಾನದ ಅಗತ್ಯವಿಲ್ಲ. ಅಲ್ಲದೆ, ಆನ್‌ಲೈನ್ ವಿಲ್ ಮಾಡಲು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಆನ್‌ಲೈನ್ ವಿಲ್ ಮಾಡುವ ಪ್ರಕ್ರಿಯೆಯು ಶೀಘ್ರವಾಗಿ ಮತ್ತು ತ್ವರಿತವಾಗಿ ಪೂರ್ಣಗೊಳ್ಳುತ್ತದೆ. ಅಲ್ಲದೆ, ಆನ್‌ಲೈನ್ ವಿಲ್ ಮಾಡುವ ಪ್ರಕ್ರಿಯೆಯು ಕಾನೂನು ಪ್ರಕಾರ ಮಾನ್ಯವಾಗಿದೆ ಮತ್ತು ತಪ್ಪುಗಳ ಸಂಖ್ಯೆ ಕಡಿಮೆ ಆಗಿರುತ್ತದೆ.

ಆದಾಗ್ಯೂ, ಆನ್‌ಲೈನ್‌ನಲ್ಲಿ ವಿಲ್ ಮಾಡಲು ಕೆಲವು ಅನಾನುಕೂಲತೆಗಳಿವೆ. ಮೊದಲನೆಯದಾಗಿ, ಆನ್‌ಲೈನ್ ಉಯಿಲು ಮಾಡುವುದರಿಂದ ಸಾಮಾನ್ಯವಾಗಿ ಏನಾದರು ಸಂಶಯ ಬಂದರೆ ವಕೀಲರಿಂದ ಮುಖಾಮುಖಿಯಾಗಿ ಮಾಡುವ ಅದೇ ಮಟ್ಟದ ಸಲಹೆಯನ್ನು ಪಡೆಯುವುದು ಸಾಧ್ಯವಾಗುವದಿಲ್ಲ. ಆನ್‌ಲೈನ್ ವಿಲ್ ಮಾಡುವ ಪ್ರಕ್ರಿಯೆಯು ವೈಯಕ್ತಿಕ ತೀರ್ಮಾನ ಸಂಪೂರ್ಣವಾಗಿ ಸಂಯೋಜಿಸಲು ಸಾಧ್ಯವಾಗದಿರಬಹುದು. ದೊಡ್ಡ ಸ್ವತ್ತುಗಳು ಅಥವಾ ಸಂಕೀರ್ಣ ಕುಟುಂಬ ಸನ್ನಿವೇಶಗಳಂತಹ ಕೆಲವು ಜನರಿಗೆ ಆನ್‌ಲೈನ್ ವಿಲ್ ಮಾಡುವುದು ಸೂಕ್ತವಲ್ಲ. ಆದ್ದರಿಂದ, ಆನ್‌ಲೈನ್ ವಿಲ್ ಮಾಡುವ ಮೊದಲು ವ್ಯಕ್ತಿಗಳು ತಮ್ಮ ಸಂದರ್ಭಗಳನ್ನು ಮತ್ತು ಅಗತ್ಯಗಳನ್ನು ಪರಿಗಣನೆಗೆ ತಗೊಳ್ಳುವುದು ಬಹಳ ಮುಖ್ಯವಾಗುತ್ತದೆ.

Leave a Reply

Your email address will not be published. Required fields are marked *