SIM card Rule: ಇಂತವರಿಗೆ 3 ವರ್ಷಗಳ ವರೆಗೆ ಹೊಸ ಸಿಮ್ ಕಾರ್ಡ್ ಸಿಗುವುದಿಲ್ಲ, ಕಠಿಣ ಕಾನೂನು ತರಲಿದೆ ಕೇಂದ್ರ ಸರಕಾರ. ತಪ್ಪಿಯೂ ಈ ಕೆಲಸ ಮಾಡಬೇಡಿ.
Sim Card Rule: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರವು ದೊಡ್ಡ ಹೆಜ್ಜೆ ಇಡಲು ನಿರ್ದರಿಸಿದಂತಿದೆ. ಇತರರ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿ ಮಾಡುವವರು ಅಥವಾ ವಂಚನೆ ಮೆಸೇಜ್ ಕಳಿಸುವ ಜನರನ್ನು ಬ್ಲಾಕ್ಲಿಸ್ಟ್ ಗೆ ಹಾಕಲು ಸರಕಾರ ಚಿಂತನೆ ನಡೆಸಿದೆ. ಸೈಬರ್ ಭದ್ರತೆಗೆ ಸವಾಲು ಎಂದು ಅವರನ್ನು ಈ ಲಿಸ್ಟ್ ಗೆ ಹಾಕಲಾಗುತ್ತದೆ. ಇಷ್ಟೇ ಅಲ್ಲದೆ ಅವರನ್ನು 3 ವರ್ಷಗಳ ವರೆಗೆ ಬೇರೆ ಹೊಸ ಸಿಮ್ ಕಾರ್ಡ್ ಪಡೆಯಲು ಕೂಡ ನಿಷೇದ ಮಾಡಬಹುದು. ಸೈಬರ್ ಅಪರಾಧವನ್ನು ತಡೆಯಲು ಇದು ಮಹತ್ತರ ಹೆಜ್ಜೆ ಎಂದರೆ ತಪ್ಪಾಗಲಾರದು.
CNBC ವರದಿ ಪ್ರಕಾರ ಸರಕಾರದ ಟೆಲಿಕಾಮ್ ಇಲಾಖೆ ಈ ಕಾನೂನು ಜಾರಿಗೊಳಿಸುವ ಎಲ್ಲ ಸಿದ್ಧತೆ ನಡೆಸಿಕೊಳ್ಳಲು ಅನುವು ನೀಡಿದೆ. ಈ ಬ್ಲಾಕ್ಲಿಸ್ಟ್ ಅಲ್ಲಿ ಕಾಣಿಸಿಕೊಂಡಿರುವ ಎಲ್ಲ ಸಿಮ್ ಗಳನ್ನೂ ನಿಷೇದ ಮಾಡಲಾಗುತ್ತದೆ. ಹಾಗೆ 6 ರಿಂದ 3 ವರ್ಷಗಳ ವರೆಗೆ ಅವರು ಹೊಸ ಸಿಮ್ ಅನ್ನು ಖರೀದಿ ಮಾಡುವುದರಿಂದಲೂ ನಿರ್ಬಂಧ ಹೇರಲಾಗುತ್ತದೆ. ಈ ಪ್ರಕ್ರಿಯೆ ಶುರು ಮಾಡುವ ಮುನ್ನ ಸಂಬಂಧ ಪಟ್ಟವರಿಗೆ ನೋಟೀಸ್ ಜಾರಿಗೆ ಮಾಡಲಾಗುತ್ತದೆ. ಪ್ರತಿಕ್ರಿಯೆ ನೀಡಲು ಅವರಿಗೆ 7 ದಿನಗಳ ಕಾಲಾವಕಾಶವನ್ನು ಕೂಡ ನೀಡಲಾಗುತ್ತದೆ.
ಈಗಾಗಲೇ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಸರಕಾರ ಅನೇಕ ಕ್ರಮ ಕೈಗೊಂಡಿದೆ. ಕೆಲವು ದಿನಗಳಿಂದ ಸೈಬರ್ ವಂಚನೆ ಸಂಬಂಧಿಸಿದಂತೆ ಕಾಲರ್ ಟ್ಯೂನ್ ಗಳನ್ನೂ ಕೂಡ ಕರೆ ಮಾಡುವ ಸಂಧರ್ಭದಲ್ಲಿ ಕೇಳಿಸಲಾಗುತ್ತದೆ. ಈ ಅಭಿಯಾನ 3 ತಿಂಗಳುಗಳ ಕಾಲ ನಡೆಯಲಿದೆ. ಅದಲ್ಲದೆ ನವೆಂಬರ್ 15 ರವರೆಗೆ 6.69 ಲಕ್ಷ ಸಿಮ್ ಕಾರ್ಡ್ ಗಳನ್ನೂ 1,32,000 IMEI ನಂಬರ್ ಗಳನ್ನೂ ಬ್ಲಾಕ್ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ.