ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಕೇಪು ನೀಲಿ ಬಣ್ಣ ಬದಲು ಕೇವಲ ಹಸಿರು ಬಣ್ಣದ ಬಟ್ಟೆಯಿಂದ ಯಾಕೆ ಮುಚ್ಚಲಾಗುತ್ತದೆ?
ಕಟ್ಟಡ ನಿರ್ಮಾಣ ಕೈಗಾರಿಕೆ ಇನ್ನು ಹಲವು ತರಹದ ನಿರ್ಮಾಣದ ಕೆಲಸಗಳು ಎಲ್ಲ ಕಡೆ ನಡೆಯುತ್ತಾ ಇರುತ್ತದೆ. ಇದನ್ನು ನೀವು ನಿಮ್ಮ ಸುತ್ತ ಮುತ್ತ ಕೂಡ ಗಮನಿಸಿರಬಹುದು. ಈ ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಾವು ಸಾಮಾನ್ಯವಾಗಿ ಗಮನಿಸಿವುದು ಯಂತ್ರಗಳು ಜನರು ಹಾಗು ಕಟ್ಟಡ ಎಷ್ಟು ಎತ್ತರ ಇದೆ ಎನ್ನುವುದು. ಆದರೆ ನೀವು ಅದೇ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡದ ಮೇಲೆ ಹಸಿರು ಬಣ್ಣದ ಹೊದಿಕೆ ಅಥವಾ ಬಟ್ಟೆಯಿಂದ ಮುಚ್ಚಲಾಗುತ್ತದೆ. ಯಾಕೆ ಅನ್ನುವ ಸಂಶಯ ನಿಮಗೆ ಬಂದೆ ಬಂದಿರುತ್ತದೆ. ಅದರ ಹಿಂದಿನ ವಿಷಯ ನಾವು ನಿಮಗೆ ಹೇಳುತ್ತೇವೆ. (Why green colour cloth covered in construction site)
ಇದರ ಹಿಂದಿನ ಕಾರಣವೇನು?
ಈ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡುವುದರ ಹಿಂದೆ ಬಹು ದೊಡ್ಡ ಕೆಲಸಗಾರರ ಸಂಖ್ಯೆ ಇರುತ್ತದೆ. ಈ ಕೆಲಸಗಾರ ಗಮನ ಬೇರೆ ಕಡೆಗೆ ಹೋಗ ಬರದೆನ್ನುವ ಉದ್ದೇಶಕ್ಕೆ ಈ ಹಸಿರು ಹೊದಿಕೆ ಹಾಕಿರುತ್ತಾರೆ. ಅದೇ ರೀತಿ ಎತ್ತರದ ಕಟ್ಟದಲ್ಲಿ ಕೆಲಸ ಮಾಡುವಾಗ ಕೆಲಸಗಾರರು ಎತ್ತರಕ್ಕೆ ಹೆದರಿ ಯಾವುದೇ ದುರಂತ ಆಗಬಾರದು ಎನ್ನುವ ಕಾರಣಕ್ಕೆ ಕೆಲಸಗಾರರ ಗಮನ ಒಂದೇ ಕಡೆ ಇರಲಿ ಎನ್ನುವ ಉದ್ದೇಶ ಕೂಡ ಇದರ ಹಿಂದೆ ಇದೆ. ಇನ್ನು ಕಟ್ಟಡ ಕೆಲವು ಧೂಳುಗಳು ಹೊರಗಡೆ ಸಾಮಾನ್ಯ ಜನರಿಗೆ ಹಾಗು ಬೇರೆ ಕಟ್ಟಡಕ್ಕೆ ಹೊರಬಾರದು ಎನ್ನುವ ಉದ್ದೇಶಕ್ಕೆ ಈ ಹಸಿರು ಬಣ್ಣದ ಹೊದಿಕೆ ಹಾಕಲಾಗಿದೆ.
ಅದೇ ರೀತಿ ಈ ಕಟ್ಟಡಗಳಿಗೆ ಹಸಿರು ಬಣ್ಣನೆ ಏಕೆ ಹೊದಿಕೆ ಮಾಡುತ್ತಾರೆ? ಯಾಕೆ ಬೇರೆ ಬಣ್ಣ ಬಳಸಲ್ಲ? ಇದಕ್ಕೂ ಕೂಡ ಕಾರಣ ಇದೆ. ಬಿಳಿ ಬಣ್ಣ ಹಾಗು ಕೆಂಪು ಬಣ್ಣ ಹೋಲಿಸಿದರೆ ಹಸಿರು ಬಣ್ಣ ದೂರದ ವರೆಗೂ ಸುಲಭವಾಗಿ ಗೋಚರಿಸುತ್ತದೆ. ಅಲ್ಲದೆ ರಾತ್ರಿ ಕೆಲಸ ಮಾಡುವಾಗ ಈ ಹಸಿರು ಬಣ್ಣ ಸ್ವಲ್ಪ ಬೆಳಕನ್ನು ಕೂಡ ಪ್ರತಿಫಲಿಸುತ್ತದೆ. ಆದ್ದರಿಂದ ಕೆಲಸದ ಸುಲಭತೆಗಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಹಸಿರು ಹೊದಿಕೆಗಳನ್ನ ಹಾಕಿರುತ್ತಾರೆ.