Politics

ಕರ್ನಾಟಕ ಬಸ್ ರೇಟ್ 15% ಹೆಚ್ಚಾಗುತ್ತಿದೆ ಆದರೂ ಶಕ್ತಿ ಯೋಜನೆ ಮಹಿಳೆಯರಿಗೆ ಮುಂದುವರೆಯುತ್ತದೆ ಎಂದ ಕಾಂಗ್ರೆಸ್ ಸರಕಾರ.

ಕರ್ನಾಟಕ ಕಾಂಗ್ರೆಸ್ (Karnataka Congress Government) ಚುನಾವಣೆ ಮುಂಚೆ ಎಲ್ಲ ಫ್ರೀ ಫ್ರೀ ಎಂದಾಗ ಕರುನಾಡಿನ ಜನತೆ ಕಾಂಗ್ರೆಸ್ ಗೆ ಮುಗಿಬಿದ್ದು ವೋಟ್ ಹಾಕಿದ್ದೆ ಹಾಕಿದ್ದು. ಬಹುಮತ ಅಲ್ಲದೆ ಸೂಪರ್ ಮೆಜಾರಿಟಿ ಪಡೆದು ಇದೀಗ ಅಧಿಕಾರ ನಡೆಸುತ್ತಿದೆ. ಆದರೆ ಒಂದು ಕಡೆ ಎಲ್ಲ ಫ್ರೀ ಕೊಟ್ಟು ನಾವು ರಾಜ್ಯ ಉದ್ದಾರ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ಹಾಗು ಅದರ ಅನುಯಾಯಿಗಳು, ಉಳಿದ ಕಡೆ ಬೆಲೆ ಹೆಚ್ಚಳ ಆಗುತ್ತಿರುವುದಕ್ಕೆ ಯಾವುದೇ ಉತ್ತರ ನೀಡಲು ಮುಂದಕ್ಕೆ ಬರುತ್ತಿಲ್ಲ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಂದು ಅಂದರೆ ಜನವರಿ 2 ಕ್ಕೆ ಕ್ಯಾಬಿನೇಟ್ ಸಭೆಯಲ್ಲಿ ಬಸ್ ಟಿಕೆಟ್ ದರವನ್ನು 15% ಹೆಚ್ಚಿಸಲು ಒಪ್ಪಿಗೆ ಕೊಟ್ಟಿದ್ದಾರೆ. (15% hike in bus fares) ಹೊಸ ವರ್ಷಕ್ಕೆ ಶುಭ ಸುದ್ದಿ ಕೇಳುವ ಬದಲು ಕಹಿ ಸುದ್ದಿ ಕೇಳಿದಂತಾಯಿತು ಕರ್ನಾಟಕದ ಜನತೆಗೆ. ಹೆಚ್ ಕೆ ಪಾಟೀಲ್ ಮಾದ್ಯಮಕ್ಕೆ ಮಾತಾಡಿ ಸರಕಾರಿ ಬಸ್ ನೌಕರರ ಖರ್ಚು ಹಾಗು ಡೀಸೆಲ್ ನ ಹೆಚ್ಚಾದ ಬೇಡಿಕೆ ಇಂದಾಗಿ ಖರ್ಚು ಜಾಸ್ತಿ ಆಗಿದೆ. ಆ ಖರ್ಚನ್ನು ಸರಿದೂಗಿಸಲು ಈ ದರ ಹೆಚ್ಚಳ ಮಾಡಲಾಗಿದೆ ಎಂದು ಮಾದ್ಯಮಕ್ಕೆ ಹೇಳಿದ್ದಾರೆ.

ಹಾಗೇನೇ ಕಳೆದ ಬಾರಿ ಟೀಕೆ ದರ ಹೆಚ್ಚಳ ಆಗಿದ್ದು 2015 ರಲ್ಲಿ ಅದು ಕೂಡ ಡೀಸೆಲ್ ಬೆಲೆ 60.90 ರೂಪಾಯಿ ಪ್ರತಿ ಲೀಟರ್ ಗೆ ಇದ್ದಾಗ. ಹಾಗಾಗಿ ಇವಾಗ ಮಾಡಿದ ಬೆಲೆ ಹೆಚ್ಚಳ ತಪ್ಪಲ್ಲ ಎಂದು ತಮಗೆ ತಾವೇ ಸಮಜಾಯಿಸಿ ನೀಡಿಕೊಂಡಿದ್ದಾರೆ. 10 ವರ್ಷದ ಹಿಂದೆ ದೈನಂದಿನ ಡೀಸೆಲ್ ಬಳಕೆ 9.16 ಕೋಟಿ ಆಗಿತ್ತು. ಅದು ಇಂದು 13.21 ಕೋಟಿ ಗೆ ಏರಿಕೆ ಆಗಿದೆ. ಹಾಗೇನೇ ನೌಕರರ ಖರ್ಚು 12.95 ಕೋಟಿ ಇದ್ದಿದ್ದು ಇಂದು ಅದು 18.36 ಕೋಟಿ ಗೆ ಏರಿದೆ. ಇದರಿಂದಾಗಿ ಬೆಲೆ ಪರಿಷ್ಕರಣೆ ಅವಶ್ಯಕ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ ಸರಕಾರ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ ಶಕ್ತಿ ಯೋಜನೆ ಗ್ಯಾರಂಟಿ ಮುಂದುವರೆಯುತ್ತದೆ. ಎಂದು ಹೇಳಿದ್ದಾರೆ. ಅಲ್ಲದೆ ಈಗಾಗಲೇ ಸರಕಾರಿ ನೌಕರರ ಪ್ರೊವಿಡೆಂಡ್ ಫಂಡ್ 2000 ಕೋಟಿ ರೂಪಾಯಿ ಬಾಕಿ ಕೂಡ ಚುಕ್ತಾ ಮಾಡಲಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *