Interesting

Deposit Insurance: ಬ್ಯಾಂಕ್ ದಿವಾಳಿಯಾದರೆ ನಿಮಗೆ ಸಿಗುವ ಹಣದ ವಿಮೆ ಮೊತ್ತವನ್ನು ಹೆಚ್ಚು ಮಾಡಲಿದೆ ಮೋದಿ ಸರಕಾರ?

ಭಾರತದ ಕೇಂದ್ರ ಸರಕಾರ ಜನರು ಬ್ಯಾಂಕ್‌ನಲ್ಲಿ ಇಟ್ಟಿರುವ ಉಳಿತಾಯ ಹಣದ ಮೇಲಿನ ವಿಮೆ (Deposit Insurance) ಮೊತ್ತವನ್ನು ಹೆಚ್ಚಿಸಲಿದೆ. ಈಗಾಗಲೇ ವಿಮೆ ಮೊತ್ತ 5 ಲಕ್ಷದವರೆಗಿದೆ. ಇದನ್ನು 8-12 ಲಕ್ಷದ ವರೆಗೆ ಏರಿಸುವ ನಿರ್ಣಯ ಇದೇ ಪೆಬ್ರವರಿ ತಿಂಗಳಿನ ಅಂತ್ಯದೊಳಗೆ ಮಾಡಲಿದೆ. ಕೇಂದ್ರದ ವಿತ್ತಿಯ ಬಜೆಟ್ ನಂತರ ಆರ್ಥಿಕ ಸೆಕ್ರೆಟರಿ ಈ ವಿಮೆ ಮಿತಿ ಹೆಚ್ಚಿಸುವ ಬಗ್ಗೆ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.

ನ್ಯೂ ಇಂಡಿಯಾ ಕೋಪರೇಟಿವ್ ಬ್ಯಾಂಕ್ ಈಗಾಗಲೇ RBI ಇಂದ ಬ್ಯಾನ್‌ಗೆ ಒಳಗಾಗಿದೆ. ಈ ಸೊಸೈಟಿಯಲ್ಲಿ ೧೨೨ ಕೋಟಿಯ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಈ ಕೋಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ಹಾಗು ಆತನ ಸಹಚರನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಬ್ಯಾಂಕ್ ಸಾಲ ನೀಡುವುದು ಹಾಗು ಇಲ್ಲಿ ಠೇವಣಿ ಹಿಂಪಡೆಯುವುದನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಈ ಸಮಯದಲ್ಲಿ ಕೇಂದ್ರ ಸರಕಾರದ ವಿಮೆ ಹೆಚ್ಚಳದ ಸುದ್ದಿ (Deposit Insurance hike) ಬಂದಿದೆ. ಇದರಿಂದ ಉಳಿತಾಯ ಮಾಡುವವರಿಗೆ ಸ್ವಲ್ಪ ನೆಮ್ಮದಿ ಸಿಗಲಿದೆ.

bank collapse

ಬ್ಯಾಂಕ್ ಒಂದು ವೇಳಿ ದಿವಾಳಿ ಘೋಷಣೆ ಮಾಡಿದರೆ ಈ ಬ್ಯಾಂಕ್ ನಲ್ಲಿ ಹಣ ಇಟ್ಟ ಜನರಿಗೆ ವಿಮೆ ಮೂಲಕ ಹಣ ಸಿಗಲಿದೆ. ಇದನ್ನು ಎಲ್ಲಾ ಬ್ಯಾಂಕ್‌ಗಳಲ್ಲಿ ಮಾಡಲಾಗಿದೆ. ಉಳಿತಾಯ, FD, RD, current ಅಕೌಂಟ್ ಇಂತಹ ಖಾತೆಗಳಿಗೆ ಈ ವಿಮೆ ರಕ್ಷಣೆ ಒದಗಿಸುತ್ತದೆ. ಇದೀಗ ಈ ವಿಮೆ 5 ಲಕ್ಷದವರೆಗೆ ಇದೆ. ಭಾರತ ಬಿಟ್ಟು ಮೆಕ್ಸಿಕೊ, ಜಪಾನ್ ಹಾಗು ಟರ್ಕಿ ದೇಶಗಳು 100% ವಿಮೆಯ ಭರವಸೆ ನೀಡುತ್ತದೆ. ಈ ವಿಮೆ ಎಲ್ಲಾ ದೇಶಗಳಲ್ಲಿ ಕೂಡಾ ಜಾರಿಯಲ್ಲಿದೆ.

Leave a Reply

Your email address will not be published. Required fields are marked *