Sports

IPL 2025 ರ ಸೆಮಿ ಫೈನಲ್ ಗೆ ಅರ್ಹತೆ ಪಡೆಯುವ 4 ತಂಡಗಳನ್ನು ಹೇಳಿದ ಏ ಬಿ ಡಿ ವಿಲಿಯರ್ಸ್. ಚೆನ್ನೈ ಸೇರಿಸದ ವಿಲಿಯರ್ಸ್.

ಬಹುನಿರೀಕ್ಷಿತ IPL 2025 ಇಂದು ಅಂದರೆ 22 ಮಾರ್ಚ್ ಗೆ ಶುರುವಾಗಲಿದೆ. ಎರಡು ತಿಂಗಳುಗಳ ಕಾಲ ನಡೆಯುವ ಈ ಆವೃತ್ತಿಯಲ್ಲಿ 10 ತಂಡಗಳು ಪ್ರತಿಷ್ಠಿತ IPL ಕಪ್ ಗೆಲ್ಲಲು ಸಿದ್ಧವಾಗಿದೆ. ದಕ್ಷಿಣ ಆಫ್ರಿಕಾ ದ ಮಾಜಿ ನಾಯಕ ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಜೆಂಡ್ ಆಗಿರುವಂತಹ ಏ ಬಿ ಡಿ ವಿಲಿಯರ್ಸ್ ಈ ಬಾರಿಯ ಸೆಮಿ ಫೈನಲ್ ಗೆ ತಲುಪುವ 4 ತಂಡಗಳ ಭವಿಷ್ಯ ನುಡಿದ್ದಿದ್ದಾರೆ. ಸಂದರ್ಶನ ಒಂದರಲ್ಲಿ ಈ ಮಾತು ಹೇಳಿದ್ದಾರೆ

ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮತೋಲನದಲ್ಲಿದೆ. ಮುಂಬೈ ಇಂಡಿಯನ್ಸ್ ಹಾಗು ಗುಜರಾತ್ ಟೈಟಾನ್ಸ್ ಜೊತೆಗೆ ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಸೆಮಿ ಫೈನಲ್ ಗೆ ತಲುಪಬಲ್ಲುದು ಎಂದು ಹೇಳಿದ್ದಾರೆ.

ipl 2025
IPL 2025

ಆದರೆ 5 ಬಾರಿ IPL ಕಪ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತಮ್ಮ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಏ ಬಿ ಡಿ ವಿಲಿಯರ್ಸ್. ಐಪಿಎಲ್ 2024 ರಲ್ಲಿ CSK ಹಾಗು RCB ನಡುವಿನ ಮಾಡು ಇಲ್ಲವೇ ಮಾಡಿ ಪಂದ್ಯದ ಬಗ್ಗೆ ಇಲ್ಲಿ ಉಲ್ಲೇಖಿಸಿದ್ದಾರೆ. ಈ ಪಂದ್ಯದಲ್ಲಿ ಋತುರಾಜ್ ಗೈಕ್ವಾಡ್ CSK ತಂಡದ ನೇತೃತ್ವ ವಹಿಸಿದ್ದರು. ಈ ಪಂದ್ಯದಲ್ಲಿ ಸ್ವಲ್ಪದರಲ್ಲೇ CSK ಸೋತಿತ್ತು. CSK ತಂಡ ಬಲಿಷ್ಠ ತಂಡವಾಗಿದೆ ಆದರೆ ಅವರ 4 ಪ್ಲೇಆಫ್ ತಂಡದಲ್ಲಿ CSK ಯನ್ನ IPL 2025 ಸೇರಿಸಲಿಲ್ಲ ವಿಲಿಯರ್ಸ್.

Read This: Rishab Pant :ರಿಷಬ್ ಪಂತ್ ರನ್ನ ತಂಡದಿಂದ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್. ಕಾರಣ ಬಿಚ್ಚಿಟ್ಟ ಸುನಿಲ್ ಗವಾಸ್ಕರ್.

ಇನ್ನು ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾ ತಂಡದ ವಿರುದ್ಧ ಸೆಣಸಲಿದೆ. ಬೆಂಗಳೂರು ತಂಡಕ್ಕೆ ಹೊಸ ಸಾರಥಿಯಾಗಿ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ. ಇನ್ನು ಕೋಲ್ಕತ್ತಾದ ಹೊಸ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆಯಾಗಿದ್ದಾರೆ. 18 ನೇ ಆವೃತ್ತಿಯ IPL 2025 ಈ ಪಂದ್ಯ RCB ಗೆಲ್ಲಬೇಕು ಎನ್ನುವುದು ದೇಶಾದ್ಯಂತ ಇರುವ ಎಲ್ಲ ಅಭಿಮಾನಿಗಳ ಪ್ರಾರ್ತನೆಯಾಗಿದೆ.

Leave a Reply

Your email address will not be published. Required fields are marked *