Chandana News

Kannada Trending News

Chandana News

Kannada Trending News

Politics

ಬಾಂಗ್ಲಾದೇಶ ದ ಭೂಭಾಗ ಕಬಳಿಸಿದ ಮಯನ್ಮಾರ್ ಬಂಡುಕೋರ ಸಂಘಟನೆ. ಅಮೇರಿಕ ಕನಸಿಗೆ ದಾರಿ ಮಾಡಿಕೊಡುತ್ತಿರುವ ಬಾಂಗ್ಲಾ ನೂತನ ಪ್ರಧಾನಿ ಯೂನಸ್.

ಮಯನ್ಮಾರ್ (Mayanmar) ದೇಶದ ಬಲಿಷ್ಠ ಮೂಲ ನಿವಾಸಿ ಗುಂಪು ಬರ್ಮಾ ದ ಸೇನೆ ವಿರುದ್ಧ ಹೋರಾಡುತ್ತ ಇದೆ. ಇದೀಗ ಇದೆ ಬಂಡುಕೋರ ಸಂಘಟನೆ ಬಾಂಗ್ಲಾದೇಶದ ಭೂಮಿ ವಶಪಡಿಸಿಕೊಂಡಿದೆ ಎಂದು ಹೇಳಿದೆ. ಒಟ್ಟಾರೆ 271 ಕಿಲೋ ಮೀಟರ್ ನಷ್ಟು ಬಾಂಗ್ಲಾದೇಶದ ಜಾಗ ಇದೀಗ ಬಂಡುಕೋರರ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಬಂಡುಕೋರ ಸಂಘಟನೆ ಹೆಸರು ಅರಕಾನ್ ಸೇನೆ (Arakan Army).

ಈ ವಿಷಯ ಈಗಾಗಲೇ ಅನೇಕ ಭಾರತೀಯ ಮಾದ್ಯಮದಲ್ಲಿ ಬಂದಿದೆ ಆದರೆ ಬಾಂಗ್ಲಾದೇಶದ (Bangladesh) ಮಾಧ್ಯಮ ಇದರ ಬಗ್ಗೆ ಯಾವುದೇ ಮಾಹಿತಿ ಪ್ರಸಾರ ಮಾಡುತ್ತಿಲ್ಲ. ಕಾರಣ ಅಲ್ಲಿನ ಹೊಸ ಪ್ರಧಾನಿ ಯೂನಸ್. ಕೆಲ ಮಾಹಿತಿ ಪ್ರಕಾರ ಈ ಅರಕಾನ್ ಆರ್ಮಿ ಹಾಗು ಬಾಂಗ್ಲಾ ಇಂಟರಿಮ್ ಪ್ರಧಾನಿ ಯೂನಸ್ ನಡುವೆ ಒಳ ಒಪ್ಪಂದ ನಡೆದಿದೆ ಎನ್ನಲಾಗಿದೆ. ಇದೆಲ್ಲದರ ಹಿಂದೆ ಅಮೇರಿಕ ಇದೆ ಎನ್ನುವುದಕ್ಕೆ ಈ ಬೆಳವಣಿಗೆಗಳು ಸಾಕ್ಷಿ.

2021 ರಲ್ಲಿ ಮಯನ್ಮಾರ್ ನಲ್ಲಿ ಪ್ರಜಾಪ್ರಭುತ್ವ ಕೆಡವಿ ಮಿಲಿಟರಿ ಆಡಳಿತ ಹೇರಲಾಗಿತ್ತು. ಅಮೇರಿಕ (USA) ಹಾಗು ಜಪಾನ್ (Japan) ನಂತಹ ದೇಶಗಳು ಇಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವ ಸ್ಥಾಪನೆ ಆಗಬೇಕೆಂದು ಅನೇಕ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಈ ಬಂಡುಕೋರ ಸಂಘಟನೆ ಅರಕಾನ್ ಆರ್ಮಿ ಗೆ ಶಸ್ತ್ರಾಸ್ತ್ರ ಕೂಡ ಪೂರೈಕೆ ಮಾಡುತ್ತಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡುತ್ತಿದೆ.

ಇನ್ನು ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ (Sheik Hasina) ತನ್ನ ಪ್ರಧಾನಿ ಹುದ್ದೆ ಬಿಡುವ ಮುಂಚೆಯೇ ಅಮೇರಿಕಾದ ಮೇಲೆ ದೊಡ್ಡ ಆಪಾದನೆ ಮಾಡಿದ್ದರು. ಬಾಂಗ್ಲಾ ಹಾಗು ಮಯನ್ಮಾರ್ ಗಡಿಯಲ್ಲಿ ಒಂದು ಹೊಸ ಕ್ರಿಶ್ಚಿಯನ್ ರಾಷ್ಟ್ರ ಮಾಡುವ ಪ್ರಸ್ತಾವನೆ ಶೇಕ್ ಹಸೀನಾ ಬಳಿ ಇಟ್ಟಿತ್ತು ಅಮೇರಿಕ. ಇದರ ಬದಲಿಗೆ ಜೀವನ ಪೂರ್ತಿ ಬಾಂಗ್ಲಾ ದೇಶ ಹಸೀನಾ ಬಳಿ ಇರುವಂತೆ ಅಮೇರಿಕ ನೋಡಿಕೊಳ್ಳುತ್ತೆ. ಇದಕ್ಕೆ ಹಸೀನಾ ಒಪ್ಪಲಿಲ್ಲ. ಅದರ ನಂತರ ಸರಕಾರ ಕೆಡವಿ ಅಮೇರಿಕಾದ ಆಪ್ತ ಯೂನಸ್ ನನ್ನ ಬಾಂಗ್ಲಾದೇಶ ಅಧ್ಯಕ್ಷನನ್ನಾಗಿ ಅಮೇರಿಕ ನೇಮಕ ಮಾಡಿತ್ತು.

bangla mayanmar

ಇದೀಗ ನಡೆದ ಘಟನೆ ಶೇಕ್ ಹಸೀನಾ ಅಂದು ಮಾಡಿದ ಅಪಾದನೆಗೂ ಲಿಂಕ್ ಆಗುತ್ತಿವೆ. ಇಷ್ಟೆಲ್ಲಾ ಘಟನೆ ಆದರೂ ಕೂಡ ಬಾಂಗ್ಲಾದೇಶ ಪ್ರಧಾನಿ ಯಾವುದೇ ಮಾತಾಡದೆ ಇರುವುದು ಎಲ್ಲದಕ್ಕೂ ಪುಷ್ಟಿ ಕೊಡುವಂತಿದೆ. ಹಾಗೇನೇ ಇನ್ನು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಕೂಡ 2025 ಕೊನೆಯಲ್ಲಿ ಅಥವಾ 2026 ರ ಹೊಸ್ತಿಲಿಗೆ ಎಂದು ಯೂನಸ್ ಘೋಷಣೆ ಮಾಡಿದ್ದೂ. ಅಲ್ಲಿವರೆಗೆ ಭಾರತಕ್ಕೆ ಕಷ್ಟ ತಪ್ಪಿದ್ದಲ್ಲ.

Leave a Reply

Your email address will not be published. Required fields are marked *