Banking rules: ಬ್ಯಾಂಕ್ ಗಳು ನಿಮ್ಮ ಕೆಲಸ ಮಾಡಿ ಕೊಡದೆ ಹೋದರೆ, ನೀವು ಈ ಮೂಲಕ ಅವರ ವಿರುದ್ಧ ದೂರು ನೀಡಬಹುದು.
Banking rules: ಬ್ಯಾಂಕ್ ಗ್ರಾಹಕರು ಪದೇ ಪದೇ ಒಂದೇ ಕೆಲಸಕ್ಕೆ ಅನೇಕ ಬಾರಿ ಅಲೆದಾಡುವ ಪ್ರಮೇಯ ಬಂದೆ ಬರುತ್ತದೆ. ನಮ್ಮ ನಿಮ್ಮ ದೈನಂದಿನ ಜೀವನದಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ. ಅಥವಾ ಬ್ಯಾಂಕ್ ನಲ್ಲಿ ಕೆಲಸ ಮಾಡುವವರು ನಿಮ್ಮ ಬಳಿ ಅನುಚಿತವಾಗಿ ಕೂಡ ವರ್ತನೆ ಮಾಡಿರಬಹುದು. ಇದೆಲ್ಲ ನಡೆದರೆ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಡಿ. ಆರ್ ಬಿ ಐ ಗ್ರಾಹಕರಿಗೆ ಕೆಲವು ಹಕ್ಕುಗಳನ್ನು ನೀಡಿದೆ. ಓಂಬಡ್ಸ್ಮನ್ ಯೋಜನೆಯಲ್ಲಿ ನೀವು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬಹುದು.
ಆರ್ ಬಿ ಐ (RBI) ಬ್ಯಾಂಕಿಂಗ್ ಓಂಬುಡ್ಸ್ಮನ್ ಯೋಜನೆಯನ್ನು (Banking rules) ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೋಸ್ಕರ ಈ ಯೋಜನೆ ಜಾರಿಗೆ ತರಲಾಗಿದೆ. ಅಧಿಕಾರಿಗಳ ವಿರುದ್ಧ ನೀಡುವ ದೂರುಗಳನ್ನು 30 ದಿನಗಳ ಒಳಗೆ ಬಗೆಹರಿಸಿ ಕೊಡಲಾಗುತ್ತದೆ. ಬ್ಯಾಂಕ್ ಗಳಲ್ಲಿ ಪಾರದರ್ಶಕತೆಯನ್ನು ತರಲು ಈ ಯೋಜನೆ ಜಾರಿಗೆ ತರಲಾಗಿದೆ.
ನೀವು ಬ್ಯಾಂಕ್ ಗಳಿಗೆ ಅಥವಾ NBFC ಗಳಿಗೆ ಲಿಖಿತವಾಗಿ ದೂರು ನೀಡಿದ್ದರೆ, ಅಥವಾ ಆ ದೂರನ್ನು ತಿರಸ್ಕರಿಸಿದರೆ, 30 ದಿನಗಳಲ್ಲಿ ಅದಕ್ಕೆ ಉತ್ತರ ಸಿಗದೇ ಹೋದರೆ ಹಾಗು ಸಿಕ್ಕ ಉತ್ತರ ತೃಪ್ತಿದಾಯಕವಾಗದೆ ಇದ್ದರೆ ಗ್ರಾಹಕರು 1 ವರ್ಷದ 30 ದಿನಗಳ ಒಳಗಡೆ ದೂರು ನೀಡಬೇಕು.

ಈ ಮೂರೂ ರೀತಿಯಲ್ಲಿ ದೂರು ನೀಡಬಹುದು.
ಮೊದಲನೆಯದು ಆನ್ಲೈನ್ ಮೂಲಕ https://cms.rbi.org.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀಡಲಾದ ವಿಷಯದ ಬಗ್ಗೆ ದೂರು ನೀಡುವ ಅವಕಾಶ ಕಲ್ಪಿಸಲಾಗಿದೆ.
ಎರಡನೆಯದಾಗಿ ನೀವು ಯಾವ ಕಾರಣಕ್ಕೆ ದೂರು ನೀಡುತ್ತಿದ್ದೀರಾ ಎನ್ನುವ ಬಗ್ಗೆ ಬೇಕಾದ ದಾಖಲಾತಿಗಳನ್ನು ನೇರವಾಗಿ RBI ಮೇಲ್ ಮಾಡಬಹುದು. ಅಧಿಕೃತ ಮೇಲ್ ಐಡಿ – CRPC@rbi.org.in
ಮೂರನೆಯದಾಗಿ ನೀವು ನೇರವಾಗಿ ಹೋಗಿ ದೂರು ನೀಡಬೇಕೆಂದರೆ, ನೀವು ಒಂದು ಲೆಟರ್ ಬರೆದು ಅಧಿಕೃತ ದೂರುದಾರರ ಸಹಿ ಹಾಕಿ ಎಲ್ಲ ಅಗತ್ಯ ದಾಖಲೆಗಳೊಂದಿಗೆ ದೂರನ್ನು ಈ ವಿಳಾಸಕ್ಕೆ ಕಳಿಸಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್, 4 ನೇ ಮಹಡಿ ಸೆಕ್ಟರ್ 17 ಚಂಡೀಗಡ್ – 160017.