99% ಜನರಿಗೆ ಈ ಹಣ್ಣುಗಳ ಮೇಲೆ ಸ್ಟಿಕರ್ ಯಾಕೆ ಹಾಕಿರುತ್ತಾರೆ ಎನ್ನುವ ಮಾಹಿತಿ ಇರುವುದಿಲ್ಲ. ಖರೀದಿ ಮಾಡುವಾಗ ಎಚ್ಚರಿಕೆಯಿಂದ ಖರೀದಿಸಿ.
ಸಾಮಾನ್ಯವಾಗಿ ನಾವು ನೀವು ಎಲ್ಲರು ಹಣ್ಣು ಹಂಪಲುಗಳನ್ನು ಪ್ರತಿ ವಾರ ತರುತ್ತೇವೆ. ಸಾಮಾನ್ಯವಾಗಿ ಸೇಬು, ಕಿತ್ತಳೆ ಹಾಗು ಇನ್ನಿತರ ಹಣ್ಣುಗಳನ್ನು ಖರೀದಿಸುವಾಗ ಅವುಗಳ ಮೇಲೆ ಸ್ಟಿಕರ್ ಗಳನ್ನೂ ಗಮನಿಸಿರಬಹುದು. ಇದರ ಬಗ್ಗೆ ಅಂಗಡಿಯವರ ಬಳಿ ಕೇಳಿದಾಗ ಇವು ಗುಣ ಮಟ್ಟ ಒಳ್ಳೆದಿರುತ್ತದೆ ಎಂದು ಹೇಳುವುದನ್ನು ಕೂಡ ನಾವು ಕೇಳಿರುತ್ತೇವೆ. ಈ ಸ್ಟಿಕರ್ ಇರುವ ಹಣ್ಣುಗಳನ್ನು ದುಬಾರಿ ಬೆಲೆ ಹೇಳುವುದನ್ನು ಕೂಡ ನಾವು ಗಮನಿಸಿರುತ್ತೇವೆ. ಈ ಸ್ಟಿಕರ್ ಇದ್ದಾರೆ ಒಳ್ಳೆಯ ಹಣ್ಣುಗಳು ಎಂದು ನಂಬುವ ರೀತಿಯಲ್ಲಿ ನಮಗೆ ಅಂಗಡಿಯವರು ಹೇಳುತ್ತಾರೆ.
ಅಲ್ಲದೆ ನಮ್ಮಲ್ಲಿ ಹೆಚ್ಚಿನವರು ಈ ಸೇಬಿನ ಹಣ್ಣಿನ ಮೇಲೆ ಬರೆದಿರುವುದನ್ನು ಓದುವುದಿಲ್ಲ. ಅದರ ಮಹತ್ವ ಏನು ಎನ್ನುವ ತಿಳಿದು ಕೊಳ್ಳುವ ಕುತೂಹಲ ಕೂಡ ಇರುವುದಿಲ್ಲ. ಇದರಿಂದಾಗಿಯೇ ಶೇಕಡಾ 99% ಜನರಿಗೆ ಈ ಹಣ್ಣುಗಳ ಮೇಲೆ ಇರುವ ಸ್ಟಿಕರ್ ಗಳ ಮಹತ್ವ ನೇ ಗೊತ್ತಿಲ್ಲ. ಇಂದು ಇದರ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಆಗಲೇ ಹೇಳಿದಾಗೆ ಈ ಸ್ಟಿಕರ್ ಇರುವ ಹಣ್ಣುಗಳನ್ನ ಜನರು ಉತ್ತಮ ಗುಣಮಟ್ಟದ್ದು ಎಂದು ಭಾವಿಸಿರುತ್ತಾರೆ. ಈ ಸ್ಟಿಕರ್ ಇದ್ದಾರೆ ಅದಕ್ಕೆ ದುಪ್ಪಟ್ಟು ಕೊಟ್ಟು ಬೇಕಾದರೂ ಖರೀದಿ ಮಾಡುತ್ತಾರೆ. ನಿಜವಾಗಿ ಈ ನಂಬರ್ ಗಳು ಹಣ್ಣಿನ ಗುಣಮಟ್ಟ, ಯಾವ ವಿಧಾನ ಮೂಲಕ ಬೆಳೆಸಲಾಗಿದೆ ಹಾಗು ಇದರ ಮೂರೂ ವರ್ಗಗಳ ಬಗ್ಗೆ ತಿಳಿಸಲಾಗುತ್ತದೆ.
4 ನಂಬರ್ ಇಂದ ಪ್ರಾರಂಭವಾಗುವ ಸ್ಟಿಕರ್ ನ ಹಣ್ಣುಗಳು ನಾಲ್ಕು ಅಂಕಿಯನ್ನು ಹೊಂದಿರುತ್ತದೆ ಉದಾಹರಣೆಗೆ 4046, 4987. ಈ ತರಹದ ನಂಬರ್ ಹೊಂದಿರವ ಸ್ಟಿಕರ್ ಹಣ್ಣುಗಳನ್ನು ರಾಸಾಯನಿಕ ಬಳಸಿ ಹಾಗು ಕೀಟ ನಾಶಕ ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆ. ಇಂತಹ ಹಣ್ಣುಗಳು ಕಡಿಮೆ ವೆಚ್ಚದಾಗಿರುತ್ತದೆ. ಈ ಹಣ್ಣುಗಳನ್ನು ಖರೀದಿಸುವದೆಂದರೆ ಕೀಟನಾಶಕ ಸಿಂಪಡಿಸಿದ ಹಣ್ಣು ಖರೀದಿ ಮಾಡುವುದು ಎಂದರ್ಥ.
8 ರಿಂದ ಪ್ರಾರಂಭವಾಗುವ ಸ್ಟಿಕರ್ ಗಳು ಉದಾಹರಣೆಗೆ 84131, 86534 ನಂತಹ ಹಣ್ಣುಗಳು. ಇವುಗಳು 5 ಅಂಕಿಯನ್ನು ಹೊಂದಿರುತ್ತದೆ. ಈ ಕೋಡ್ ಹೊಂದಿರುವ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾಗಿದೆ ಎಂದರ್ಥ. ಇವುಗಳು ನೈಸರ್ಗಿಕವಾಗಿ ಬೆಳೆದಂತ ಹಣ್ಣುಗಳಾಗಿರುವದಿಲ್ಲ. ಹಾಗೇನೇ ಇವುಗಳ ಬೆಲೆಯಲ್ಲಿ ಸ್ವಲ್ಪ ದುಬಾರಿಯಾಗಿರುತ್ತದೆ.
ಇನ್ನು 9 ರಿಂದ ಪ್ರಾರಂಭವಾಗುವ ಸ್ಟಿಕರ್ ಗಳು. ಉದಾಹರಣೆಗೆ 93435 ಇಂತಹ ಹಣ್ಣುಗಳು ಸಾವಯವ (Organic) ಆಗಿ ಬೆಳೆಯಲಾಗಿದೆ ಎಂದರ್ಥ. ಇದಕ್ಕೆ ಯಾವುದೇ ತರಹ ಕೀಟನಾಶಕ ಹಾಗು ರಾಸಾಯನಿಕ ವನ್ನ ಬಳಸಲಾಗಿಲ್ಲ. ಇದು ಸುರಕ್ಷಿತ ಹಾಗು ಹಣ್ಣುಗಳು ಹಾಗು ಅರೋದ್ಯಕ್ಕೂ ಕೂಡ ಉತ್ತಮವಾಗಿರುತ್ತದೆ. ಇವುಗಳ ಬೆಲೆ ಸ್ವಲ್ಪ ಹೆಚ್ಚು ದುಬಾರಿಯಾಗಿರುತ್ತದೆ.