Electric Vehicle: ಒಂದು ಚಾರ್ಜ್ ಗೆ 150 KM ರಷ್ಟು ಚಲಿಸುವ ಎಲೆಕ್ಟಿಕ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಸಾರಿಗೆ ಸಚಿವ ನಿತಿನ್ ಗಡ್ಕರಿ.
ನಿಮಗೆಲ್ಲರಿಗೆ ತಿಳಿದಿರುವಂತೆ ಭರದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ (Electric Vehicle) ಅಂದರೆ ವಿದ್ಯುತ್ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅನೇಕ ಕಂಪನಿಗಳು ತಮ್ಮ ಬಜೆಟ್ ಗೆ ಅನುಗುಣವಾಗಿ ಎಲೆಕ್ಟ್ರಿಕ್ ಬೈಕ್ ಹಾಗು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಮಾರುಕಟ್ಟೆಗೆ ಬಿಡುತ್ತಿದೆ. ಹಾಗೇನೇ ಈ ವಾಹನಗಳಲ್ಲಿ ಒಂದಲ್ಲ ಒಂದು ಹೊಸ ಲುಕ್, ಆವಿಷ್ಕಾರ ಗಳನ್ನೂ ತರಲು ಪ್ರಯತ್ನಿಸುತ್ತಿದೆ.
ಇಂತಹ ಕಂಪೆನಿಗಳಲ್ಲಿ creatara Mobility ಎನ್ನುವ ಒಂದು ಕಂಪನಿ ಹೊಸ ಎರಡು ಮಾದರಿಯ ಸ್ಟೈಲಿಶ್ ಸ್ಕೂಟರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. IN40 ಮತ್ತು VM4 ಎನ್ನುವ ಎರಡು ಹೊಸ ಮಾದರಿ ಸ್ಕೂಟರ್ಗಳು (Electric Vehicle) ಮಾರುಕಟ್ಟೆಗೆ ದಾಪುಗಾಲಿಟ್ಟಿದೆ. ಇದನ್ನು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಸ್ವತಃ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಆದರೂ ಕೂಡ ಈ ವಾಹನಗಳ ಬೆಲೆ ಇನ್ನು ತಿಳಿದು ಬಂದಿಲ್ಲ. ಮುಂದಿನ 6 ತಿಂಗಳಲ್ಲಿ ಈ ವಾಹನ ಜನರ ಕೈಗೆ ಸಿಗಲಿದೆ ಎಂದು ಕಂಪನಿ ಹೇಳಿದೆ.
ಇನ್ನು ಈ ಸ್ಕೂಟರ್ ಬಗ್ಗೆ ಹೇಳಬೇಕೆಂದರೆ 72V ನ ಪವರ್ಫುಲ್ ಬ್ಯಾಟರಿ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 150 ಕಿಲೋ ಮೀಟರ್ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಟ ವೇಗ 110 ಕಿಲೋ ಮೀಟರ್ ಇರಲಿದೆ. ಇದರಲ್ಲಿ AI ರೆಡಿ ವೆಹಿಕಲ್ ಕಂಟ್ರೋಲ್ ಯೂನಿಟ್ (VCU) ಹೊಂದಿದೆ. ಪೋರ್ಟಬಲ್ ಅಂದರೆ ಬ್ಯಾಟರಿ ಬದಲಾಯಿಸುವ ಪ್ಯಾಕ್ ಗಳನ್ನೂ ಈ ವಾಹನ ನೀಡಲಿದೆ. ಆದ್ದರಿಂದ ಚಾರ್ಜ್ ಮುಗಿದರು ಕೂಡ ಹೆದರುವ ಅವಶ್ಯಕತೆ ಇಲ್ಲ.

ಇನ್ನು ಕಂಪನಿ ಬಗ್ಗೆ ಹೇಳಬೇಕೆಂದರೆ Creatara Mobility IIT ದೆಹಲಿ ಬೆಂಬಲಿತ ಕಂಪನಿ ಆಗಿದೆ. ಈ ಸ್ಕೂಟರ್ ಸಂಪೂರ್ಣವಾಗಿ ಭಾರತದಲ್ಲಿ ತಯಾರಾಗಿದೆ (Made In India). ಇವುಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗಿದೆ. ಜನರ ವಿಶೇಷ ಭದ್ರತೆ ಕಡೆಗೆ ಈ ವಾಹನದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಗಳನ್ನೂ ಬಲ ಪಡಿಸುವಲ್ಲಿ ಕಂಪನಿ ಸಹಾಯ ಮಾಡುತ್ತಿದೆ ಎಂದು ಈ ಸಂಧರ್ಭದಲ್ಲಿ ನಿತಿನ್ ಗಡ್ಕರಿ ಹೇಳಿದ್ದಾರೆ.
- IPL 2025 ರ ಸೆಮಿ ಫೈನಲ್ ಗೆ ಅರ್ಹತೆ ಪಡೆಯುವ 4 ತಂಡಗಳನ್ನು ಹೇಳಿದ ಏ ಬಿ ಡಿ ವಿಲಿಯರ್ಸ್. ಚೆನ್ನೈ ಸೇರಿಸದ ವಿಲಿಯರ್ಸ್.
- Electric Vehicle: ಎಲೆಕ್ಟ್ರಿಕ್ ವಾಹನಗಳ ಬೆಲೆ ಬಗ್ಗೆ ದೊಡ್ಡ ಭರವಸೆ ನೀಡಿದ ನಿತಿನ್ ಗಡ್ಕರಿ. ಇನ್ನು 6 ತಿಂಗಳಲ್ಲಿ ಬದಲಾಗಲಿದೆ ಸಂಪೂರ್ಣ ಚಿತ್ರಣ.
- Water Rate Hike: 11 ವರ್ಷಗಳ ನಂತರ ಬೆಂಗಳೂರಿನಲ್ಲಿ ನೀರಿನ ಧರ ಹೆಚ್ಚಳ. ಹೊಸ ಶುಲ್ಕ ಎಷ್ಟಿರಲಿದೆ? ಇಲ್ಲಿದೆ ಮಾಹಿತಿ.
- WTC 2025 (World Test Championship): ಭಾರತ ಇಲ್ಲದ ಫೈನಲ್ ಪಂದ್ಯದ ಆಯೋಜಕರಿಗೆ ಬಾರಿ ನಷ್ಟ? ಇಂಗ್ಲೆಂಡ್ ಕೈಯಿಂದ ಜಾರಿದ ಕೋಟಿ ಕೋಟಿ ಹಣ.
- ICC Champions Trophy 2025: ಭಾರತ ಪಡೆದ ಬಹುಮಾನ ಮೊತ್ತವೆಷ್ಟು ಗೊತ್ತೇ? ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದರೆ ಸುಳ್ಳಲ್ಲ.