Interesting

Indian Railway: ಒಂದು ಟ್ರೈನ್ ತಯಾರಿಸಲು ಎಷ್ಟು ಖರ್ಚಾಗುತ್ತದೆ ಗೊತ್ತೇ? ಇದರ ಬೆಲೆ ತಿಳಿದರೆ ನೀವು ಅಚ್ಚರಿ ಪಡುತ್ತೀರಿ.

ಭಾರತೀಯ ರೈಲ್ವೆ (Indian Railway) ದೇಶದಯಾಂತ ಸಾವಿರಾರು ರೈಲ್ಗಳನ್ನು ಪ್ರತಿದಿನ ನಿರ್ವಹಣೆ ಮಾಡುತ್ತದೆ. ದೇಶದಲ್ಲಿ ಪ್ರತಿದಿನ ಪ್ರತಿ ರೈಲಿನಲ್ಲೂ ಲಕ್ಷದ್ಯಂತ ಜನ ಪ್ರಯಾಣ ನಡೆಸುತ್ತಾರೆ. ದೇಶದ ಪ್ರಜೆಗಳ ಅನುಕೂಲತೆ ಹಾಗು ಸೌಕರ್ಯ ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ದೇಶಾದ್ಯಂತ ದೊಡ್ಡ ಜಾಲವನ್ನೇ ಸೃಷ್ಟಿ ಮಾಡಿದೆ. ಇದರಿಂದಾಗಿ ದೇಶದ ಜನರು ದೇಶದಾದ್ಯಂತ ಮೂಲೆ ಮೂಲೆಗೂ ಹಾಗು ದೊಡ್ಡ ನಗರಕ್ಕೂ ಸುಲಭವಾಗಿ ಪ್ರಯಾಣ ಮಾಡಬಹುದು. ಇದಕ್ಕಾಗಿಯೇ ರೈಲ್ವೆ ಯನ್ನು ದೇಶದ ಜೀವನಾಡಿ ಎಂದು ಕರೆದಿದ್ದಾರೆ.

ಭಾರತೀಯ ರೈಲ್ವೆ (Indian Railway) ಇಡೀ ದೇಶದಲ್ಲಿ ಅನೇಕ ವಿಧವಾದ ರೈಲ್ಗಳನ್ನು ನಿರ್ವಹಣೆ ಮಾಡುತ್ತದೆ. ಗೂಡ್ಸ್ ರೈಲು, ಪಸ್ಸಂಜೆರ್ ರೈಲು, ಶತಾಬ್ದಿ, ರಾಜಧಾನಿ ಹಾಗೇನೇ ಇತ್ತೀಚಿಗೆ ಬಿಡುಗಡೆ ಯಾದ ಪ್ರೀಮಿಯಂ ರೈಲು ವಂದೇ ಭಾರತ್ ರೈಲು. ಆದರೆ ಈ ರೈಲ್ಗಳನ್ನು ತಯಾರಿಸಲು ಒಟ್ಟು ಎಷ್ಟು ಕೋಟಿ ಹಣ ಖರ್ಚಾಗುತ್ತದೆ ಎನ್ನುವ ಮಾಹಿತಿ ನಿಮಗೇನಾದರೂ ಗೊತ್ತಿದೆಯಾ? ಇಲ್ಲವಾದರೆ ಇದರ ಬಗೆಗಿನ ಮಾಹಿತಿ ಇಂದು ನಾವು ನಿಮಗೆ ನಾವು ಹೇಳುತ್ತಿದ್ದೇವೆ.

Indian railway manufacturing cost

ಭಾರತೀಯ ರೈಲುಗಳಲ್ಲಿ (Indian Railway) ಅನೇಕ ಭೋಗಿ ಗಳಿವೆ. ಸ್ಲೀಪರ್, ಸಿಟ್ಟಿಂಗ್, ಎಸಿ ಹಾಗು ಜನರಲ್ ಎಂದು ವಿಂಗಡಿಸಲಾಗಿದೆ. ಭಾರತೀಯ ರೈಲ್ವೆ ಗೆ ಒಂದು ಸಾಮಾನ್ಯ ಭೋಗಿ ತಯಾರಿಸಲು ತಗಲುವ ವೆಚ್ಚ 1 ಕೋಟಿ ಎಂದು ಹೇಳಲಾಗುತ್ತದೆ. ಆದರೆ 1 ಸ್ಲೀಪರ್ ಕೋಚ್ ತಯಾರಿಸಲು 1.5 ಕೋಟಿ ರೂಪಾಯಿ ತಗಲುತ್ತದೆ. ಒಂದು ಎಸಿ ಭೋಗಿ ತಯಾರಿಸಲು 2 ಕೋಟಿ ಖರ್ಚು ತಗುಲುತ್ತದೆ. ಭಾರತೀಯ ರೈಲುಗಳ ಒಂದು ಎಂಜಿನ್ (Train Engine) ತಯಾರಿಸಲು ಒಟ್ಟು 18 ರಿಂದ 20 ಕೋಟಿಗಳಷ್ಟ ಖರ್ಚಾಗುತ್ತದೆ. ಹಾಗಾಗಿ ಒಂದು ಟ್ರೈನ್ ನಿರ್ಮಾಣ ಮಾಡಲು ಸುಮಾರು 60 ರಿಂದ 70 ಕೋಟಿ ವೆಚ್ಚವಾಗುತ್ತದೆ. 20 ಭೋಗಿ ಗಳಿರುವ MEMU ರೈಲುಗಳನ್ನ ತಯಾರಿಸಲು 30 ಕೋಟಿ ವೆಚ್ಚವಾಗುತ್ತದೆ. 19 ಭೋಗಿಗಳ ಅಮೃತಸರ ಶತಾಬ್ದಿ LHB ರೈಲಿನ ತಯಾರಿಕೆಗೆ ಒಟ್ಟು 60 ಕೋಟಿ ವೆಚ್ಚ ತಗಲುತ್ತದೆ. ಇನ್ನು ರೈಲುಗಳ ವಿಭಿನ್ನ ರೀತಿಯಲ್ಲಿರುತ್ತದೆ ಆದ್ದರಿಂದ ಇವುಗಳ ವೆಚ್ಚಗಳು ಕೂಡ ವಿಭಿನ್ನವಾಗಿರುತ್ತದೆ.

Leave a Reply

Your email address will not be published. Required fields are marked *