Home Loan: ನಿಮ್ಮ ಗೃಹ ಸಾಲ ಪೂರ್ಣ ಪಾವತಿ ಆದ ನಂತರ ಈ ದಾಖಲೆಗಳನ್ನು ಬ್ಯಾಂಕ್ಗಳಿಂದ ಹಿಂಪಡೆಯುವುದನ್ನು ಮರೆಯದಿರಿ.
Home Loan: ಗೃಹ ಸಾಲ ನೀವು ತೆಗೆದುಕೊಳ್ಳುವಾಗ ಹೇಗೆ ಜಾಗರೂಕತೆಯಿಂದ ಇರುತ್ತೀರೋ, ಹಾಗೇನೇ ಗೃಹ ಸಾಲ ಪೂರ್ಣಗೊಂಡ ನಂತರವು ಕೂಡ ನೀವು ಜಾಗರೂಕತೆಯಿಂದ ಇರಬೇಕು. ಸಾಲ ಮರುಪಾವತಿಯಾದ ನಂತರ ಏನೆಲ್ಲಾ ದಾಖಲಾತಿ ಬ್ಯಾಂಕ್ ಇಂದ ಪಡೆಯಬೇಕೆನ್ನುವ ಸಂಪೂರ್ಣ ಮಾಹಿತಿ ನಾವಿಂದು ನಿಮಗೆ ನೀಡಲಿದ್ದೇವೆ.
ಮೂಲ ದಾಖಲಾತಿ ಪತ್ರ ಅಂದರೆ ನಮ್ಮ ಮನೆ, ಜಾಗ ದ ಆಸ್ತಿ ಪಾತ್ರ ನಾವು ಅಡವಿಟ್ಟುರುತ್ತೇವೆ. ಇದನ್ನು ನಾವು ಸಾಲ ಮರುಪಾವತಿ ನಂತರ ಬ್ಯಾಂಕ್ ಗಳಿಂದ ಹಿಂಪಡೆದುಕೊಳ್ಳುವುದು ಅತ್ಯವಶ್ಯಕ. ಇದನ್ನು ಪಡೆದುಕೊಳ್ಳುವಾಗ ಜಾಗರೂಕತೆಯಿಂದ ಪರಿಶೀಲನೆ ನಡೆಸಿಯೇ ಪಡೆದುಕೊಳ್ಳುವುದು ಉತ್ತಮ.

No Due Certificate: ಈ ನೋ ಡ್ಯೂ ಸರ್ಟಿಫಿಕೇಟ್ ಅಂದರೆ ನಮ್ಮ ಸಾಲ ಬಾಕಿ ಉಳಿದಿಲ್ಲ ಎಂದು ಬ್ಯಾಂಕ್ ಗಳು ನಮಗೆ ನೀಡುವ ಪ್ರಮಾಣ ಪತ್ರ. ಇದನ್ನು ನಾವು ಪಡೆದುಕೊಳ್ಳುವುದು ಬಹಳ ಅತ್ಯವಶ್ಯಕ. ಇದು ನಾವು ಸಾಲ ಮರುಪಾವತಿ ಮಾಡಿದ್ದೇವೆ ಎನ್ನುವುದಕ್ಕೆ ಒಂದು ಸಾಕ್ಷಿಯಾಗಿರುತ್ತದೆ. ಇದು ನೀವು ಬೇರೆ ಸಾಲ ಪಡೆಯುವಾಗ ಅಥವಾ ನೀವು ನಿಮ್ಮ ಜಾಗ ಮಾರಾಟ ಮಾಡುವಾಗ ಈ ದಾಖಲಾತಿ ಅತ್ಯವಶ್ಯಕವಾಗಿ ಬೇಕಾಗುತ್ತದೆ.
Removal of Lien : ನೀವು ಸಾಲ (Home Loan) ಪಡೆಯುವಾಗ ನಿಮ್ಮ ಪ್ರಾಪರ್ಟಿ ಯ ಹಕ್ಕು ನಿಮಗೆ ಸಾಲ ನೀಡುವವರ ಅಧೀನದಲ್ಲಿರುತ್ತದೆ. ನೀವು ಸಾಲ ಮರುಪಾವತಿ ಮಾಡಿದ ನಂತರ ಈ ಹಕ್ಕು ನಿಮ್ಮ ಹೆಸರಿಗೆ ಬಾರಿಸುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಈ ಕೆಲಸ ಕೂಡ ನೀವು ಮರೆಯದೆ ಮಾಡಬೇಕಾಗುತ್ತದೆ.
ನಾನ್ ಕಂಬಾರನ್ಸ್ ಸರ್ಟಿಫಿಕೇಟ್: Non Encumbrance Certificate (NEC) ಈ ಪ್ರಮಾಣ ಪತ್ರ ಎಲ್ಲ ಅಸ್ತಿ ವಹಿವಾಟಿನ ವಿವರಗಳನ್ನು ಕೊಡುತ್ತದೆ. ಗೃಹ ಸಾಲ (Home Loan) ಮರುಪಾವತಿ ಮಾಡುವಾಗ ಈ ಪ್ರಮಾಣ ಪತ್ರವು ಬಾಕಿ ಸಾಲದ ಮೊತ್ತವನ್ನು ತೋರಿಸುತ್ತದೆ. ಸಾಲ ಮರುಪಾವತಿ ನಂತರ ಸಾಲರಹಿತ ಪ್ರಮಾಣಪತ್ರವನ್ನು ಅದಕ್ಕೆ ಅನುಗುಣವಾಗಿ ನವೀಕರಣ ಮಾಡಬೇಕು. NDC ಜೊತೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡುವ ಮೂಲಕ ಈ ಪ್ರಮಾಣ ಪತ್ರವನ್ನು ಪಡೆಯಬಹುದು.
Loan ಮರುಪಾವತಿ statement : ಲೋನ್ (Home Loan) ಮರುಪಾವತಿ ಸ್ಟೇಟ್ಮೆಂಟ್ ಕೂಡ ಒಂದು ರೀತಿಯಲ್ಲಿ ದಾಖಲೆ ರೀತಿ ಪರಿಗಣನೆಗೆ ಒಳಪಡುತ್ತದೆ. ಆದ್ದರಿಂದ ಒಮ್ಮೆ ನೀವು ಸಾಲ ಮರುಪಾವತಿ ಮಾಡಿದ ನಂತರ ಈ ಸ್ಟೇಟ್ಮೆಂಟ್ ಪಡೆಯುವುದನ್ನು ಮರೆಯದಿರಿ.
ಇದನ್ನು ಓದಿ: ಸಾಲ ಪಡೆಯುವಾಗ ರೆಪೋ ರೇಟ್ ಅನ್ನುವುದು ಬಹಳ ಮುಖ್ಯ. ಏನಿದು ರೆಪೋ ರೇಟ್?
Post dated cheque : ಸಾಲ ಮಾಡುವಾಗ ನಾವು ಒಂದು ಚೆಕ್ಕು ಕೊಟ್ಟಿರುತ್ತೇವೆ. ಇದು ಬ್ಯಾಂಕ್ ಗೆ ಒಂದು ಪ್ರೂಫ್ ತರಹ ಕೆಲಸ ಮಾಡುತ್ತದೆ ಸಾಲ ಕೊಡುವಾಗ. ಹಾಗಾಗಿ ಸಾಲ ಮರುಪಾವತಿ ಮಾಡಿದ ನಂತರ ಈ ಪೋಸ್ಟ್ ಡೇಟೆಡ್ ಚೆಕ್ ಪಡೆಯುವುದು ಅತ್ಯವಶ್ಯಕ. ಆದ್ದರಿಂದ ಮೇಲೆ ಸೂಚಿಸಿದ ಎಲ್ಲ ದಾಖಲೆಗಳನ್ನು ಪಡೆಯುವುದು ನಿಮ್ಮ ಆರೋಗ್ಯಕರ ಆರ್ಥಿಕತೆಗೆ ಸಹಾಯವಾಗಲಿದೆ.
- 25 ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲದ ಬಡ್ಡಿ ಮೇಲೆ ಮೋದಿ ಸರಕಾರದಿಂದ ಸಿಗಲಿದೆ ಸಬ್ಸಿಡಿ. ಮಾಧ್ಯಮ ವರ್ಗ ಕುಟುಂಬಗಳಿಗೆ ಆಗಲಿದೆ ಇದರಿಂದ ಲಾಭ.
- 5 ವರ್ಷಗಳ ನಂತರ ಮತ್ತೆ 36 ಚೀನೀ ಮೊಬೈಲ್ ಅಪ್ಲಿಕೇಷನ್ ಭಾರತದಲ್ಲಿ ಲಭ್ಯವಾಗುತ್ತಿದೆ. ಟಿಕ್ಟಾಕ್(Tiktok) ಕೂಡಾ ಮರಳಲಿದೆಯಾ?
- 5G ರೇಸ್ ನಲ್ಲಿ ಗೆದ್ದ JIO. ಹೊಸ ತಂತ್ರಜ್ಞಾನ ತಂದು ಮತ್ತೊಂದು ಟೆಲಿಕಾಂ ಕ್ರಾಂತಿಗೆ ಜಿಯೋ ಸಜ್ಜು. ಏರ್ಟೆಲ್ ಹಾಗು ವಡಾಪೋನ್ ಇನ್ನು 4G ತಂತ್ರಜ್ಞಾನದಲ್ಲಿದೆ.