EMI ನಿಂದ ಹಿಡಿದು ಸಂಬಳದವರೆಗೂ ಆಗಸ್ಟ್ ೧ ರಿಂದ ಬದಲಾಗುತ್ತಿದೆ ಹಣಕಾಸಿನ ನಿಯಮಗಳು.

ಆಗಸ್ಟ್ ೧ ರಿಂದ ಹಣಕಾಸಿನ ವಿಷಯದಲ್ಲಿ ಕೆಲವು ಬದಲಾವಣೆಗಳು ನಡೆಯಲಿದೆ. ಇದರ ಪ್ರಭಾವ ಸಾಮನ್ಯ ಜನರಿಗೂ ತಟ್ಟಲಿದೆ. ಈ ಬದಲಾವಣೆಯಲ್ಲಿ ಕೆಲ ನಿಯಮಗಳು ಜನರಿಗೆ ಅನುಕೂಲ ಆಗುತ್ತವೆ ಅಂತದರಲ್ಲಿ ಸಂಬಳ, ಪೆನ್ಶನ್ ಹಾಗೂ EMI ಪಾವತಿ. RBI ಹೊಸ ನೀತಿ ಪ್ರಕಾರ ಈ ಎಲ್ಲಾ ಕೆಲಸಗಳು ಇನ್ನು ಮುಂದೆ ವಾರದ ಎಲ್ಲಾ ದಿನಗಳಲ್ಲಿ ನಡೆಯುತ್ತದೆ. ಈಗ ನಾವು ಸಂಬಳ, ಪೆನ್ಶನ್ ಗಾಗಿ ವರ್ಕಿಂಗ್ ಡೇ ದಿನಕ್ಕಾಗಿ ಕಾಯುತ್ತೇವೆ. ಬ್ಯಾಂಕ್ ಅಲ್ಲಿ ಇನ್ನು ಮುಂದೆ ಇದರ ಕ್ಲಿಯರಿಂಗ್ ವಾರದ ಎಲ್ಲಾ ದಿನ ನಡೆಯಲಿದೆ.

ರಜೆ ದಿನವೂ ಬರಬಹುದು ಸಂಬಳ : RBI ನ ನ್ಯಾಷನಲ್ ಅಟೋಮೆಟೆಡ್ ಕ್ಲಿಯರಿಂಗ್ ಹೌಸ್ ನ ಪ್ರಕಾರ ಸಂಬಳದ ಚೆಕ್ ಕ್ಲಿಯರಿಂಗ್ ವಾರದ ಎಲ್ಲಾ ದಿನಗಳಲ್ಲಿ ನಡೆಯಲಿದೆ. ಇದು ಮಾತ್ರವಲ್ಲದೆ ಕರೆಂಟ್ ಬಿಲ್, ನೀರು, EMI ಅಲ್ಲದೇ ಮ್ಯೂಚುವಲ್ ಫಂಡ್ ಅಲ್ಲಿನ ಹೂಡಿಕೆ ಹಾಗು lic ಮೇಲಿನ ಪ್ರೀಮಿಯಂ ಕೂಡಾ ವಾರದ ಏಳೂ ದಿನ ಮಾಡಬಹುದಾಗಿದೆ. ಇದೆಲ್ಲಾ ಮೊದಲು ವರ್ಕಿಂಕ್ ಡೇ ಅಂದರೆ ವಾರದ ೬ ದಿನ ಮಾತ್ರ ಇತ್ತು.

ATM ನಿಂದ ಹಣ ಪಡೆದುಕೊಳ್ಳುವುದು ಆಗಲಿದೆ ದುಬಾರಿ : ATM ಇಂದ ಬಹಳಷ್ಟು ಬಾರಿ ಹಣ ಪಡೆದುಕೊಳ್ಳುವವರು ಈ ನಿಯಮ ನೆನಪಿನಲ್ಲಿ ಇಟ್ಟುಕೊಳ್ಳಿ. ಆಗಸ್ಟ್ ೧ ರಿಂದ ಪ್ರತಿ ತಿಂಗಳು ATM ನಿಂದ ಕೇವಲ ೫ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು. ಅದಕ್ಕಿಂತ ಜಾಸ್ತಿ ಮಾಡಿದ್ದಲ್ಲಿ ನಿಮಗೆ ಅಧಿಕ ಬ್ಯಾಂಕ್ ಚಾರ್ಜ್ ಆಗಲಿದೆ. ಹಣಕಾಸು ವಹಿವಾಟಿಗೆ ೧೫-೧೭ ರೂಪಾಯಿಗೆ ಏರಿಕೆಯಾಗಿದೆ. ಹಾಣಕಾಸೇತರ ಚಟುವಟಿಕೆಗೆ 5-6 ರೂಪಾಯಿಗಳ ಬ್ಯಾಂಕ್ ಚಾರ್ಜ್ ಬೀಳಲಿದೆ. ATM ನಿಂದ ಉಚಿತ ಟ್ರಾನ್ಸಾಕ್ಶನ್ ನಂತರ ೨೦₹ ಬ್ಯಾಂಕ್ ಚಾರ್ಜ್ ತಗುಲಲಿದೆ.

ICICI ಬ್ಯಾಂಕ್ ಖಾತೆ ಹೊಂದಿರುವವರು ಕೇವಲ ತಿಂಗಳಿಗೆ ೪ ಬಾರಿ ಅಷ್ಟೇ ನಿಮ್ಮ ಖಾತೆಯಿಂದ ನಗದು ತೆಗೆಯಿರಿ. ಅದಕ್ಕಿಂತ ಜಾಸ್ತಿ ತೆಗೆದರೆ ನಿಮಗೆ ಚಾರ್ಜಸ್ ತಗುಲುತ್ತದೆ. ಒಂದು ಅಧಿಕ ಟ್ರಾನ್ಸಾಕ್ಷನ್ ಗೆ ನಿಮಗೆ ೧೫೦₹ ಬ್ಯಾಂಕ್ ಚಾರ್ಜಸ್ ಬೀಳುತ್ತದೆ. ಅದೇ ರೀತಿ ಒಬ್ಬ ತಿಂಗಳಿಗೆ ೧ ಲಕ್ಷ ಮಾತ್ರ ವ್ಯವಹಾರ ಮಾಡಲು ಬ್ಯಾಂಕ್ ನಿಯಮ ಮಾಡಿದೆ. ಅದಕ್ಕಿಂತ ಜಾಸ್ತಿ ನಗದು ವ್ಯವಹಾರ ಮಾಡಿದರೆ ಚಾರ್ಜಸ್ ಬೀಳುತ್ತದೆ.

Comments (0)
Add Comment