ನಮ್ಮ ದೇಶದಲ್ಲಿ ಮದುವೆ (Marriage) ಎಂಬುವುದು ಜೀವನದ ಒಂದು ಭಾಗ. ಜೀವಮಾನದಲ್ಲಿ ಮದುವೆ ಆಗುವುದು ಒಮ್ಮೆ ಅದನ್ನು ಸರಿಯಾಗಿ ಆಗಬೇಕು ಎಂದೂ ನಮ್ಮ ಹಿರಿಯರು ಯಾವಾಗಲೂ ಹೇಳುವುದುಂಟು. ಅದೇ ರೀತಿಯ ಒಂದು ಘಟನೆ ಇದೀಗ ಬೆಳಕಿಗೆ ಬಂದಿದೆ. ಹರ್ಯಾಣದಲ್ಲಿ ನಡೆದ ಈ ಒಂದು ಘಟನೆ ಇದೀಗ ಬಹಳಷ್ಟು ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಮದುವೆ ಮನೆಯಲ್ಲಿ ನಡೆದಾಡ್ಡಾರು ಏನು? ಬನ್ನಿ ತಿಳಿಯೋಣ.
ಹರ್ಯಾಣದ ಮೂಲದ ಚಾಂಚಲ್ ಮತ್ತು ಮೋಹಿತ್ ಎಂಬವರ ಮದುವೆ (Marriage) ಫೆಬ್ರವರಿ 25 ರಂದು ನಿಗದಿ ಆಗಿತ್ತು. ಅದಿನ ರಾತ್ರಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಹಳ್ಳಿಗಳಿಂದ ಅದ್ದೂರಿಯಾಗಿ ಮೆರವಣಿಗೆಯಲ್ಲಿ ವರನ ಕಡೆಯವರು ಚಾಂಚಲ್ ಅವರ ಮನೆಗೆ ಬಂದಿದ್ದರು. ಆದರೆ ಅಲ್ಲಿ ಬಂದಾಗ ಹುಡುಗ ಮಾಡಿದ ಒಂದು ಡಿಮ್ಯಾಂಡ್ ಇಡೀ ಮದುವೆ ಮುರಿದು ಬೀಳುವಂತೆ ಮಾಡಿದೆ. ನಾಗರಿಕ ಸಮಾಜದಲ್ಲಿ ಇಷ್ಟೊಂದು ಬದಲಾವಣೆಗಳು ಆಗುತ್ತಾ ಇದ್ದರೂ ಕೆಲವೊಮ್ಮೆ ಕೆಲವರು ಇನ್ನೂ ಹಳೆಯ ಚಾಳಿಯಲ್ಲಿ ಮುಂದುವರೆಯುತ್ತಾರೆ ಅದೇ ಇಲ್ಲಿ ಕೂಡ ನಡೆದದ್ದು.

ಹುಡುಗ ತನಗೆ 51 ಲಕ್ಷ ಹಣ ಮತ್ತು ಫಾರ್ಚನರ್ ಕಾರು ಬೇಕು ಎಂದೂ ಡಿಮ್ಯಾಂಡ್ ಇಟ್ಟಿದ್ದಾರೆ. ಇದರಿಂದಾಗಿ ದೊಡ್ಡ ರಾದ್ದಾಂತವೇ ನಡೆದು ಹೋಯಿತು. ಮದುವೆಗೂ (Marriage) ಮುನ್ನ ಹುಡುಗಿಯ ಕಡೆಯವರು ಹುಡುಗನಿಗೆ ಬ್ರೇಜ್ಜಾ ಕಾರು ಮತ್ತು ಹಣ ಕೊಟ್ಟಿದ್ದರು. ಅಷ್ಟು ಪಡೆದುಕೊಂಡು ಕೂಡ ಮತ್ತೆ ಡಿಮ್ಯಾಂಡ್ ಇಟ್ಟದ್ದು ಜನರನ್ನು ಕೂಡ ಕೆರಳಿಸಿದೆ. ಎರಡು ಮನೆಯವರು ಪಂಚಾಯತ್ ಸೇರಿ ಎಲ್ಲಾ ರೀತಿಯ ಮಾತುಕತೆ ನಡೆದರೂ ಏನು ಪ್ರಯೋಜನ ಆಗಿಲ್ಲ. ಪೊಲೀಸ್ ಕೂಡ ಇದರಲ್ಲಿ ಸೇರಿದರು ಕೂಡ ಏನು ಪ್ರಯೋಜನ ಇಲ್ಲ. ಕಡೆಗೆ ಹುಡುಗಿ ಕಡೆಯವರು ಹುಡುಗನ ಮನೆಯವರಿಂದ ಖರ್ಚುದ ಎಲ್ಲಾ ಹಣವನ್ನು ವಸೂಲಿ ಮಾಡಿದ್ದಾರೆ. ಕೊಟ್ಟ ಕಾರನ್ನು ಕೂಡ ವಾಪಸ್ ಕೇಳಿದ್ದಾರೆ. ಎಲ್ಲಾ ಸೇರಿ ಹುಡುಗನ ಕಡೆಯಿಂದ 71 ಲಕ್ಷ ವಸೂಲಿ ಮಾಡಿ ಮನೆಗೆ ಕಳಿಸಿದ್ದಾರೆ.
- Fixed Deposit: ಈ 10 ಬ್ಯಾಂಕ್ ಗಳು 8.30% ರಷ್ಟು Fixed Deposit ಮೇಲೆ ಬಡ್ಡಿ ನೀಡುತ್ತಿವೆ. ಯಾವುದು ಅತಿ ಹೆಚ್ಚು ಇಲ್ಲಿದೆ ಮಾಹಿತಿ.
- Income Tax: ಇವುಗಳಿಗೆ ತೆರಿಗೆ ಇಲ್ಲ! ಐಟಿಆರ್ ಫೈಲಿಂಗ್ ಮಾಡುವ ಮುನ್ನ ತಿಳಿಯಬೇಕಾದ 10 ಅಂಶಗಳು
- IRCTC: 2025 ಜುಲೈ 1ರಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ಗೆ ಆಧಾರ್ ಕಡ್ಡಾಯ: ಸುಲಭವಾಗಿ ಆನ್ಲೈನ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.
- Indian Railway: 2025 ರ ರೈಲ್ವೆ ಇಲಾಖೆಯ ವೆಜ್ ಊಟದ ದರ ಹಾಗೂ ಮೆನು ವಿವರ. ಅಧಿಕ ಹಣ ಕೇಳಿದರೆ ಏನು ಮಾಡಬೇಕು?
- IT Refund: ಈ ವರ್ಷ ಆದಾಯ ತೆರಿಗೆ ಮರುಪಾವತಿ ತಡವಾಗಬಹುದು– ಕಾರಣವೇನು?