EPFO 3.0 ವಿಥ್ಡ್ರಾಲ್ ಬಗೆಗೆ ಮಹತ್ವದ ನಿರ್ಧಾರ! ಏನಿದು ಹೊಸ ಬದಲಾವಣೆ? ನಿಮ್ಮ ಏಟಿಎಂ ಬಳಸಿ ಹಣ ಪಡೆಯಬಹುದು.
ಪ್ರಾವಿಡೆಂಟ್ ಫಂಡ್ ಎಂಬುವುದು ವರ್ಕಿಂಗ್ ಕ್ಲಾಸ್ ಜನರ ಸಂಪಾದನೆಯ ಸೇವಿಂಗ್ ಮಾಡುವುದರಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದೆ. ಇದರಲ್ಲಿ ಒಟ್ಟಾದ ಹಣದಿಂದ ಜೀವನದಲ್ಲಿ ಬದಲಾವಣೆ ಕಂಡು ಕೊಂಡ ಜನರು ಅದೆಷ್ಟೋ. ಇದೀಗ ಸರ್ಕಾರ EPFO 3.0 ಜಾರಿಗೆ ತರುವ ಬಗೆಗೆ ಕ್ಷಿಪ್ರಾ ಗತಿಯಲ್ಲಿ ಕೆಲಸ ಮುಂದುವರೆಸಿದೆ. ಹಾಗಾದರೆ ಏನಿದು EPFO 3.0? ಏನು ಹೊಸದನ್ನು ಇದರಲ್ಲಿ ಸೇರಿಸಲಾಗಿದೆ? ಬನ್ನಿ ತಿಳಿಯೋಣ.
ಈ ಹೊಸ ಯೋಜನೆಯಲ್ಲಿ ಬಹಳಷ್ಟು ಬದಲಾವಣೆ ಬರಲಿದೆ, ಇದರಿಂದ ಜನರಿಗೆ ತುಂಬಾ ಅನುಕೂಲ ಆಗಲಿದೆ ಎಂದೂ ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವಿಯ ಅವರು ಸುದ್ದಿಗೋಷ್ಠಿ ಅಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಇನ್ನೂ ಸರ್ಕಾರಿ ಕಚೇರಿಗಳಿಗೆ ಸುತ್ತುವ ಕೆಲಸ ಕಡಿಮೆ ಆಗುತ್ತದೆ. ಜನರಿಗೆ ಎಲ್ಲವೂ ಸುಲಭದಲ್ಲಿ ಆಗಲಿದೆ ಎಂದೂ ಹೇಳಿದಾರೆ.
ಇನ್ನು ಮುಂದೆ ನಿಮ್ಮ ಬ್ಯಾಂಕ್ ಅಕೌಂಟ್ ತರಹ ವರ್ಕ್ ಆಗಲಿದೆ EPFO ಅಕೌಂಟ್. ಹೌದು ಈ ಹೊಸ ಯೋಜನೆಯ ಪ್ರಕಾರ ಇದೊಂದು ಡಿಜಿಟಲ್ ಸಿಸ್ಟಮ್ ಆಗಿದ್ದು ಇದರಿಂದ ನೀವು PF ಹಣ ತೆಗೆಯುವುದರಲ್ಲಿ ಇನ್ನೂ ಯಾವುದೇ ಕಷ್ಟ ಇಲ್ಲ. ನಿಮ್ಮ ಏಟಿಎಂ ಬಳಸಿ PF ಅಕೌಂಟ್ ನ ಯೂನಿವರ್ಸಲ್ ಅಕೌಂಟ್ ನಂಬರ್ ಬಳಸಿ ನಿಮ್ಮ PF ಹಣವನ್ನು ಏಟಿಎಂ ಮೂಲಕ ಪಡೆಯಬಹದು. ಇನ್ನೂ ಮುಂದೆ ನೀವು ಕಷ್ಟ ಪಟ್ಟು ದುಡಿದ ಹಣ ಪಡೆಯಲು ಸರ್ಕಾರಿ ಕಚೇರಿ ಸುತ್ತಾಡುವ ಕೆಲಸ ಕಡಿಮೆ ಆಗಲಿದೆ ಎಂದೂ ಕಾರ್ಮಿಕ ಸಚಿವರು ಹೇಳಿದ್ದಾರೆ.

ಕೇವಲ ಸೆಕೆಂಡ್ಸ್ ಗಳಲ್ಲಿ ನಿಮ್ಮ PF ಹಣವನ್ನು ನೀವು ವಿಥ್ಡ್ರಾ ಮಾಡಬಹುದು. ಈ ಹಿಂದೆ ಹಣ ಪಡೆಯಲು ಫಾರ್ಮ್ ಭರ್ತಿ ಮಾಡಿ ಸರ್ಕಾರಿ ಕಚೇರಿಗೆ ಕೊಟ್ಟು ಅಲ್ಲಿಂದ ನಂತರ ಅದು ಪ್ರೊಸೆಸ್ ಆಗಲು 15-20 ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಈ ಹೊಸ ಯೋಜನೆಯ ಮೂಲಕ ಎಲ್ಲವೂ ಸುಲಭ ಆಗಲಿದೆ. ಎಲ್ಲವೂ ಸೆಕೆಂಡ್ಸ್ ಸಮಯದಲ್ಜ್ ಆಗುತ್ತದೆ ಎಂದೂ ಎಲ್ಲರೂ ವಿಶ್ಲೇಸಿಸಿದ್ದಾರೆ. ನೀವು ಎಲ್ಲಿ ಬೇಕು ಅಲ್ಲಿ, ಯಾವಾಗ ಬೇಕು ಎಷ್ಟು ಬೇಕು ಅಷ್ಟು ಹಣ ಪಡೆಯಬಹುದು.