Electric Vehicle: ಎಲೆಕ್ಟ್ರಿಕ್ ವಾಹನಗಳ ಬೆಲೆ ಬಗ್ಗೆ ದೊಡ್ಡ ಭರವಸೆ ನೀಡಿದ ನಿತಿನ್ ಗಡ್ಕರಿ. ಇನ್ನು 6 ತಿಂಗಳಲ್ಲಿ ಬದಲಾಗಲಿದೆ ಸಂಪೂರ್ಣ ಚಿತ್ರಣ.
Nitin Gadkari: ಇನ್ನು 6 ತಿಂಗಳೊಳಗೆ ವಿದ್ಯುತ್ಚಾಲಿತ ವಾಹನಗಳ ಬೆಲೆ ಈಗ ಇರುವ ಪೆಟ್ರೋಲ್ ಕಾರಿನ ಬೆಲೆಯಷ್ಟೇ ಸಮಾನಕ್ಕೆ ಬರಲಿದೆ. ಕೇಂದ್ರ ರಸ್ತೆ ಹಾಗು ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಬಗೆಗಿನ ಬೆಲೆ ಬಗ್ಗೆ ಬಹು ದೊಡ್ಡ ಆಶ್ವಾಸನೆ ನೀಡಿದ್ದಾರೆ.
ಸರಕಾರದ ಆಮದು ನಿಯಮದ ಮೇಲೆ ಬಹು ದೊಡ್ಡ ಬದಲಾವಣೆ ಆಗಲಿದೆ. ಇದರಿಂದ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಖರ್ಚು ಮೇಲೆ ಮಹತ್ತರ ಪರಿಣಾಮ ಬೀಳಲಿದೆ. ಪ್ರದೂಷಣೆ ನಿಯಂತ್ರಣ ಹಾಗು ಭಾರತದಲ್ಲೇ ತಯಾರಾಗುವ ಕಾರುಗಳಿಂದ ಈ ಬದಲಾವಣೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ ನಿತಿನ್ ಗಡ್ಕರಿ.

ಭಾರತವನ್ನು ಮೂರನೇ ಅತಿ ದೊಡ್ಡ ಆರ್ಥಿಕತೆ ಮಾಡಬೇಕೆಂದರೆ ಮೊದಲಿಗೆ ಭಾರತದ ಮೂಲಭೂತ ಸೌಕರ್ಯ ಗಮನಾರ್ಹವಾಗಿ ಸುಧಾರಿಸಬೇಕಿದೆ. ರಸ್ತೆಗಳನ್ನು ಮಾಡುವ ಮೂಲಕ ನಾವು ಲಾಜಿಸ್ಟಿಕ್ ಖರ್ಚನ್ನು ಕಡಿಮೆ ಮಾಡುತ್ತಿದ್ದೇವೆ. ಭಾರತದ ಭವಿಷ್ಯ ಉತ್ತಮವಾಗಿದೆ. ಇದಕ್ಕಾಗಿ ಸರಕಾರ ಸ್ಮಾರ್ಟ್ ಸಿಟಿ ಹಾಗು ಸ್ಮಾರ್ಟ್ ಟ್ರಾನ್ಸ್ಪೋರ್ಟ್ ಗಳನ್ನೂ ತಯಾರಿಸುತ್ತಿದೆ.
ವಿದ್ಯುತ್ ಚ್ಛಕ್ತಿಯನ್ನು (Electric vehicle) ಕೂಡ ಉತ್ಪಾದನೆ ಹೆಚ್ಚಿನ ಮಟ್ಟದಲ್ಲಿ ತಯಾರಿಸುತ್ತಿದ್ದೇವೆ. ಅಲ್ಲದೆ ಇದನ್ನು ದೇಶದಾದ್ಯಂತ ಸರಬರಾಜು ಕೂಡ ವೇಗವಾಗಿ ಮಾಡುತ್ತಿದ್ದೇವೆ. ಇದು ಮಾತ್ರವಲ್ಲದೆ ದೇಶದಲ್ಲಿ ಹೊಸ ತಂತ್ರಜ್ಞಾನ ಹಾಗು ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.