ಪ್ರತಿ ಕರೆಯನ್ನು ಕೂಡ ರೆಕಾರ್ಡ್ (Call Record) ಮಾಡುವ ಅಭ್ಯಾಸ ಅನೇಕರಿಗೆ ಇದ್ದೆ ಇದೆ. ಆದರೆ ಇದು ಮಾಡುವುದು ಕಾನೂನು ಪ್ರಕಾರ ತಪ್ಪು (Illegal) . ಇಂತಹ ತಪ್ಪು ಮಾಡಿದರೆ ಅವರಿಗೆ ಕಾನೂನು ಪ್ರಕಾರ ಜೈಲು ಶಿಕ್ಷೆ ಅಂತೂ ಖಚಿತ. ಇದು ತಿಳಿದೋ ತಿಳಿಯದೆಯೋ ಮಾಡುವುದು ಕಾನೂನು ಪ್ರಕಾರ ಅಪರಾಧ.
ಇನ್ನೊಂದು ವಿಷಯ ಗಮನಿಸಬೇಕು ಎನ್ನುವುದಾದರೆ ಈ ಮೊದಲು ಮೊಬೈಲ್ ಗಳಲ್ಲಿ ಕಾಲ್ ರೆಕಾರ್ಡಿಂಗ್ ಸೇವೆ ಲಭ್ಯವಿತ್ತು. ಆದರೆ ಇತ್ತೀಚಿಗೆ ಅದು ನಿಮ್ಮ ಮೊಬೈಲ್ (Mobile) ಗಳಲ್ಲಿ ಲಭ್ಯವಿಲ್ಲ. ಈ ಸೌಲಭ್ಯ ಇರುವ ಮೊಬೈಲ್ ಗಳಿಂದ ಇನ್ನೊಬ್ಬರಿಗೆ ಕಾಲ್ ರೆಕಾರ್ಡ್ ಆಗುವ ಸಂದೇಶ ತಕ್ಷಣ ಗೊತ್ತಾಗುತ್ತದೆ. ಆದ ಕಾರಣ ಕಾಲ್ ರೆಕಾರ್ಡಿಂಗ್ ಮಾಡುವುದು ಅಂದರೆ ಗುಟ್ಟಾಗಿ ರೆಕಾರ್ಡ್ ಮಾಡಲು ಸಾಧ್ಯವಿಲ್ಲ.
ಹೊಸ ಕಾನೂನು ಪ್ರಕಾರ ನೀವು ಯಾರ ಅನುಮತಿಯೂ ಇಲ್ಲದೆ ಅವರ ಕರೆಯನ್ನು ರೆಕಾರ್ಡ್ ಮಾಡಿದರೆ ಅವರು ನ್ಯಾಯಾಲಕ್ಕೆ ಹೋಗಬಹುದಾಗಿದೆ. ಹಾಗೇನೇ ನಿಮ್ಮ ವಿರುದ್ಧ ಅವರು ಕೇಸ್ ಕೂಡ ದಾಖಲಿಸಬಹುದಾಗಿದೆ. ಇದಾದ ನಂತರ ಪೊಲೀಸರು ನಿಮ್ಮ ವಿರುದ್ಧ ಕ್ರಮ ಕೂಡ ಕೈಗೊಳ್ಳಬಹುದಾಗಿದೆ. ನಿಮ್ಮನ್ನು ಬಂಧಿಸುವ ಸಾಧ್ಯತೆ ಕೂಡ ಇದೆ. ಆದ್ದರಿಂದ ನಿಮಗೆ ಈ ಮಾಹಿತಿ ತುಂಬಾ ಮುಖ್ಯವಾಗಿದೆ. ಇದನ್ನು ನಿಮ್ಮ ಸ್ನೇಹಿತರ (Friends) ಬಳಿಯೂ ಹಂಚಿಕೊಳ್ಳಿ.