Kannada Information: ಹೋಟೆಲ್ ಬಗ್ಗೆ ಕೇಳಿದ್ದೀರಿ ಹಾಗೇನೇ ಹೋಗಿದ್ದಿರಿ. ಆದರೆ ಈ ಮೋಟೆಲ್ ಅಂದರೆ ಏನು?

ಹೋಟೆಲ್ (Hotel) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಹಲವು ಬಗೆಯ ಹೋಟೆಲ್ ಇರುತ್ತವೆ. ಕೆಲವು ಕಡೆ ಕೇವಲ ತಿಂಡಿ ಊಟ ಮಾತ್ರ ಇದ್ದಾರೆ ಇನ್ನು ಕೆಲವಡೆ ನಾವು ಆ ಹೋಟೆಲ್ ಗಳಲ್ಲಿ ಒಂದು ದಿನ ಎರಡು ದಿನ ಅಥವಾ ಅದಕ್ಕಿಂತ ಹೆಚ್ಚಿನ ದಿನ ಉಳಿಯಬಹುದು. ಪ್ರತಿ ಹೋಟೆಲ್ ಗಳ ವಿನ್ಯಾಸಗಳು ವಿಭಿನ್ನವಾಗಿರುತ್ತದೆ. ಆದರೆ ಮೋಟೆಲ್ (Motel) ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇದು ಹೋಟೆಲ್ ಗಿಂತ ಯಾವರೀತಿ ಭಿನ್ನ?

ಹಿಂದಿನ ಕಾಲದಲ್ಲಿ ದೂರ ಪ್ರಯಾಣ ಮಾಡುವವರು ಕೆಲವು ಕಡೆ ವಿಶ್ರಾಂತಿ ಪಡೆಯಲು ಟೆಂಟ್ ಹಾಕಿ ಉಳಿಯುತ್ತಿದ್ದರು. ಅದನ್ನೇ ಇಂದು ಹೆದ್ದಾರಿ (National Highways) ಬದಿಯಲ್ಲಿ ಮೋಟೆಲ್ ಎಂದು ಕರೆಯುತ್ತಾರೆ. ಇಲ್ಲಿ ತಿಂಡಿ, ಊಟ ದ ಯಾವುದೇ ವ್ಯವಸ್ಥೆ ಇರುವುದಿಲ್ಲ ಕೇವಲ ಎರಡು ಮೂರೂ ಗಂಟೆ ವಿಶ್ರಾಂತಿ ಪಡೆದು ಪ್ರಯಾಣಿಕರು ಅಲ್ಲಿಂದ ಹೊರಡುತ್ತಾರೆ. ಈ ಮೋಟೆಲ್ (Motel) ಎನ್ನುವ ವ್ಯವಸ್ಥೆ 1930 ರಲ್ಲಿ ಪ್ರಾರಂಭ ಮಾಡಲಾಯಿತು. ಹೋಟೆಲ್ ತರಹದ ವ್ಯವಸ್ಥೆ ಈ ಮೋಟೆಲ್ ಗಳಲ್ಲಿ ಇರುವುದಿಲ್ಲ.

ಭಾರತದಲ್ಲಿ (India) ಈ ಮೋಟೆಲ್ ಎನ್ನುವ ಪದಗಳು ಚಾಲ್ತಿಯಲ್ಲಿ ಇಲ್ಲ. ಕೇವಲ ವಿದೇಶದಲ್ಲಿ ಈ ಪದಗಳನ್ನು ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಡಾಬಾ ಗಳನ್ನೂ ಖಂಡಿತವಾಗಿಯೂ ನೋಡಿರುತ್ತೀರಾ. ದೊಡ್ಡ ದೊಡ್ಡ ಟ್ರಕ್ ಡ್ರೈವರ್ ಗಳು (Truck Drivers) ದೂರ ಪ್ರಯಾಣದ (long Drive) ಸಂದರ್ಭದಲ್ಲಿ ಇಲ್ಲಿ ಇಳಿದು ಸ್ವಲ್ಪ ವಿಶ್ರಾಂತಿ ಪಡೆದು ಹೋಗುತ್ತಾರೆ. ಆದರೆ ನಾವು ಇದನ್ನು ಮೋಟೆಲ್ ಅಂತ ಕೆರೆಯುವುದಿಲ್ಲ. ಮೋಟೆಲ್ (Motel) ಅಂದರೆ ಮೋಟಾರ್ ಹಾಗು ಹೋಟೆಲ್ ನ ಸಮ್ಮಿಶ್ರ ಆಗಿದೆ.

hotelMotel
Comments (0)
Add Comment