Rajouri : ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಿಗೂಡ ಸಾವುಗಳು. ಕಂಟೋನ್ಮೆಂಟ್ ಪ್ರದೇಶ ಎಂದು ಘೂಷಣೆ.
ಡಿಸೆಂಬರ್ 8, 2024 ರಂದು ಜಮ್ಮು ಕಾಶ್ಮೀರದ ರಜೌರಿ (Rajauri) ಜಿಲ್ಲೆಯ ಕೊಟ್ರಂಕಾ ವಿಭಾಗದ ಬುದಾಲ್ ಗ್ರಾಮದಲ್ಲಿ 11 ಮಕ್ಕಳು ಸೇರಿ ಸುಮಾರು 17 ಕ್ಕೂ ಹೆಚ್ಚು ನಿಗೂಡ ಸಾವು ಸಂಭವಿಸಿದೆ. ಇತ್ತೀಚೆಗೆ ಜನವರಿ 17 ರಂದು ವರದಿಯಾಗಿದೆ. ನಿಗೂಡ ಕಾಯಿಲೆಯಿಂದ ಜನರು ಪ್ರಾಣವನ್ನಪ್ಪಿದ್ದಾರೆ ಎಂದು ಅಲ್ಲಿನ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸತ್ತವರ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ದೇಶದ ಅನೇಕ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್ ನೆಗೆಟಿವ್ ಆಗಿ ಕಂಡುಬಂದಿದೆ.
ಈ ನಿಗೂಡ ಸಾವಿನಿಂದಾಗಿ ಈಗಾಗಲೇ ಈ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಇದಕ್ಕಾಗಿ ಈ ಝೋನ್ ನಲ್ಲಿ ವಾಸಿಸುತ್ತಿರುವ ನಾಗರೀಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಅಧಿಕಾರಿಗಳಿಗೆ ಹೇಳಲಾಗಿದೆ. ಅರೋಗ್ಯ ಇಲಾಖೆ ಈಗಾಗಲೇ ಈ ಪ್ರದೇಶದ ಸುಮಾರು 3,500 ನಾಗರೀಕರ ರಕ್ತ ಪರೀಕ್ಷೆ ಮಾಡಲಾಗಿದ್ದು, ಯಾವುದೇ ವೈರಸ್‌ಗಳು ಕಂಡು ಬಂದಿಲ್ಲ. ಇಲ್ಲಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಗೃಹ ಸಚಿವ ಅಮಿತ್ ಷಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಯ ಬಗ್ಗೆ ಮಾಹಿತಿ ಪಡೆದಿದ್ದಾರೆ.