Interesting

TRAI ಹೊಸ ನಿಯಮ: ಇನ್ನು ಮುಂದೆ ನೀವು ರಿಚಾರ್ಜ್ ಮಾಡದೇ ಇಷ್ಟು ದಿನಗಳ ಕಾಲ ನಿಮ್ಮ ಸಿಮ್ ಕಾರ್ಡ್ ಆಕ್ಟಿವ್ ಆಗಿ ಇಡಬಹುದು. ಯಾವುದೇ ಡಿಆಕ್ಟಿವೇಷನ್ ಇಲ್ಲದೆಯೇ.

ಇಂದಿನ ಕಾಲದಲ್ಲಿ ಮೊಬೈಲ್ ಎನ್ನುವುದು ಅದರಲ್ಲೂ ಸ್ಮಾರ್ಟ್ ಫೋನ್ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಅದಿಲ್ಲದೆ ನಾವು ಒಂದು ಗಂಟೆ ಕೂಡ ಇರಲಿಕ್ಕೆ ಆಗುವುದಿಲ್ಲ. ಈ ಸ್ಮಾರ್ಟ್ ಫೋನ್ ನಿಂದಾಗಿ ನಮ್ಮ ಜೀವನದ ಅನೇಕ ಕೆಲಸಗಳು ಸರಳವಾಗಿ ನಡೆಯುತ್ತದೆ. ಆದರೆ ಅದರ ಜೊತೆಗೆ ಈ ಸ್ಮಾರ್ಟ್ ಫೋನ್ ನಿಂದಾಗಿ ಖರ್ಚು ಕೂಡ ಹೆಚ್ಚಾಗುತ್ತಿದೆ. ದುಬಾರಿ ರಿಚಾರ್ಜ್ ಪ್ಲಾನ್ ನಿಂದಾಗಿ ಅದು ಕೂಡ ಪ್ರತಿ ಒಂದು ಅಥವಾ ಮೂರೂ ತಿಂಗಳಿಗೊಮ್ಮೆ ಮಾಡುವುದು ಒಂದು ತಲೆ ನೋವಾಗಿದೆ. ಬಹಳ ಜನರಿಗೆ ರಿಚಾರ್ಜ್ ಅಗತ್ಯಾನೇ ಇರಲ್ಲ ಆದರೂ ಸಿಮ್ ಡಿಆಕ್ಟಿವೇಟ್ ಆಗುತ್ತದೆ ಎನ್ನುವ ಭಯಕ್ಕೆ ಹೊಸ ರಿಚಾರ್ಜ್ ಮಾಡಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಇದೀಗ TRAI ಹೊಸ ನಿಯಮಗಳನ್ನು ಈ ಟೆಲಿಕಾಂ ಆಪರೇಟರ್ ಗಳಿಗೆ ಜಾರಿ ಮಾಡಿದ್ದಾರೆ.

ನೀವು ರಿಚಾರ್ಜ್ ಪ್ಲಾನ್ ಮುಗಿದ ತಕ್ಷಣ ರಿಚಾರ್ಜ್ ಮಾಡದೇ ಹೋದರೆ ಎಷ್ಟು ದಿನಗಳಲ್ಲಿ ಸಿಮ್ ಡಿಆಕ್ಟಿವೇಟ್ ಆಗುತ್ತದೆ ಎನ್ನುವ ಮಾಹಿತಿ ನಿಮಗಿದೆಯೇ? ಬಹಳಷ್ಟು ಜನರಿಗೆ ಈ ಮಾಹಿತಿ ಗೊತ್ತೇ ಇರಲ್ಲ ಅದಕ್ಕೆ ರಿಚಾರ್ಜ್ ಮುಗಿದ ತಕ್ಷಣ ಹೊಸ ರಿಚಾರ್ಜ್ ಮಾಡುತ್ತಾರೆ. ಆದರೆ ಎರಡೆರಡು ಸಿಮ್ ಬಳಸುವವರಿಗೆ ಹೊಸ ರಿಚಾರ್ಜ್ ಎರಡಕ್ಕೂ ಮಾಡಿಸುವುದು ಒಂದು ದೊಡ್ಡ ಸಮಸ್ಯೆಯಾಗಿದೆ.

train news recharge rule

ಆದರೆ ಇತ್ತೀಚಿಗೆ TRAI ಅಂದರೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಈ ಸಿಮ್ ಕಾರ್ಡ್ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಮಾಡಿದೆ. ಮೊಬೈಲ್ ಬಳಕೆ ದಾರರಿಗೆ ಇದೊಂದು ದೊಡ್ಡ ತಲೆನೋವು ಹೋದಂತಾಗಿದೆ. ನಿಮ್ಮ ರಿಚಾರ್ಜ್ ಪ್ಲಾನ್ ಮುಗಿದಿದ್ದರೂ ಕೂಡ ನೀವು ಕೂಡಲೇ ಹೊಸ ರಿಚಾರ್ಜ್ ಮಾಡಲೇ ಬೇಕೆಂದೇನಿಲ್ಲ. ನಿಮ್ಮ ಸಿಮ್ ಕಾರ್ಡ್ ಯಾವುದೇ ಹೊಸ ರಿಚಾರ್ಜ್ ಇಲ್ಲದೇನೆ ಅನೇಕ ತಿಂಗಳುಗಳವರೆಗೆ ಆಕ್ಟಿವ್ ಆಗಿ ಇರುತ್ತದೆ.

jio ಬಳಕೆದಾರರಿಗೆ 90 ದಿನಗಳವರೆಗಿನ ಸೌಲಭ್ಯ ದೊರೆಯುತ್ತದೆ. ಈ ಸಮಯದ ವರೆಗೆ ನೀವು ಯಾವುದೇ ಹೊಸ ರಿಚಾರ್ಜ್ ಮಾಡದೇನೆ ಸಿಮ್ ಅನ್ನು ಆಕ್ಟಿವ್ ಆಗಿ ಇಡಬಹುದು. 90 ದಿನಗಳವರೆಗೆ ನೀವು ಯಾವುದೇ ಬಳಕೆ ಮಾಡದೇ ಹೋದರೆ ನಿಮ್ಮ ಸಿಮ್ ಅನ್ನು 90 ದಿನಗಳ ನಂತರ ಸಂಪೂರ್ಣ ಡಿಆಕ್ಟಿವೇಟ್ ಮಾಡಿ ಆ ನಂಬರ್ ಅನ್ನು ಬೇರೆಯವರಿಗೆ ನೀಡಬಹುದಾಗಿದೆ.

ಇನ್ನು ಏರ್ಟೆಲ್ ಹಾಗು ವಡಾಪೋನ್ ಐಡಿಯಾ ಗೆ ಬಂದರೆ ಇಲ್ಲೂ ಕೂಡ ನೀವು 90 ದಿನಗಳ ವರೆಗೆ ರಿಚಾರ್ಜ್ ಮಾಡದೇ ಸಿಮ್ ಅನ್ನು ಆಕ್ಟಿವ್ ಆಗಿ ಇಡಬಹುದು. 90 ದಿನಗಳ ನಂತರ ಕಂಪನಿ ನಿಮಗೆ ಆಕ್ಟಿವೇಟ್ ಮಾಡಿಕೊಳ್ಳಲು 15 ದಿನಗಳವರೆಗಿನ ಗ್ರೇಸ್ ಪಿರಿಯಡ್ ನೀಡುತ್ತದೆ. ನೀವು ರಿಚಾರ್ಜ್ ಮಾಡದೇ ಹೋದರೆ ನಿಮ್ಮ ಸಿಮ್ ಕಾರ್ಡ್ ಸಂಪೂರ್ಣವಾಗಿ ಡಿಆಕ್ಟಿವೇಟ್ ಆಗುತ್ತದೆ. ಆದರೆ ಸರಕಾರದ ಸ್ವಾಯತ್ತಿನ BSNL ನಲ್ಲಿ ನೀವು 180 ದಿನಗಳವರೆಗೆ ಸಿಮ್ ಅನ್ನು ಆಕ್ಟಿವ್ ಆಗಿ ಇಡಬಹುದಾಗಿದೆ.

Leave a Reply

Your email address will not be published. Required fields are marked *