5G ರೇಸ್ ನಲ್ಲಿ ಗೆದ್ದ JIO. ಹೊಸ ತಂತ್ರಜ್ಞಾನ ತಂದು ಮತ್ತೊಂದು ಟೆಲಿಕಾಂ ಕ್ರಾಂತಿಗೆ ಜಿಯೋ ಸಜ್ಜು. ಏರ್ಟೆಲ್ ಹಾಗು ವಡಾಪೋನ್ ಇನ್ನು 4G ತಂತ್ರಜ್ಞಾನದಲ್ಲಿದೆ.
ರಿಲಯನ್ಸ್ ಜಿಯೋ ತನ್ನ 5G ಗ್ರಾಹಕರಿಗೆ VoNR ಅಂದರೆ ವಾಯ್ಸ್ ಓವರ್ ನ್ಯೂ ರೇಡಿಯೋ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದೆ. VoNR ಒಂದು ಕರೆ ತಂತ್ರಜ್ಞಾನ. ಪ್ರಸ್ತುತವಾಗಿ ರಿಲಯನ್ಸ್ ಜಿಯೋ 5G VoNR ಸೇವೆಯನ್ನು ನೀಡುವ ಏಕೈಕ ಟೆಲಿಕಾಂ ಆಪರೇಟರ್ ಆಗಿದೆ. ಏರ್ಟೆಲ್ ಹಾಗು ವಡಾಪೋನ್ ಇನ್ನು 5G SA (standalone) ನಿಯೋಜಿಸಿಲ್ಲ. 2025 ಆದರೂ ಕೂಡ ಈ ಕಂಪೆನಿಗಳು ತನ್ನ ಗ್ರಾಹಕರಿಗೆ ಈ ಸೇವೆ ನೀಡಲು ಅಸಮರ್ಥವಾಗಿದೆ. ಹಾಗಾಗಿ ನೀವು ಕೂಡ VoNR ಕರೆಯ ಸೇವೆಯನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ Jio ಮಾತ್ರ ಈ ಸೇವೆಯನ್ನು ನಿಮಗೆ ನೀಡಲು ಸಮರ್ಥವಾಗಿದೆ.
VoLTE ಅಂದರೆ ವಾಯ್ಸ್ ಓವರ್ LTE 4G ನೆಟುರ್ಕ್ಗಳಿಗೆ ಸಂಬಂದಿಸಿದ ಕರೆ ತಂತ್ರಜ್ಞಾನವಾಗಿದೆ. ಆದರೆ VoNR 5G ನೆಟ್ವರ್ಕ್ ಗಳ ತಂತ್ರಜ್ಞಾನವಾಗಿದೆ. VoNR ಮೂಲಕ ನೀವು ಉತ್ತಮವಾದ ಕರೆಯ ಅನುಭವ ಪಡೆಯುತ್ತಿರ. ಉತ್ತಮ ಗುಣಮಟ್ಟ ಹಾಗು ಕರೆಯಲ್ಲಿನ ಸ್ಪಷ್ಟತೆ ಉತ್ತಮವಾಗಿರುತ್ತದೆ. ಇದು 5G ಡೇಟಾ ಸಾಮರ್ತ್ಯವನ್ನ ಆದರಿಸಿ ನಿಮಗೆ ಈ ಸೇವೆಯನ್ನು ಒದಗಿಸುತ್ತದೆ. ಆದರೆ VoLTE 4G ಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ.

ಏರ್ಟೆಲ್ ಹಾಗು ಐಡಿಯಾ ವಡಾಪೋನ್ 5G NSA ಅಲ್ಲಿ ಕೆಲಸ ಮಾಡುವುದರಿಂದ ತನ್ನ ಗ್ರಾಹಕರಿಗೆ VoNR ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಜಿಯೋ ಈಗಾಗಲೇ ಈ ಹೊಸ ತಂತ್ರಜ್ಞಾನದ ಸೇವೆಯನ್ನು ಮುಂಬೈ ಹಾಗು ದೆಹಲಿ ಗ್ರಾಹಕರಿಗೆ ನೀಡುತ್ತಿದೆ. ದೇಶದ ಇತರ ನಗರಗಳ್ಳಲ್ಲಿಯೂ ಲಭ್ಯವಿರಬಹುದು. ಪ್ರಸ್ತುತವಾಗಿ ಇದೀಗ ಜಿಯೋ ದಿನಕ್ಕೆ 2GB ಡೇಟಾ ಹಾಗು ಅದಕ್ಕಿಂತ ಹೆಚ್ಚಿನ ಡೇಟಾ ಬಳಸುತ್ತಿರುವ ಗ್ರಾಹಕರಿಗೆ ಉಚಿತವಾಗಿ ಅನಿಯಮಿತವಾಗಿ ನೀಡುತ್ತಿದೆ. idallade ಜಿಯೋ ಹಾಗು ಏರ್ಟೆಲ್ ಕಂಪನಿಗಳು ಉಪಗ್ರಹ ಮೂಲಕ ನೆಟ್ವರ್ಕ್ ಒದಗಿಸುವ ಕೆಲಸದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದೆ.