ಈ ಹಸುವಿನ ಹರಾಜಿನ ಬೆಲೆ ಕೇಳಿದರೆ ಒಂದು ಹಸು ಇಷ್ಟೊಂದು ಬೆಲೆ ಬಾಳುತ್ತದೆಯಾ ಎಂದು ನೀವು ಕೂಡ ಆಶ್ಚರ್ಯ ಪಡುತ್ತೀರಾ. ಬ್ರೆಜಿಲ್ ನಲ್ಲಿ ವಿಯೇಟಿನ-19 (Viatina-19) ಎನ್ನುವ ನಿಲ್ಲೋರ್ ಹಸು ಬರೋಬ್ಬರಿ 4 ಮಿಲಿಯನ್ ಅಂದರೆ ಭಾರತದ ಲೆಕ್ಕಾಚಾರದಲ್ಲಿ ಸುಮಾರು 33 ಕೋಟಿ ಗೆ ಹರಾಜಾಗಿದೆ. ಅಷ್ಟಕ್ಕೂ ಈ ಹಸುವಿನಲ್ಲಿ ಅಂತಹದ್ದೇನಿದೆ ವಿಶೇಷ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಭಾರತದ ಹಿಂದೂ ಧರ್ಮದಲ್ಲಿ ಹಸುವನ್ನು ಕಾಮದೇನು ಎಂದು ಕರೆಯುತ್ತೇವೆ. ಹಾಗೇನೇ ತಾಯಿ ಸ್ಥಾನವನ್ನು ಕೂಡ ಕೊಡುತ್ತೇವೆ. ಈ ಹಸುವಿನ ಪ್ರತಿ ವಸ್ತು ಕೂಡ ಅತ್ಯಂತ ಶ್ರೇಷ್ಠವಾದದ್ದು ಹಾಗೇನೇ ಬೆಲೆ ಬಾಳುವಂತದ್ದು. ಈ ಹಸುಗಳಲ್ಲಿ ಕೂಡ ಹಲವು ತರಹದ ತಳಿಗಳಿವೆ. ಈ ತಳಿಗಳ ಆಧಾರದ ಮೇಲೆ ಅವುಗಳ ವೈಶಿಷ್ಟ್ಯ ರೂಪುಗೊಂಡಿದೆ. ಭಾರತದಲ್ಲಿ ಹೆಸರುವಾಸಿಯಾಗಿರುವ ಭ್ರಾಹ್ಮಣ ಹಸು ಹಾಗು ವಾಗ್ಯೂ ಎನ್ನುವ ಜಪಾನ್ ನ ಹಸುಗಳ ತಳಿಗಳು ಅತಿ ಹೆಚ್ಚು ಬೆಲೆ ಬಾಳುವ ತಳಿಗಳಿಗೆ ಉದಾಹರಣೆಯಾಗಿದೆ. ಇವುಗಳು ಅತಿ ಹೆಚ್ಚಿನ ಶೆಕೆಯಲ್ಲೂ ಕೂಡ ಬದುಕಬಲ್ಲವು. ಇವುಗಳ ತಳಿಗಳನ್ನು ಅತ್ಯಂತ ಶುದ್ಧ ಎಂದು ಕೂಡ ಪರಿಗಣಿಸಲಾಗುತ್ತದೆ.

ಇನ್ನು ಬ್ರೆಜಿಲ್ ನಲ್ಲಿ ಹರಾಜಾದ ಭಾರತದ ಮೂಲದ ವಿಯೇಟಿನ-19 (Viatina-19) ಎನ್ನುವ ಹಸು ಇತಿಹಾಸ ಸೃಷ್ಟಿಸಿದೆ. ಬರೋಬ್ಬರಿ 1,101 ತೂಕವಿರುವ ಈ ಹಸು ಸರಾಸರಿ ಹಸುವಿನ ತೂಕಗಳಿಗಿಂತ ಎರಡು ಪಟ್ಟು ಹೆಚ್ಚಿದೆ. ಇದರ ವೈಶಿಷ್ಟ್ಯಮಯ ಮೈಕಟ್ಟು ಇರುವುದರಿಂದ ಇದರ ಬೆಲೆ ಅತಿ ಹೆಚ್ಚಿನದಾಗಿದೆ. ಈ ಹಸುವನ್ನು ಅತ್ಯಂತ ಸುಂದರ ಹಸುವೆಂದು ಘೋಷಿಸಲಾಗಿದೆ. ಅಲ್ಲದೆ ಇದು ಮಿಸ್ ಸೌತ್ ಅಮೇರಿಕ (Miss south America) ಎನ್ನುವ ಪ್ರಶಸ್ತಿ ಕೂಡ ಪಡೆದಿದೆ. ಇದೆಲ್ಲ ಕಾರಣಕ್ಕೆ ಇದರ ಬೆಲೆ ಬರೋಬ್ಬರಿ 33 ಕೋಟಿ ಗೆ ಏರಿಕೆಯಾಗಿ ಹರಾಜಾಗಿದೆ.
- ಭಾರತದ ಐತಿಹಾಸಿಕ ಜಯ: 127 ವರ್ಷಗಳ ನಂತರ ಪಿಪ್ರಹ್ವಾ ಬುದ್ಧ (Piprahwa Budha) ರೆಲಿಕ್ಸ್ ಭಾರತಕ್ಕೆ ಮರಳಿ ಬಂದಿವೆ! ಇದರ ಮೌಲ್ಯ $100 ಮಿಲಿಯನ್.
- PSU Banks: ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಭಾರತದ ಟಾಪ್ 10 ಭಾರತೀಯ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ.
- UPI: ಇನ್ನು ಮುಂದೆ ಒಟಿಪಿ ಇಲ್ಲದೇನೆ ಹಣ ಮೊಬೈಲ್ ಮೂಲಕ ವರ್ಗಾವಣೆ ಮಾಡಬಹುದು. ಇಲ್ಲಿದೆ ಹೊಸ ನಿಯಮಗಳು.
- Post Office Rule: ನಿಮ್ಮ ಪೋಸ್ಟ್ ಆಫೀಸ್ ಖಾತೆ ನಿಷ್ಕ್ರಿಯ ಗೊಳ್ಳುವ ಸಂಭವ ಇದೆ. ಮ್ಯಾಚ್ಯೂರಿಟಿ ಆದ ನಂತರ ಈ ಕೆಲಸ ಮಾಡುವುದನ್ನು ಮರೆಯಬೇಡಿ.
- Bullet Train: ಮುಂಬೈ-ಅಹಮದಾಬಾದ್ ಹಳಿಯಲ್ಲಿ ಓಡಲ್ಲ ಭಾರತದ ಮೊದಲ ಬುಲೆಟ್ ಟ್ರೈನ್. ಇದರ ಕಾರಣ ತಿಳಿಸಿದ ರೈಲ್ವೆ ಇಲಾಖೆ.