Viatina-19: ವಿಶ್ವದ ಅತ್ಯಂತ ದುಬಾರಿ ಹಸು ನಮ್ಮ ಭಾರತ ಮೂಲದ್ದು. ಬ್ರೆಜಿಲ್ ನಲ್ಲಿ ದಾಖಲೆ ಮೊತ್ತಕ್ಕೆ ಹರಾಜು. ಬೆಲೆ ಕೇಳಿದರೆ ಹುಬ್ಬೇರಿಸುತ್ತಿರ.
ಈ ಹಸುವಿನ ಹರಾಜಿನ ಬೆಲೆ ಕೇಳಿದರೆ ಒಂದು ಹಸು ಇಷ್ಟೊಂದು ಬೆಲೆ ಬಾಳುತ್ತದೆಯಾ ಎಂದು ನೀವು ಕೂಡ ಆಶ್ಚರ್ಯ ಪಡುತ್ತೀರಾ. ಬ್ರೆಜಿಲ್ ನಲ್ಲಿ ವಿಯೇಟಿನ-19 (Viatina-19) ಎನ್ನುವ ನಿಲ್ಲೋರ್ ಹಸು ಬರೋಬ್ಬರಿ 4 ಮಿಲಿಯನ್ ಅಂದರೆ ಭಾರತದ ಲೆಕ್ಕಾಚಾರದಲ್ಲಿ ಸುಮಾರು 33 ಕೋಟಿ ಗೆ ಹರಾಜಾಗಿದೆ. ಅಷ್ಟಕ್ಕೂ ಈ ಹಸುವಿನಲ್ಲಿ ಅಂತಹದ್ದೇನಿದೆ ವಿಶೇಷ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಭಾರತದ ಹಿಂದೂ ಧರ್ಮದಲ್ಲಿ ಹಸುವನ್ನು ಕಾಮದೇನು ಎಂದು ಕರೆಯುತ್ತೇವೆ. ಹಾಗೇನೇ ತಾಯಿ ಸ್ಥಾನವನ್ನು ಕೂಡ ಕೊಡುತ್ತೇವೆ. ಈ ಹಸುವಿನ ಪ್ರತಿ ವಸ್ತು ಕೂಡ ಅತ್ಯಂತ ಶ್ರೇಷ್ಠವಾದದ್ದು ಹಾಗೇನೇ ಬೆಲೆ ಬಾಳುವಂತದ್ದು. ಈ ಹಸುಗಳಲ್ಲಿ ಕೂಡ ಹಲವು ತರಹದ ತಳಿಗಳಿವೆ. ಈ ತಳಿಗಳ ಆಧಾರದ ಮೇಲೆ ಅವುಗಳ ವೈಶಿಷ್ಟ್ಯ ರೂಪುಗೊಂಡಿದೆ. ಭಾರತದಲ್ಲಿ ಹೆಸರುವಾಸಿಯಾಗಿರುವ ಭ್ರಾಹ್ಮಣ ಹಸು ಹಾಗು ವಾಗ್ಯೂ ಎನ್ನುವ ಜಪಾನ್ ನ ಹಸುಗಳ ತಳಿಗಳು ಅತಿ ಹೆಚ್ಚು ಬೆಲೆ ಬಾಳುವ ತಳಿಗಳಿಗೆ ಉದಾಹರಣೆಯಾಗಿದೆ. ಇವುಗಳು ಅತಿ ಹೆಚ್ಚಿನ ಶೆಕೆಯಲ್ಲೂ ಕೂಡ ಬದುಕಬಲ್ಲವು. ಇವುಗಳ ತಳಿಗಳನ್ನು ಅತ್ಯಂತ ಶುದ್ಧ ಎಂದು ಕೂಡ ಪರಿಗಣಿಸಲಾಗುತ್ತದೆ.

ಇನ್ನು ಬ್ರೆಜಿಲ್ ನಲ್ಲಿ ಹರಾಜಾದ ಭಾರತದ ಮೂಲದ ವಿಯೇಟಿನ-19 (Viatina-19) ಎನ್ನುವ ಹಸು ಇತಿಹಾಸ ಸೃಷ್ಟಿಸಿದೆ. ಬರೋಬ್ಬರಿ 1,101 ತೂಕವಿರುವ ಈ ಹಸು ಸರಾಸರಿ ಹಸುವಿನ ತೂಕಗಳಿಗಿಂತ ಎರಡು ಪಟ್ಟು ಹೆಚ್ಚಿದೆ. ಇದರ ವೈಶಿಷ್ಟ್ಯಮಯ ಮೈಕಟ್ಟು ಇರುವುದರಿಂದ ಇದರ ಬೆಲೆ ಅತಿ ಹೆಚ್ಚಿನದಾಗಿದೆ. ಈ ಹಸುವನ್ನು ಅತ್ಯಂತ ಸುಂದರ ಹಸುವೆಂದು ಘೋಷಿಸಲಾಗಿದೆ. ಅಲ್ಲದೆ ಇದು ಮಿಸ್ ಸೌತ್ ಅಮೇರಿಕ (Miss south America) ಎನ್ನುವ ಪ್ರಶಸ್ತಿ ಕೂಡ ಪಡೆದಿದೆ. ಇದೆಲ್ಲ ಕಾರಣಕ್ಕೆ ಇದರ ಬೆಲೆ ಬರೋಬ್ಬರಿ 33 ಕೋಟಿ ಗೆ ಏರಿಕೆಯಾಗಿ ಹರಾಜಾಗಿದೆ.
- IPL 2025 ರ ಸೆಮಿ ಫೈನಲ್ ಗೆ ಅರ್ಹತೆ ಪಡೆಯುವ 4 ತಂಡಗಳನ್ನು ಹೇಳಿದ ಏ ಬಿ ಡಿ ವಿಲಿಯರ್ಸ್. ಚೆನ್ನೈ ಸೇರಿಸದ ವಿಲಿಯರ್ಸ್.
- Electric Vehicle: ಎಲೆಕ್ಟ್ರಿಕ್ ವಾಹನಗಳ ಬೆಲೆ ಬಗ್ಗೆ ದೊಡ್ಡ ಭರವಸೆ ನೀಡಿದ ನಿತಿನ್ ಗಡ್ಕರಿ. ಇನ್ನು 6 ತಿಂಗಳಲ್ಲಿ ಬದಲಾಗಲಿದೆ ಸಂಪೂರ್ಣ ಚಿತ್ರಣ.
- Water Rate Hike: 11 ವರ್ಷಗಳ ನಂತರ ಬೆಂಗಳೂರಿನಲ್ಲಿ ನೀರಿನ ಧರ ಹೆಚ್ಚಳ. ಹೊಸ ಶುಲ್ಕ ಎಷ್ಟಿರಲಿದೆ? ಇಲ್ಲಿದೆ ಮಾಹಿತಿ.
- WTC 2025 (World Test Championship): ಭಾರತ ಇಲ್ಲದ ಫೈನಲ್ ಪಂದ್ಯದ ಆಯೋಜಕರಿಗೆ ಬಾರಿ ನಷ್ಟ? ಇಂಗ್ಲೆಂಡ್ ಕೈಯಿಂದ ಜಾರಿದ ಕೋಟಿ ಕೋಟಿ ಹಣ.
- ICC Champions Trophy 2025: ಭಾರತ ಪಡೆದ ಬಹುಮಾನ ಮೊತ್ತವೆಷ್ಟು ಗೊತ್ತೇ? ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದರೆ ಸುಳ್ಳಲ್ಲ.