Water Rate Hike: 11 ವರ್ಷಗಳ ನಂತರ ಬೆಂಗಳೂರಿನಲ್ಲಿ ನೀರಿನ ಧರ ಹೆಚ್ಚಳ. ಹೊಸ ಶುಲ್ಕ ಎಷ್ಟಿರಲಿದೆ? ಇಲ್ಲಿದೆ ಮಾಹಿತಿ.
ದಶಕದಿಂದ ನೀರಿನ ಧರ ಹೆಚ್ಚಳ (Water Rate Hike) ಬೆಂಗಳೂರಿನಲ್ಲಿ ಇರಲಿಲ್ಲ. ಇದೀಗ ಅದಕ್ಕೆ ಪೂರ್ಣವಿರಾಮ ಬಿದ್ದಿದೆ. ನೀರಿನ ಧರ ಪ್ರತಿ ಲೀಟರ್ ಗೆ 1 ಪೈಸೆ ಹೆಚ್ಚಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 11 ವರ್ಷಗಳ ನಂತರ ಈ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದನ್ನು ಬೆಂಗಳೂರಿನ ಶಾಸಕರೊಂದಿಗೆ ಚರ್ಚಿಸಿದ ನಂತರ ಅಧಿಕೃತ ಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದಕ್ಕಿಂತ ಮೊದಲು ನಷ್ಟ ಸರಿದೂಗಿಸಲು 7-8 ಪೈಸೆ ಹೆಚ್ಚಿಸುವ ಪ್ರಸ್ತಾಪವಿಟ್ಟಿತ್ತು. ಆದರೆ ಇದರಿಂದ ನಾಗರೀಕರು ಪ್ರತಿಭಟನೆ ಮಾಡಬಹುದು ಎಂದು ಡಿ.ಕೆ ಶಿವಕುಮಾರ್ ಮಧ್ಯಪ್ರವೇಶಿಸಿ ಅಷ್ಟು ದೊಡ್ಡ ಹೆಚ್ಚಳ (Water Rate Hike) ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ಆದರೆ ಕನಿಷ್ಠ 1 ಪೈಸೆ ಹೆಚ್ಚಿಸಲು ಸಲಹೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಟೈಮ್ಸ್ ನೌ ವರದಿ ಪ್ರಕಾರ BWSSB ವಾರ್ಷಿಕವಾಗಿ 1000 ಕೋಟಿ ನಷ್ಟ ಅನುಭವಿಸುತ್ತಿದೆ. ಇದಕ್ಕೆ ಕಾರಣ ತೆರಿಗೆ ಕಡಿತ ಹಾಗು ಹೆಚ್ಚಿನ ನೀರಿನ ಖರ್ಚುಗಳು ಎಂದು ಹೇಳಿದ್ದಾರೆ. ಪ್ರತಿ ವರ್ಷ ವಿದ್ಯುತ್ ಬೆಲೆ ಏರಿಕೆ ಆಗುತ್ತದೆ. ಆದ್ದರಿಂದ ಈ ನೀರಿನ ಪಂಪ್ ಗಳ ವಿದ್ಯುತ್ ಬೆಲೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಬೆಲೆ ಏರಿಕೆ ಅವಶ್ಯಕ ಎಂದು ಹೇಳಿದ್ದಾರೆ. ಈ 1 ಪೈಸೆ ಬೆಲೆ ಏರಿಕೆ ಇಂದ ಪ್ರತಿ ಮನೆಯಲ್ಲಿ ಮಾಸಿಕವಾಗಿ 400 ರಿಂದ 500 ರೂಪಾಯಿ ಹೆಚ್ಚುವ (Water Rate Hike) ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.
ವಿಜಯ ಕರ್ನಾಟಕ ವರದಿ ಪ್ರಕಾರ ಜಲಮಂಡಳಿ ಸಲ್ಲಿಸಿರುವ ಪ್ರಸ್ತಾವನೆ ಹೀಗಿದೆ:
ಗ್ರಹ ಬಳಕೆ – 0.8-1.50 ಪೈಸೆ ಪ್ರತಿ ಲೀಟರ್ ಗೆ (ಪ್ರತಿ ಸಾವಿರ ಲೀಟರ್ ಗೆ 15-60 ರೂಪಾಯಿಗಳು)
ಅಪಾರ್ಟ್ಮೆಂಟ್ – 1.8-3.80 ಪೈಸೆ ಪ್ರತಿ ಲೀಟರ್ ಗೆ ( ಪ್ರತಿ ಸಾವಿರ ಲೀಟರ್ ಗೆ 40-60 ರೂಪಾಯಿಗಳು)
ಇತರ ಬಳಕೆಗೆ – 1-1.50 ಪೈಸೆ ಪ್ರತಿ ಲೀಟರ್ ಗೆ ( ಪ್ರತಿ ಸಾವಿರ ಲೀಟರ್ ಗೆ 65-100 ರೂಪಾಯಿಗಳು)
ಕೈಗಾರಿಕೆಗಳು – 1 ಪೈಸೆ ಪ್ರತಿ ಲೀಟರ್ ಗೆ ( ಪ್ರತಿ ಸಾವಿರ ಲೀಟರ್ ಗೆ 100 ರೂಪಾಯಿಗಳು)