Champions Trophy: 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ಯಾಕೆ ಆಡುತ್ತಿಲ್ಲ?
Champions Trophy: ಏಳುವರೆ ವರ್ಷಗಳ ವಿರಾಮದ ನಂತರ 2025 ರಲ್ಲಿ ಮತ್ತೆ ಚಾಂಪಿಯನ್ ಟ್ರೋಫಿ ಆರಂಭವಾಗಲಿದೆ. ಈ ಪಂದ್ಯಗಳು ಪೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಹಾಗು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಆದರೆ ಈ ವರ್ಷದ ಆವೃತ್ತಿಯಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗು ಐರ್ಲೆಂಡ್ ಆಡುತ್ತಿಲ್ಲ.
ವೆಸ್ಟ್ ಇಂಡೀಸ್ ತಂಡವು 2017 ಹಾಗು 2025 ರ ಎರಡೂ ಆವೃತ್ತಿಯಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಶ್ರೀಲಂಕಾ ಕೂಡಾ ಈ ಟ್ರೋಫಿ ಗೆ ಅರ್ಹತೆ ಪಡೆದಿಲ್ಲ. ಇನ್ನು ಚಾಂಪಿಯನ್ ಟ್ರೋಫಿಯ (Champions Trophy) ಎಲ್ಲಾ 9 ಆವೃತ್ತಿಯಲ್ಲಿ ಕಾಣಿಸಿಕೊಂಡ ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗು ಪಾಕಿಸ್ತಾನ ಸೇರಿದೆ. ಪಾಕಿಸ್ತಾನ ಈ ಬಾರಿ ಆತಿಥ್ಯ ವಹಿಸಿಕೊಂಡಿರುವುದರಿಂದ ಚಾಂಪಿಯನ್ ಟ್ರೋಫಿ ಗೆ ಅರ್ಹತೆ ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಹಾಗು ಬಾಂಗ್ಲಾದೇಶ ಗಳು 2023 ರ ಅಗ್ರ 7 ಸ್ಥಾನಗಳಲ್ಲಿ ಕಾಣಿಸಿಕೊಂಡ ತಂಡಗಳಾಗಿವೆ.

ಬಾಂಗ್ಲಾದೇಶ ನಿವ್ವಳ ರನ್ ರೇಟ್ ವಿಶ್ವ ಕಪ್ 2023 ರಲ್ಲಿ (-1.087) ಆಗಿತ್ತು ಆದರೆ ಶ್ರೀಲಂಕಾ ರನ್ ರೇಟ್ (-1.419) ಆಗಿತ್ತು. ಇದರಲ್ಲಿ ಬಾಂಗ್ಲಾದೇಶ ದ ರನ್ ರೇಟ್ ಶ್ರೀಲಂಕಾ ಗಿಂತ ಉತ್ತಮವಾಗಿದ್ದರಿಂದ ಎಂಟನೇ ಸ್ಥಾನ ಗಳಿಸಿದೆ. ವಿಶ್ವ ಕಪ್ (World Cup) ನಂತರ ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. 15 ಪಂದ್ಯಗಳನ್ನು ಗೆದ್ದು 5 ರಲ್ಲಿ ಸೋತಿದೆ. ಸನತ್ ಜಯಸೂರ್ಯ ಶ್ರೀಲಂಕಾ ತರಬೇತುದಾರ ಆದ ನಂತರ 9 ರಲ್ಲಿ ಗೆದ್ದು 3 ರಲ್ಲಿ ಸೋತಿದೆ. ಭಾರತ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಹಾಗು ಆಸ್ಟ್ರೇಲಿಯಾ ವಿರುದ್ದ ಸರಣಿ ಗೆಲುವುಗಳನ್ನು ದಾಖಲಿಸಿದೆ. ಆದರೆ ಚಾಂಪಿಯನ್ ಟ್ರೋಫಿ (Champions Trophy) ಅರ್ಹತೆ ಪಡೆಯಲು ಈ ಮಾನದಂಡ ಆಗುವುದಿಲ್ಲ. ಇದರಿಂದ ಶ್ರೀಲಂಕಾ ಈ ಬಾರಿ ಆಡುತ್ತಿಲ್ಲ.