Interesting

Water Bottle: ಮಿನರಲ್ ವಾಟರ್ ಬಾಟಲ್‌ಗಳಲ್ಲಿನ ಮುಚ್ಚಳಗಳು ವಿಭಿನ್ನ ಬಣ್ಣಗಳಲ್ಲಿ ಏಕೆ ಇರುತ್ತದೆ? ಯಾವ ಬಣ್ಣದ ನೀರು ಉತ್ತಮ?

Water Bottle: ನೀರು ಮನುಷ್ಯನ ಜೀವನದಲ್ಲಿ ಒಂದು ಅಗತ್ಯವಾದ ಭಾಗವಾಗಿದೆ. ಮನುಷ್ಯನ ದೇಹದಲ್ಲಿ ಕೂಡಾ ನೀರಿನ ಅಂಶವೇ ಅತೀ ಹೆಚ್ಚಾಗಿ ಕೂಡಿರುತ್ತದೆ. ಆದ ಕಾರಣ ಮನುಷ್ಯ ತನ್ನ ದೇಹದಲ್ಲಿ ನೀರಿನ ಪ್ರಮಾಣವನ್ನು ಸ್ಥಿರವಾಗಿಡಲು ನೀರು ಸದಾ ಕುಡಿಯುತ್ತಿರುತ್ತಾನೆ. ಪ್ರಯಾಣ ಮಾಡುವಾಗ ಅನೇಕರು ನೀರಿನ ಬಾಟಲ್ ಖರೀದಿ ಮಾಡಿ ಹೋಗುತ್ತಾರೆ. ಆದರೆ ಈ ವಾಟರ್ ಬಾಟಲ್ ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಾಟರ್ ಬಾಟಲ್ ಗಳ ಮುಚ್ಚಳ ಬೇರೆ ಬೇರೆ ಬಣ್ಣದ್ದಾಗಿರುತ್ತದೆ.

ಈ ನೀರಿನ ಅಥವಾ ತಂಪು ಪಾನೀಯಗಳ ಅಂಗಡಿಗಳಲ್ಲಿ ನೀವು ಹೋದರೆ ಅಲ್ಲಿ ನೀರಿನ ಬಾಟಲ್ (Water Bottle) ಗಮನಿಸಿದರೆ ಅವುಗಳ ಮುಚ್ಚಳ ನೀಲಿ, ಹಸಿರು, ಕೆಂಪು ಹಾಗು ಕಪ್ಪು ಬಣ್ಣದ್ದಾಗಿರುತ್ತದೆ. ಈ ಮುಚ್ಚಳಗಳು ಕೇವಲ ಡಿಸೈನ್‌ಗಾಗಿ ಮಾಡಿದ್ದಲ್ಲ, ಬದಲಾಗಿ ಇದರ ಹಿಂದೆ ನೀರಿನ ಗುಣಮಟ್ಟ ಹಾಗು ನಿಮ್ಮ ಆರೋಗ್ಯದ ಹಿತದೃಷ್ಟಿಯೂ ಕೂಡಾ ಇದೆ.

ನೀರಿನ ಗುಣಮಟ್ಟದ ಬಗ್ಗೆ ಸಂವಹನ ಮಾಡಲು ತಯಾರಕರು ಈ ಬಣ್ಣ ಬಣ್ಣದ ಮುಚ್ಚಳಗಳನ್ನು ಬಳಸುತ್ತಾರೆ. ನೀಲಿ ಬಣ್ಣದ ಮುಚ್ಚಳುಗಳು ನೀರು ಕಠಿಣ ಶುದ್ದೀಕರಣಕ್ಕೆ ಒಳಪಟ್ಟಿದೆ ಎನ್ನುವುದನ್ನು ಸೂಚಿಸುತ್ತದೆ. ಹಾಗೆನೇ ಇದು ಅತ್ಯುನ್ನತ ಗುಣಮಟ್ಟ ಹೊಂದಿದೆ ಎನ್ನುವುದನ್ನು ಸೂಚಿಸುತ್ತದೆ.

water bottle

ಇನ್ನು ಹಸಿರು ಬಣ್ಣದ ಮುಚ್ಚಳಗಳ ನೀರುಗಳು ನೈಸರ್ಗಿಕ ಬುಗ್ಗೆಗಳಿಂದ ಪಡೆಯಲಾಗಿದೆ ಎಂದು ಸೂಚಿಸುತ್ತದೆ. ಇದರ ರುಚಿಯು‌ ಕೂಡಾ ತುಂಬಾ ಚೆನ್ನಾಗಿರುತ್ತದೆ. ಕೆಂಪು ಬಣ್ಣದ ಮುಚ್ಚಳ ದ ನೀರು ಅಧಿಕ Ph ಹೊಂದಿರುವ ಕ್ಷಾರೀಯ ನೀರಾಗಿದೆ. ಇದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇನ್ನು ಕಪ್ಪು ಬಣ್ಣದ ಮುಚ್ಚಳ ಹೊಂದಿರುವ ಬಾಟಲ್ ಗಳಲ್ಲಿ (Water Bottle) ಉತ್ಸಾಹಭರಿತರನ್ನಾಗಿಸಲು ಇದರಲ್ಲಿ‌ ಕೆಲ ಪ್ಲೇವರ್‌ಗಳನ್ನು ಸೇರಿಸಲಾಗಿದೆ ಎಂದರ್ಥ.

ಇನ್ನು ಕೆಲವು ಬಾಟಲ್ ಮುಚ್ಚಳಗಳಲ್ಲಿ ಯಾವುದೇ ಬಣ್ಣ ಇರುವುದಿಲ್ಲ ಟ್ರಾನ್ಸ್ಪರೆಂಟ್ ಆಗಿರುತ್ತದೆ. ಇದರರ್ಥ ಇದು ಕುಡಿಯಲು ಯೋಗ್ಯವಾಗಿಲ್ಲ ಅಂತೇನಿಲ್ಲ, ಬದಲಾಗಿ‌ ಇದು ನೈಸರ್ಗಿಕವಾಗಿ ಹರಿವ ಸಂಗ್ರಹಿಸಿದ ನೀರಾಗಿರುತ್ತದೆ.

Leave a Reply

Your email address will not be published. Required fields are marked *