ಅಂಗವಿಕಲತೆಯಿಂದ ಎದೆಗುಂದದೆ ಸಾಲ ಮಾಡಿ ತೆರೆದ ಉದ್ಯಮದಿಂದ ಇವತ್ತು ಕೋಟಿಗಟ್ಟಲೆ ಸಂಪತ್ತಿನ ಒಡೆಯರಾಗಿದ್ದಾರೆ.

1,856

ನಮ್ಮ ಸುತ್ತ ಮುತ್ತ ಅನೇಕ ಜನರನ್ನು ನಾವು ಗಮನಿಸಿರುತ್ತೇವೆ. ದೇವರ ದಯೆಯಿಂದ ಎಲ್ಲವು ಸಿಕ್ಕಿರುತ್ತದೆ. ಆದರೆ ಯಾವುದನ್ನೂ ಸರಿಯಾಗಿ ಬಳಸಿಕೊಳ್ಳದೆ ದೇವರ ಮೇಲೆ ಹಾಗು ಅದೃಷ್ಟ ಸರಿ ಇಲ್ಲ ಎಂದು ಕೆಲಸ ಮಾಡದೇ ತಿರುಗುವವರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ತಾನು ಪೋಲಿಯೋದಿಂದ ಅಂಗವಿಕಲರಾದರು ಅದನ್ನು ದೌರ್ಬಲ್ಯ ಎಂದು ಭಾವಿಸದೆ ಸಾಲ ಮಾಡಿ ಪ್ರಾರಂಭಿಸಿದ ಉದ್ಯಮದಿಂದ ಇಂದು ಕೋಟಿಗಟ್ಟಲೆ ಸಂಪತ್ತಿನ ವಾರೀಸುದಾರರಾಗಿದ್ದರೆ. ಇಂತವರ ಜೀವನಗಾಥೆ ನಮ್ಮಂತಹ ಯುವಕರಿಗೆ ಸ್ಪೂರ್ತಿಯಾಗಿದೆ.

ರಾಮಚಂದ್ರ ಅಗರ್ವಾಲ ಎನ್ನುವವರು ನಮ್ಮ ನಿಮ್ಮಂತೆಯೇ ಸಾಮಾನ್ಯ ಕುಟುಂಬದಲ್ಲಿಯೇ ಜನಿಸಿದವರು. ಪೋಲಿಯೊ ದಿಂದ ಅಂಗವಿಕಲರಾದರು. ಮನೆಯವರು ಮಗನ ಅರೋಗ್ಯ ವೃದ್ಧಿಗೆ ಸಾಕಷ್ಟು ಪ್ರಯತ್ನ ಪಟ್ಟರು ಆದರೆ ಯಾವುದೇ ಪ್ರಯತ್ನ ಸಫಲವಾಗಲಿಲ್ಲ. ಮನೆಯವರು ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಆದರೆ ರಾಮಚಂದ್ರ ಅವರ ತಲೆಯಲ್ಲಿ ಬೇರೆಯದೇ ಯೋಚನೆ ಓಡಾಡುತಿತ್ತು. ಬಡವನಾಗಿ ಹುಟ್ಟಿ ಅಂಗವಿಕಲನಾಗಿದ್ದರು ಕೂಡ ಸಮಾಜದಲ್ಲಿ ಒಂದು ಒಳ್ಳೆಯ ಹೆಸರು ಮಾಡಬೇಕೆಂಬ ಛಲ ಇವರಲ್ಲಿತ್ತು.

ಇದಕ್ಕಾಗಿ ಅವರು ತಮ್ಮ ಬಾಲ್ಯದಲ್ಲಿಯೇ ಕಷ್ಟಪಟ್ಟು ಶೈಕ್ಷಣಿಕವಾಗಿ ಸದೃಢರಾಗಲು ನಿರ್ಧರಿಸಿದರು. ಉತ್ತಮ ಶ್ರೇಣಿಯಲ್ಲಿ ಪಾಸ್ ಆದರು. ಅವರ ಶೈಕ್ಷಣಿಕ ಹಂತದ ನಂತರ ಮನೆಯವರ ಆರ್ಥಿಕ ಬೆಂಬಲಕ್ಕೆ ಕೆಲಸಕ್ಕೆ ಹೋಗಲು ನಿರ್ಧರಿಸಿ, ಅನೇಕ ಕಡೆ ಸಂದರ್ಶನಕ್ಕೆ ಹೋದರು. ಆದರೆ ಅದೃಷ್ಟ ಅವರಿಗೆ ಒಲಿಯಲಿಲ್ಲ. ಎಲ್ಲಿ ಹೋದರು ಅಂಗವಿಕಲ ಎನ್ನುವ ಕಾರಣಕ್ಕೆ ಎಲ್ಲೂ ಕೆಲಸ ದೊರಕಲಿಲ್ಲ. ರಾಮಚಂದ್ರ ಅವರಿಗೆ ಇದೆ ಕಷ್ಟದ ಸಮಯವಾಗಿತ್ತು. ಆದರು ಅವರು ಯಾವುದೇ ದೃತಿಗೆಡದೆ ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ.

ತಾನೇ ಒಂದು ಸ್ವಂತ ಉದ್ಯಮ ಮಾಡಲು ನಿರ್ಧರಿಸಿದರು. 1986 ರಲ್ಲಿ ತನ್ನ ಸ್ನೇಹಿತರ ಬಳಿ ಸಾಲ ಮಾಡಿ ಒಂದು ಅಂಗಡಿ ತೆರೆದರು. ಇದು ರಾಮಚಂದ್ರ ಅವರ ಯಶಸ್ಸಿನ ಮೊದಲ ಹೆಜ್ಜೆಯಾಯಿತು. ೧೯೯೪ ರ ನಂತರ ಫೋಟೋಕಾಪಿ ಶಾಪ್ ತೆರೆದರು. ನಂತರ ಜವಳಿ ಉದ್ಯಮಕ್ಕೆ ದಾಪುಗಾಲು ಹಾಕಿದರೂ. ಕೋಲ್ಕತ್ತಾದಲ್ಲಿ ಬಟ್ಟೆ ಅಂಗಡಿ ತೆರೆಯುವ ಮೂಲಕ ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಸುಮಾರು ೧೫ ವರ್ಷಗಳ ಕಾಲ ಇದೆ ಉದ್ಯಮ ಮಾಡುತಿದ್ದರು.

೨೦೦೧-೨೦೦೨ ರಲ್ಲಿ ವಿಶಾಲ್ ರಿಟೇಲ್ ಗೆ ಅಡಿಪಾಯ ಹಾಕಿದರೂ ರಾಮಚಂದ್ರ ಅಗರ್ವಾಲ್. ನೋಡನೋಡುತ್ತಲೇ ಬಿಸಿನೆಸ್ ಪ್ರಪಂಚದಲ್ಲಿ ರಾಮಚಂದ್ರ ಅಗರ್ವಾಲ್ ಅವರ ಹೆಸರು ಅತಿ ಎತ್ತರಕ್ಕೆ ಬೆಳೆಯಿತು. ಮುಂದಿನ ದಿನಗಳಲ್ಲಿ ಮೆಗಾ ಮಾರ್ಟ್ ತೆರೆದರು. ಆ ಮೂಲಕ ಕೋಟ್ಯಂತರ ರೂಪಾಯಿಯ ಮಾಲೀಕರಾದರು. ಇಷ್ಟು ಮಾತ್ರ ಅಲ್ಲದೆ ಇದೆ ಸಮಯದಲ್ಲಿ ಸ್ವಲ್ಪ ಹಿನ್ನಡೆ ಕೂಡ ಅನುಭವಿಸಿದರು. ತನ್ನ ಮೆಗಾ ಮಾರ್ಟ್ ದಿವಾಳಿ ಆಗುವ ಹಂತದಲ್ಲಿತ್ತು. ಅದೇ ಸಮಯದಲ್ಲಿ ಶ್ರೀರಾಮ್ ಗ್ರೂಪ್ ರಾಮಚಂದ್ರ ಅವರ ಒಡೆತನದ V2 ಕಂಪನಿ ಯಾ ಪಾಲನ್ನು ಖರೀದಿಸಿತು, ಹೀಗೆ ರಾಮಚಂದ್ರ ದಿವಾಳಿ ಆಗುವುದರಿಂದ ಬಚಾವಾದರು. ಇಂದು ದೇಶದ ೩೨ ನಗರಗಳಲ್ಲಿ V2 ಮಳಿಗೆಗಳಿವೆ.

Leave A Reply

Your email address will not be published.