ಅಂಗಾಂಗ ಇಲ್ಲದಿದ್ದರೂ ಕೂಡ ದುಡಿಯುವ ಛಲ ಬಿಡಲಿಲ್ಲ ಈ ದಿವ್ಯಂಗ ಯುವಕ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದದ್ದೇ ತಡ ಸಹಾಯ ಮಾಡಲು ಮುಂದೆ ಬಂದ ಆನಂದ್ ಮಹಿಂದ್ರಾ?

338

ಆನಂದ್ ಮಹೀಂದ್ರಾ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ. ಮಹೀಂದ್ರಾ ಸಂಸ್ಥೆಯ ಮಾಲೀಕರು. ಸದಾ ಒಂದಿಲ್ಲ ಒಂದು ವಿಷಯದಲ್ಲಿ ಚರ್ಚೆಯಲ್ಲಿ ಇರುತ್ತಾರೆ. ಸದಾ ತಮ್ಮ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಇವರು ಅದೆಷ್ಟೋ ವಿಚಾರಗಳನ್ನು ಹಂಚಿ ಕೊಳ್ಳುತ್ತಾರೆ. ಅದೆಷ್ಟೋ ಜನರಿಗೆ ಸಹಕಾರ ನೀಡಿದ್ದಾರೆ, ಸಹಾಯ ಮಾಡಿದ್ದಾರೆ. ಇಂದು ನಾವು ತಿಳಿಯಲು ಹೊರಟ ವಿಚಾರ ಕೂಡ ಅಂತಹುದೇ ಅಂದು ಅವರು ಹೇಳಿಕೊಂಡ ಹಾಗೆ ಇಂದು ನಡೆದು ಕೊಂಡಿದ್ದಾರೆ.

ಆ ವಿಕಾಲಾಂಗ ವ್ಯಕ್ತಿಯ ಹೆಸರು ಬಿರ್ಜು, ಇವರು ದೆಹಲಿಯ ನಿವಾಸಿ. ಇವರಿಗೆ ಎರಡು ಕಾಲು ಎರಡು ಕೈ ಇಲ್ಲ. ಆದರೂ ದುಡಿದೆ ತಿನ್ನುತ್ತೇನೆ ಎಂಬುವುದು ಇವರ ಛಲ. ಮೊಡಿಫಿಕೇಷನ್ ಮಾಡಿರುವಂತಹ ಒಂದು ಬೈಕ್ ನಲ್ಲಿ ಇವರು ಸರಕು ಸಾಗಣೆ ಮಾಡುತ್ತಾ ಇರುತ್ತಾರೆ. ಆ ಬೈಕ್ ಅನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾಡಿಕೊಂಡಿದ್ದರು. ಇದನ್ನು ಯಾರೋ ದಾರಿ ಹೋಕರು ಕಂಡು ನಿಲ್ಲಿಸಿ ಅವರನ್ನು ಮಾತನಾಡಿಸಿ ವಿಡಿಯೋ ಒಂದನ್ನು ಮಾಡಿದ್ದರು. ಅದರಲ್ಲಿ ಇವರು ಹೇಳಿದ್ದರು ತಾನು ಎಲ್ಲೂ ಬಿಕ್ಷೆ ಬೇಡುವುದಿಲ್ಲ ತನ್ನ ಸ್ವಂತ ದುದಿದ್ಮೆಯಲ್ಲಿ ಹೆಂಡತಿ ಮಕ್ಕಳು ಮತ್ತು ವೃದ್ದ ತಂದೆಯನ್ನು ಸಾಕುತ್ತೇನೆ ಎಂದು. ಇದು ಇಡೀ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು.

ಇದನ್ನೇ ಅಂದು ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಅವರನ್ನು ಹೊಗಳಿದ್ದು , ತಾನು ಈ ಬೀರ್ಜು ಎಂಬವರಿಗೆ ಸಹಾಯ ಮಾಡಲು ಬಯಸುತ್ತೇನೆ ಯಾರಾದರೂ ಇವರ ಬಗ್ಗೆ ಗೊತ್ತಿದ್ದಲಿ ತಿಳಿಸಿ ಎಂದು. ಆದರೆ ಇದಕ್ಕೆ ಅದೆಷ್ಟೋ ಜನ ಲೇವಡಿ ಮಾಡಿದ್ದರು. ಆದರೆ ಇಂದು ಆನಂದ್ ಮಹೀಂದ್ರಾ ಅವರ ತಂಡದ ಸದಸ್ಯರು ಅವರನ್ನು ಪತ್ತೆ ಹಚ್ಚಿ ಅವರಿಗೆ ದೆಹಲಿಯ ಮಹೀಂದ್ರಾ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಒಂದರಲ್ಲಿ ಉದ್ಯೋಗ ಒದಗಿಸಿದ್ದು , ಅವರು ಹೇಳಿದ ಹಾಗೆ ಇಂದು ನಡೆದು ಕೊಂಡರು. ಅಂದು ಲೇವಡಿ ಮಾಡಿದ್ದಾರೆ ಜನರೆಲ್ಲ ಇಂದು ಸುಮ್ಮನಾಗಿದ್ದಾರೆ. ಅದೇನೇ ಇರಲಿ ಇಂತಹ ಕೆಲಸಗಳಿಂದ ಜನರಿಗೆ ಹತ್ತಿರ ಆಗುತ್ತಾರೆ. ಇಂತಹ ಒಳ್ಳೆಯ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹಾರೈಸೋಣ.

Leave A Reply

Your email address will not be published.