ಅಂದಿನ ಪ್ರಸಿದ್ಧ ಪ್ರವಾಸಿ ತಾಣ ಇಂದು ದೇಶದ ಅಂತ್ಯಂತ ಭಯಾನಕ ಪ್ರದೇಶಗಳಲ್ಲಿ ಒಂದು. ಯಾವುದು ಆ ಪ್ರದೇಶ?
ಭಾರತ ಎಂದ ಕೂಡಲೇ ನೆನಪಾಗುವುದು ಪ್ರವಾಸಿ ತಾಣಗಳು. ಅದೆಷ್ಟೋ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಇದನ್ನು ನೋಡಲೆಂದೇ ಹಲವಾರು ದೇಶಗಳಿಂದ ಜನರು ಇಲ್ಲಿಗೆ ಪ್ರವಾಸ ಬರುತ್ತಾರೆ. ಅಂತಹುದೇ ಒಂದು ಸುಪ್ರಸಿದ್ದ ಪ್ರವಾಸಿ ತಾಣ ಇದೆ. ಇದು ಒಂದು ಕಾಲದಲ್ಲಿ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು, ಆದರೆ ಇಂದು ಇಲ್ಲಿ ಸಂಜೆ ಆದ ತಕ್ಷಣ ಯಾರು ನಿಲ್ಲಲು ಬಯಸುವುದಿಲ್ಲ. ಎಲ್ಲರೂ ಹೆದರಿ ಮನೆ ಸೇರುತ್ತಾರೆ. ಹೌದು ಯಾವುದು ಆ ಸ್ಥಳ ಬನ್ನಿ ತಿಳಿಯೋಣ.
ರಾಮೇಶ್ವರಂ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇದು ಪ್ರಾವಸಿ ತಾಣಗಳಲ್ಲಿ ಒಂದು. ಭಾರತದ ಅತ್ಯಂತ ಕಡೆಯ ಪಾಯಿಂಟ್ ಎಂದು ಇದನ್ನು ಕರೆಯುತ್ತಾರೆ. ಇದರ ನಂತರ ಸಮುದ್ರ ಆವರಿಸಿದ್ದು ಅದರಾಚೆ ಶ್ರೀಲಂಕಾ ಇದೆ. ಹೌದು ಆ ಪ್ರದೇಶ ಮತ್ಯಾವುದೋ ಅಲ್ಲ ರಾಮೇಶ್ವರಂ ನ ದನುಷ್ಕೊಡಿ. ಹೌದು ಇದು ಭಾರತದ ಕೊನೆಯ ಭೂ ಭಾಗ. ಇಲ್ಲಿಂದಲೇ ಶ್ರೀರಾಮ ಮತ್ತು ಸೇನೆ ಲಂಕಾಗೆ ಸೇತುವೆ ಕಟ್ಟಿತ್ತು. ಹಾಗಾದರೆ ಇಲ್ಲಿನ ಈ ಪ್ರದೇಶ ಭಯಾನಕ ಆಗಿದ್ದು ಹೇಗೆ ಬನ್ನಿ ತಿಳಿಯೋಣ.
1964 ರಲ್ಲಿ ಇಲ್ಲಿ ಸುನಾಮಿ ಒಂದು ಅಪ್ಪಳಿಸಿತು. ಈ ಸುನಾಮಿಯ ತೀವ್ರತೆಗೆ 200 ಜನರಿದ್ದ ರೈಲು ಸಮುದ್ರದಲ್ಲಿ ಮುಳುಗಡೆ ಆಗಿತ್ತು. ಅಂದಿನಿಂದ ಇಂದಿನವರೆಗೂ ಅಲ್ಲಿನ ಆ ಪಾಳು ಬಿದ್ದ ಸ್ಥಳಗಳು ಹಾಗೆ ಇದೆ. ಪ್ರವಾಸಿಗರು ಇಲ್ಲಿ 6 ಗಂಟೆಯ ನಂತರ ಯಾರು ನಿಲ್ಲುವುದಿಲ್ಲ. ಅಲ್ಲಿನ ಸ್ಥಳೀಯರು ಕತ್ತಲಾಗುತ್ತಿದ್ದಂತೆ ಎಲ್ಲರನ್ನೂ ಹೋಗಲು ಹೇಳುತ್ತಾರೆ. ಅದೇನೇ ಇರಲಿ ನಂಬಿಕೆಯೋ ಅಥವಾ ಮೂಡ ನಂಬಿಕೆಯೋ ನಮಗೆ ಗೊತ್ತಿಲ್ಲ ಆದರೆ ಜೀವನದಲ್ಲಿ ಒಮ್ಮೆಯಾದರೂ ಈ ಸ್ಥಳವನ್ನು ಎಲ್ಲರೂ ನೋಡಲೇಬೇಕು.